ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND Vs NZ 1st ODI: ಶಾರ್ದೂಲ್ ಠಾಕೂರ್ ಕೊನೆ ಓವರ್ ಮ್ಯಾಜಿಕ್: ರಣರೋಚಕ ಪಂದ್ಯದಲ್ಲಿ ಗೆದ್ದ ಭಾರತ

IND vs NZ 1st ODI : Team India Won Last Over Thriller Against New Zealand By 12 Runs

ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಭಾರತ ತಂಡ 12 ರನ್‌ಗಳಿಂದ ಗೆಲುವು ಸಾಧಿಸಿದೆ. ಒಂದು ಕ್ಷಣದಲ್ಲಿ ಇಡೀ ಕ್ರಿಕೆಟ್ ಅಭಿಮಾನಿಗಳ ಉಸಿರು ಬಿಗಿಹಿಡಿಯುವಂತೆ ಮಾಡಿದ ಪಂದ್ಯವನ್ನು, ಶಾರ್ದೂಲ್ ಠಾಕೂರ್ ಭಾರತಕ್ಕೆ ಗೆದ್ದುಕೊಟ್ಟರು.

ಭಾರತ ನೀಡಿದ 350 ರನ್‌ಗಳ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ 49.2 ಓವರ್ ಗಳಲ್ಲಿ 337 ರನ್‌ ಗಳಿಸಿ ಆಲೌಟ್ ಆಗುವ ಮೂಲಕ ಕೊನೆಯ ಹಂತದಲ್ಲಿ ಮ್ಯಾಚ್‌ ಕೈಚೆಲ್ಲಿದರು. ಮೈಕೆಲ್ ಬ್ರೇಸ್‌ವೆಲ್‌ ಸ್ಫೋಟಕ ಶತಕ ಸಿಡಿಸುವ ಮೂಲಕ ಭಾರತ ತಂಡದ ಎದೆಬಡಿತವನ್ನು ಹೆಚ್ಚಿಸಿದರು.

ಶುಬ್ಮನ್ ಗಿಲ್ ದ್ವಿಶತಕ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಿಲ್ ಮುರಿದ 5 ಪ್ರಮುಖ ದಾಖಲೆಗಳುಶುಬ್ಮನ್ ಗಿಲ್ ದ್ವಿಶತಕ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಿಲ್ ಮುರಿದ 5 ಪ್ರಮುಖ ದಾಖಲೆಗಳು

78 ಎಸೆತಗಳಲ್ಲಿ 12 ಬೌಂಡರಿ 10 ಭರ್ಜರಿ ಸಿಕ್ಸರ್ ನೆರವಿನಿಂದ 140 ರನ್ ಗಳಿಸಿದ್ದ ಮೈಕೆಲ್ ಬ್ರೇಸ್‌ವೆಲ್‌ ಕೊನೆಯ ಓವರ್ ನಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬೀಳುವ ಮೂಲಕ, ಕೊನೆ ಹಂತದಲ್ಲಿ ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು.

ಭರ್ಜರಿ ದ್ವಿಶತಕ ಸಿಡಿಸಿದ ಶುಭಮನ್ ಗಿಲ್

ಭರ್ಜರಿ ದ್ವಿಶತಕ ಸಿಡಿಸಿದ ಶುಭಮನ್ ಗಿಲ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಮತ್ತು ಗಿಲ್ ಮೊದಲ ವಿಕೆಟ್‌ಗೆ 60 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಶುಭಮನ್ ಗಿಲ್ ಭಾರತದ ಇನ್ನಿಂಗ್ಸ್‌ನಲ್ಲಿ 'ಒನ್‌ ಮ್ಯಾನ್ ಶೋ' ನೀಡಿದರು.

ಒಂದು ಬದಿಯಲ್ಲಿ ವಿಕೆಟ್ ಬೀಳುತ್ತಿದ್ದರು, ಮತ್ತೊಂದು ಕಡೆಯಿಂದ ಅದ್ಭುತ ಬ್ಯಾಟಿಂಗ್ ಮಾಡಿದ ಗಿಲ್ ಶತಕ ದಾಖಲಿಸಿದರು. 3ನೇ ಶತಕ ಬಾರಿಸುತ್ತಿದ್ದಂತೆ ಸ್ಫೋಟಕ ಬ್ಯಾಟಿಂಗ್ ಮಾಡಿದರು. 149 ಎಸೆತಗಳಲ್ಲಿ 19 ಬೌಂಡರಿ 9 ಶತಕದ ನೆರವಿನಿಂದ 208 ರನ್ ಗಳಿಸಿದರು. 50 ಓವರ್ ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 349 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

IND vs NZ: ಶುಭ್ಮನ್ ಗಿಲ್ ದ್ವಿಶತಕಕ್ಕೆ ಯುವಿ, ಸೆಹ್ವಾಗ್, ಅಶ್ವಿನ್‌ರಿಂದ ಪ್ರಶಂಸೆಗಳ ಸುರಿಮಳೆ

 ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ

ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ಸಿರಾಜ್ ಆಘಾತ ನೀಡಿದರು. ಡಿವೋನ್ ಕಾನ್ವೆ ಅವರನ್ನು 10 ರನ್ ಗಳಿಸಿದ್ದಾಗ ಔಟ್ ಮಾಡಿದ ಸಿರಾಜ್ ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟರು.

ಭಾರತದ ಅತ್ಯುತ್ತಮ ಬೌಲಿಂಗ್ ದಾಳಿಯಿಂದಾಗಿ 28.4 ಓವರ್ ಗಳಾಗುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಆರಂಭಿಕ ಬ್ಯಾಟರ್ ಫಿನ್ ಅಲೆನ್ ಮಾತ್ರ 40 ರನ್ ಗಳಿಸಿ ಔಟಾಗಿದ್ದರು. ಈ ಸಂದರ್ಭದಲ್ಲಿ ಒಂದಾದ ಮೈಕೆಲ್ ಬ್ರೇಸ್‌ವೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಭಾರತದ ಬೌಲರ್ ಗಳ ಬೆವರಿಳಿಸಿದರು.

ಸೋಲಿನ ಭೀತಿ ತಂದಿದ್ದ ಬ್ರೇಸ್‌ವೆಲ್

ಸೋಲಿನ ಭೀತಿ ತಂದಿದ್ದ ಬ್ರೇಸ್‌ವೆಲ್

ಈ ಜೋಡಿ 7ನೇ ವಿಕೆಟ್‌ಗೆ 111 ಎಸೆತಗಳಲ್ಲಿ 162 ರನ್ ಗಳಿಸಿ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದರು. ಮಿಚೆಲ್ ಸ್ಯಾಂಟ್ನರ್ ಮತ್ತು ಹೆನ್ರಿ ಶಿಪ್ಲಿ ಒಂದೇ ಓವರ್ ನಲ್ಲಿ ಔಟಾದರು, ಮೈಕೆಲ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. 49ನೇ ಓವರ್ ಗೆ ನ್ಯೂಜಿಲೆಂಡ್ 9 ವಿಕೆಟ್ ಕಳೆದುಕೊಂಡು

ಅಂತಿಮ ಓವರ್ ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ 20 ರನ್ ಬೇಕಿದ್ದಾಗ ಸ್ಟ್ರೈಕ್‌ನಲ್ಲಿದ್ದ ಮೈಕೆಲ್ ಬ್ರೇಸ್‌ವೆಲ್ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡಕ್ಕೆ ಆತಂಕ ಮೂಡಿಸಿದರು. ಶಾರ್ದುಲ್ ಠಾಕೂರ್ ಎರಡನೇ ಎಸೆತವನ್ನು ವೈಡ್ ಮಾಡುವ ಮೂಲಕ ಆತಂಕ ಮತ್ತಷ್ಟು ಹೆಚ್ಚಾಯಿತು. ಆದರೆ ಮುಂದಿನ ಎಸೆತದಲ್ಲೇ ಮೈಕೆಲ್ ಬ್ರೇಸ್‌ವೆಲ್‌ರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವುವವ ಮೂಲಕ ಭಾರತಕ್ಕೆ 12 ರನ್‌ಗಳ ರೋಚಕ ಜಯ ತಂದುಕೊಟ್ಟರು. 78 ಎಸೆತಗಳಲ್ಲಿ 12 ಬೌಂಡರಿ 10 ಭರ್ಜರಿ ಸಿಕ್ಸರ್ ನೆರವಿನಿಂದ 140 ರನ್ ಗಳಿಸಿದ್ದ ಬ್ರೇಸ್‌ವೆಲ್‌ ಪಂದ್ಯ ಗೆಲ್ಲದೆ ನಿರಾಸೆ ಅನುಭವಿಸಿದರು.

ಭಾರತದ ಪರವಾಗಿ ಮೊಹಮ್ಮದ್ ಸಿರಾಹ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 10 ಓವರ್ ಗಳಲ್ಲಿ 46 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಮತ್ತು ಶಮಿ ತಲಾ 1 ವಿಕೆಟ್ ಪಡೆದರು.

ಬಹುಕಾಲ ನೆನಪಿಟ್ಟುಕೊಳ್ಳುವ ಪಂದ್ಯದಲ್ಲಿ ಕೊನೆಯ ಓವರ್ ವರೆಗೂ ಯಾರು ಗೆಲ್ಲುತ್ತಾರೆ ಎಂದು ಹೇಳುವುದೇ ಕಷ್ಟವಾಗಿತ್ತು. ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದ ಟೀಂ ಇಂಡಿಯಾಗೆ ಮೊದಲ ಬಾರಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಯಿತು.

Story first published: Wednesday, January 18, 2023, 22:04 [IST]
Other articles published on Jan 18, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X