ಎಸ್‌ಎ20 ಲೀಗ್‌ನ ಎರಡನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಜೋ ಬರ್ಗ್ ಸೂಪರ್ ಕಿಂಗ್ಸ್ ತಂಡ ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧ 16 ರನ್‌ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಡರ್ಬನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ನೆಡದ ಪಂದ್ಯದಲ್ಲಿ ಟಾಸ್ ಗೆದ್ದ ಜೋ ಬರ್ಗ್ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. 6 ಓವರ್ ಗಳಾಗುವಷ್ಟರಲ್ಲಿ 27 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕ ಡುಪ್ಲೆಸಿಸ್ ಮತ್ತು ಡೊನಾವೊನ್ ಫೆರೈರಾ ಆಸರೆಯಾದರು.
ಭವಿಷ್ಯದಲ್ಲಿ ಆತನಿಲ್ಲದೇ ಆಡಲು ಭಾರತ ತಂಡ ಸಿದ್ಧವಾಗಬೇಕು ಎಂದ ಮಾಜಿ ಕ್ರಿಕೆಟಿಗ!
ಡುಪ್ಲೆಸಿಸ್ 33 ಎಸೆತಗಳಲ್ಲಿ 39 ರನ್ ಗಳಿಸಿದರೆ, ಡೊನಾವೊನ್ ಫೆರೈರಾ ಸ್ಫೋಟಕ ಬ್ಯಾಟಿಂಗ್ ಮಾಡಿದರು. 40 ಎಸೆತಗಳಲ್ಲಿ 8 ಬೌಂಡರಿ 5 ಸಿಕ್ಸರ್ ಸಹಿತ 82 ರನ್ ಗಳಿಸಿ ಮಿಂಚಿದರು. ರೊಮಾರಿಯೋ ಶೆಫರ್ಡ್ 20 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಿತ 40 ರನ್ ಗಳಿಸಿದರು. ಇವರಿಬ್ಬರ ಸ್ಫೋಟಕ ಆಟದ ಪರಿಣಾಮ ಜೋ ಬರ್ಗ್ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಡಿ ಕಾಕ್ ಹೋರಾಟ ವ್ಯರ್ಥ
ಬೃಹತ್ ಮೊತ್ತವನ್ನು ಬೆನ್ನತ್ತಿದ ಡರ್ಬನ್ ಸೂಪರ್ ಜೈಂಟ್ಸ್ ಉತ್ತಮ ಆರಂಭವನ್ನೇ ಪಡೆಯಿತು. ಕೈಲ್ ಮೇಯರ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಅತ್ಯುತ್ತಮ ಜೊತೆಯಾಟ ಆಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 11 ಓವರ್ ಗಳಲ್ಲಿ 98 ರನ್ ಗಳಿಸಿತು.
ಕೈಲ್ ಮೇಯರ್ಸ್ 29 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಸಹಿತ 39 ರನ್ ಗಳಿಸಿದರು. ನಾಯಕ ಕ್ವಿಂಟನ್ ಡಿ ಕಾಕ್ 52 ಎಸೆತಗಳಲ್ಲಿ 5 ಬೌಂಡರಿ, 5 ಭರ್ಜರಿ ಸಿಕ್ಸರ್ ಸಹಿತ 78 ರನ್ ಗಳಿಸಿ ಮಿಂಚಿದರು. ಇವರಿಬ್ಬರೂ ಔಟಾದ ನಂತರ ಡರ್ಬನ್ ಸೂಪರ್ ಜೈಂಟ್ಸ್ ಹಠಾತ್ ಕುಸಿತ ಕಂಡಿತು.
ಜೋ ಬರ್ಗ್ ಸೂಪರ್ ಕಿಂಗ್ಸ್ ಉತ್ತಮ ಬೌಲಿಂಗ್
ಹೆನ್ರಿಚ್ ಕ್ಲಾಸೆನ್ (20), ವಿಯಾನ್ ಮುಲ್ಡರ್ (10), ಡ್ವೈನ್ ಪ್ರಿಟೋರಿಯಸ್ (14) ಮತ್ತು ಜೇಸನ್ ಹೋಲ್ಡರ್ ಅಜೇಯ 2 ರನ್ ಗಳಿಸಿದರು. ಪ್ರಮುಖ ಬ್ಯಾಟರ್ ಕೈಕೊಟ್ಟ ಕಾರಣ ಡರ್ಬನ್ ಸೂಪರ್ ಜೈಂಟ್ಸ್ ಗೆಲ್ಲಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 174 ರನ್ ಗಳಿಸಲು ಮಾತ್ರ ಶಕ್ತವಾಯಿತು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಡರ್ಬನ್ ಸೂಪರ್ ಜೈಂಟ್ಸ್ : ಕ್ವಿಂಟನ್ ಡಿ ಕಾಕ್ (ನಾಯಕ), ಕೈಲ್ ಮೇಯರ್ಸ್, ಮ್ಯಾಥ್ಯೂ ಬ್ರೀಟ್ಜ್‌ಕೆ, ಹೆನ್ರಿಕ್ ಕ್ಲಾಸೆನ್, ಪ್ರೆನೆಲನ್ ಸುಬ್ರಾಯೆನ್, ಜೇಸನ್ ಹೋಲ್ಡರ್, ವಿಯಾನ್ ಮುಲ್ಡರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಅಕಿಲಾ ದನಂಜಯ, ಕೀಮೋ ಪಾಲ್
ಜೋಬರ್ಗ್ ಸೂಪರ್ ಕಿಂಗ್ಸ್: ರೀಜಾ ಹೆಂಡ್ರಿಕ್ಸ್, ಜಾನ್ನೆಮನ್ ಮಲನ್, ಫಾಫ್ ಡು ಪ್ಲೆಸಿಸ್ (ನಾಯಕ), ಕೈಲ್ ವೆರ್‍ರೆನ್ನೆ, ಲೆವಿಸ್ ಗ್ರೆಗೊರಿ, ಡೊನಾವನ್ ಫೆರೆರಾ, ರೊಮಾರಿಯೊ ಶೆಫರ್ಡ್, ಜಾರ್ಜ್ ಗಾರ್ಟನ್, ಅಲ್ಜಾರಿ ಜೋಸೆಫ್, ಮಾಲುಸಿ ಸಿಬೊಟೊ, ಆರನ್ ಫಂಗಿಸೊ.