ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ : ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸ್ಟಾರ್ ಆಲ್‌ರೌಂಡರ್ ವಾಪಸ್, ಸಂಜು ಸ್ಯಾಮ್ಸನ್ ಆಯ್ಕೆ ಅನುಮಾನ

Ind vs NZ : Ravindra Jadeja Likely Comeback For New Zealand Series, Samson and Bumrah Doubtful

ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಶೀಘ್ರದಲ್ಲೇ ಭಾರತ ತಂಡವನ್ನು ಘೋಷಿಸಲಾಗುತ್ತದೆ. ಚೇತನ್ ಶರ್ಮಾ ನೇತೃತ್ವದ ನೂತನ ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡಲಿದೆ.

ಭಾರತದ ಟಿ20 ತಂಡದಲ್ಲಿ ಇನ್ನು ಮುಂದೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಯ್ಕೆಯಾಗುವುದು ಅನುಮಾನವಾಗಿದೆ. ಇವರಿಬ್ಬರನ್ನೂ ಹಂತ ಹಂತವಾಗಿ ಟಿ20 ತಂಡದಿಂದ ಹೊರಗಿಡುವುದು ಬಿಸಿಸಿಐನ ಉದ್ದೇಶ ಎನ್ನಲಾಗಿದೆ. 2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಅಣಿಗೊಳಿಸಲಾಗುತ್ತಿದ್ದು, ಹಿರಿಯ ಆಟಗಾರರಿಗೆ ಕೋಕ್ ಕೊಡಲು ತೀರ್ಮಾನಿಸಲಾಗಿದೆ.

IND vs SL 2nd ODI: ಭಾರತ vs ಶ್ರೀಲಂಕಾ ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ತಂಡಗಳು, ಪಂದ್ಯದ ವಿವರIND vs SL 2nd ODI: ಭಾರತ vs ಶ್ರೀಲಂಕಾ ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ತಂಡಗಳು, ಪಂದ್ಯದ ವಿವರ

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತೆ ತಂಡಕ್ಕೆ ವಾಪಸಾಗಲು ಸಿದ್ಧತೆ ನಡೆಸಿದ್ದಾರೆ. ರವೀಂದ್ರ ಜಡೇಜಾ ಫಿಟ್‌ನೆಸ್ ಬಗ್ಗೆ ಎನ್‌ಸಿಎ ವರದಿ ಕೊಟ್ಟ ನಂತರ ಅವರ ಆಯ್ಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು, ಆಯ್ಕೆದಾರರ ಸಮಿತಿ ತೀರ್ಮಾನಿಸಿದೆ.

ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಗೆ ಲಭ್ಯವಿಯಲ್ಲ ಎಂದು ಹೇಳಲಾಗಿದ್ದು, ಅವರು ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದರ ಜೊತೆಗೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ವೇಳೆ ಮೊಣಕಾಲಿನ ಗಾಯದಿಂದ ಹೊರಗುಳಿದಿದ್ದ, ಸಂಜು ಸ್ಯಾಮ್ಸನ್ ಕೂಡ ಆಯ್ಕೆಯಾಗುವುದು ಅನುಮಾನವಾಗಿದೆ.

ಏಕದಿನ ಮತ್ತು ಟಿ20 ಸರಣಿ

ಏಕದಿನ ಮತ್ತು ಟಿ20 ಸರಣಿ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಏಕದಿನ ಸರಣಿಯ ಮೊದಲನೇ ಪಂದ್ಯ ಜನವರಿ 18 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 21 ರಂದು ರಾಯ್‌ಪುರದಲ್ಲಿ ನಡೆಯಲಿದ್ದು, ಸರಣಿಯ ಅಂತಿಮ ಪಂದ್ಯ ಜನವರಿ 24 ರಂದು ಇಂದೋರ್ ನಲ್ಲಿ ನಡೆಯಲಿದೆ.

ಜನವರಿ 27, 29 ಮತ್ತು ಫೆಬ್ರವರಿ 1 ರಂದು ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯಗಳು ನಡೆಯಲಿವೆ. ಮೂರು ಪಂದ್ಯಗಳು ರಾಂಚಿ, ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ.

SA 20: ಫಾಫ್ ಡು ಪ್ಲೆಸಿಸ್ ನಾಯಕತ್ವದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಜಯ

ಜಡೇಜಾ ವಾಪಸಾಗುವ ಸಾಧ್ಯತೆ

ಜಡೇಜಾ ವಾಪಸಾಗುವ ಸಾಧ್ಯತೆ

ರವೀಂದ್ರ ಜಡೇಜಾ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರೂ, ಅವರು ಫಿಟ್ ಆಗಿರುವ ಬಗ್ಗೆ ಎನ್‌ಸಿಎ ಧೃಡೀಕರಿಸಬೇಕಿದೆ. ಆಯ್ಕೆದಾರರ ಸಮಿತಿ ಎನ್‌ಸಿಎ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ದೂರವಾಣಿ ಮೂಲಕ ಈ ಬಗ್ಗೆ ಚರ್ಚೆ ಮಾಡಲಿದ್ದಾರೆ.

ಎನ್‌ಸಿಎ ಸ್ಟಾರ್ ಆಲ್‌ರೌಂಡರ್‌ ರವೀಂದ್ರ ಜಡೇಜಾಗೆ ಕ್ಲಿಯರೆನ್ಸ್ ನೀಡಿದರೆ, ಜಡೇಜಾ ನ್ಯೂಜಿಲೆಂಡ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಶ್ರೀಲಂಕಾ ವಿರುದ್ಧ ಆಡುತ್ತಿರುವ ತಂಡವೇ ಬಹುತೇಕ ಮುಂದುವರೆಯುವ ಸಾಧ್ಯತೆ ಇದೆ. ಟಿ20 ತಂಡದಲ್ಲಿ ಮಾತ್ರ ಪ್ರಯೋಗ ಮಾಡಬಹುದಾಗಿದೆ.

ಸ್ಯಾಮ್ಸನ್‌ ಕೂಡ ಅನುಮಾನ

ಸ್ಯಾಮ್ಸನ್‌ ಕೂಡ ಅನುಮಾನ

ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಸಂಜು ಸ್ಯಾಮ್ಸನ್ ಮತ್ತು ಜಸ್ಪ್ರೀತ್ ಬುಮ್ರಾ ಇಬ್ಬರೂ ಹೊರಗುಳಿಯಲಿದ್ದಾರೆ. ಜನವರಿ 3 ರಂದು ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಅವರು ಇನ್ನೂ ಸುಧಾರಿಸಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆಯಾಗಿಲ್ಲ.

ಒಂದು ವೇಳೆ ಸಂಜು ಸ್ಯಾಮ್ಸನ್ ತಂಡದಿಂದ ಹೊರಗುಳಿದರೆ, ಟಿ20 ತಂಡಕ್ಕೆ ಇಶಾನ್‌ ಕಿಶನ್‌ಗೆ ಬ್ಯಾಕ್‌ಅಪ್ ವಿಕೆಟ್‌ಕೀಪರ್-ಬ್ಯಾಟರ್ ಆಗಿ ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.

ಜಸ್ಪ್ರೀತ್ ಬುಮ್ರಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದರೂ ಕೊನೆಯ ಕ್ಷಣದಲ್ಲಿ ಅವರನ್ನು ಹೊರಗುಳಿಯುವಂತೆ ಕೇಳಲಾಯಿತು. ಮುಂಬೈನಲ್ಲಿ ಅಭ್ಯಾಸದ ವೇಳೆ ಅವರಿಗೆ ಬೆನ್ನಿನ ನೋವು ಕಾಣಿಸಿಕೊಂಡಿದ್ದರಿಂದ ಈ ನಿರ್ಧಾರ ಮಾಡಲಾಯಿತು ಎಂದು ಬಿಸಿಸಿಐ ಹೇಳಿದೆ.

Story first published: Thursday, January 12, 2023, 13:17 [IST]
Other articles published on Jan 12, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X