ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಹಾಗೆ ಮಾಡಿದರೆ ನಾವು ಮಾರ್ಖರಾಗುತ್ತೇವೆ": ಭಾರತದ ವಿರುದ್ಧ ಸೋಲಿನ ಬಳಿಕ ದ. ಆಫ್ರಿಕಾ ನಾಯಕನ ಮಾತು!

Ind vs SA: Temba Bavuma denies suggestions for a change in batting strategy after 3rd T20I defeat

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಈಗ ರೋಚಕತೆಯನ್ನು ಪಡೆದುಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಮಣಿಸಿದ್ದ ದಕ್ಷಿಣ ಆಫ್ರಿಕಾ ಪಡೆಗೆ ಮೂರನೇ ಪಂದ್ಯದಲ್ಲಿ ಭಾರತ ತಿರುಗೇಟು ನೀಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿದ ಭಾರತ ತಂಡ ಪ್ರವಾಸಿ ತಂಡಕ್ಕೆ ಆಘಾತ ನೀಡಿದೆ.

ಇನ್ನು ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದಿಂದ ಮಿಂಚಿದ್ದ ದಕ್ಷಿಣ ಆಫ್ರಿಕಾ ತಂಡ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿದ ತಕ್ಷಣವೇ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ತಂಡದ ಬ್ಯಾಟಿಂಗ್ ವಿಭಾಗ ಮೂರನೇ ಪಂದ್ಯದಲ್ಲಿ ಆಡಿದ ರೀತಿಯ ಬಗ್ಗೆ ಅನೇಕರು ಪ್ರಶ್ನಿಸಲು ಆರಂಭಿಸಿದ್ದಾರೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಪ್ರತಿಕ್ರಿಯೆ ನೀಡಿದ್ದಾರೆ. ತಂಡ ಬ್ಯಾಟಿಂಗ್ ನಡೆಸುವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಟೆಂಬಾ ಬವುಮಾ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಮುಂದಿನ IPL ಸೀಸನ್‌ನಲ್ಲಿ ಧೋನಿ ಬದಲು CSK ತಂಡದ ನಾಯಕರಾಗಬಲ್ಲ ಐವರು ಆಟಗಾರರುಮುಂದಿನ IPL ಸೀಸನ್‌ನಲ್ಲಿ ಧೋನಿ ಬದಲು CSK ತಂಡದ ನಾಯಕರಾಗಬಲ್ಲ ಐವರು ಆಟಗಾರರು

ತಂಡದ ಬ್ಯಾಟಿಂಗ್ ಯೋಜನೆ ಬಗ್ಗೆ ಹೇಳಿದ ಬವುಮಾ

ತಂಡದ ಬ್ಯಾಟಿಂಗ್ ಯೋಜನೆ ಬಗ್ಗೆ ಹೇಳಿದ ಬವುಮಾ

ಭಾರತದ ವಿರುದ್ಧದ ಸರಣಿಯಲ್ಲಿ ಮೊದಲ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಟೆಂಬಾ ಬವುಮಾ ತಂಡದ ಬ್ಯಾಟಿಂಗ್ ಕಾರ್ಯವಿಧಾನದ ಬಗ್ಗೆ ಮಾತನಾಡಿದರು. "ಮೊದಲ ಎರಡು ಓವರ್‌ಗಳ ಕಾಲ ನಾವು ಯಾವಾಗಲೂ ಸೂಕ್ಷ್ಮವಾಗಿ ಗಮನಸಿಕೊಳ್ಳುತ್ತೇವೆ. ಅದಾದ ಬಳಿಕ ಉತ್ತಮ ಸಮಯವನ್ನು ನೋಡಿಕೊಂಡು ಇನ್ನಿಂಗ್ಸ್‌ನಲ್ಲಿ ಹಿಡಿತ ಸಾಧಿಸುವ ಪ್ರಯತ್ನವನ್ನು ನಡೆಸುತ್ತೇವೆ. ಈ ಮೂಲಕ ತಂಡದ ಬಿಗ್ ಹಿಟ್ ಆಟಗಾರರಿಗೆ ವೇದಿಕೆಯನ್ನು ಸೃಷ್ಟಿಸುತ್ತೇವೆ" ಎಂದಿದ್ದಾರೆ ಟೆಂಬಾ ಬವುಮಾ.

ಸ್ಪಿನ್ನರ್‌ಗಳು ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದರು

ಸ್ಪಿನ್ನರ್‌ಗಳು ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದರು

ಇನ್ನು ಈ ಸಂದರ್ಭದಲ್ಲಿ ಟೆಂಬಾ ಬವುಮಾ ಭಾರತದ ಸ್ಪಿನ್ ವಿಭಾಗದ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. "ಅವರ ಸ್ಪಿನ್ನರ್‌ಗಳು ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಈ ಒತ್ತಡವನ್ನು ನಾವು ಅನುಭವಿಸಿರಲಿಲ್ಲ. ಇಲ್ಲಿನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲವಾಗುವಂತೆ ಇತ್ತು. ಪರಿಸ್ಥಿತಿಯನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಂಡಿರುವುದಕ್ಕೆ ಭಾರತೀಯ ಸ್ಪಿನ್ನರ್‌ಗಳಿಗೆ ಮೆಚ್ಚುಗೆ ಸೂಚಿಸಲೇಬೇಕು. ಅವರ ನಾಯಕ ಸ್ಪಿನ್ನರ್‌ಗಳನ್ನು ಬೇಗನೆ ದಾಳಿಗೆ ಇಳಿಸಿದರು. ಆ ಯೋಚನೆ ಪಂದ್ಯದಲ್ಲಿ ನಮಗೂ ಅವರಿಗೂ ದೊಡ್ಡ ವ್ಯತ್ಯಾಸವನ್ನುಂಟು ಮಾಡಿತು" ಎಂದಿದ್ದಾರೆ ಟೆಂಬಾ ಬವುಮಾ.

ಹಾಗೆ ಮಾಡಿದಲ್ಲಿ ನಾವು ಮೂರ್ಖರು ಎನಿಸಿಕೊಳ್ಳುತ್ತೇವೆ

ಹಾಗೆ ಮಾಡಿದಲ್ಲಿ ನಾವು ಮೂರ್ಖರು ಎನಿಸಿಕೊಳ್ಳುತ್ತೇವೆ

ಇನ್ನು ಈ ಸಂದರ್ಭದಲ್ಲಿ ಟೆಂಬಾ ಬವುಮಾ ಬ್ಯಾಟಿಂಗ್ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾವು ಮೊದಲ ಎರಡು ಪಂದ್ಯಗಳಲ್ಲಿ ನಮ್ಮ ಇದೇ ಯೋಜನೆಯಿಂದ ಗೆಲುವು ಸಾಧಿಸಿದ್ದೇವೆ. ಈಗ ಒಂದು ಸೋಲು ಅನುಭವಿಸಿದ ತಕ್ಷಣವೇ ನಮ್ಮ ಬ್ಯಾಟಿಂಗ್ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಯೋಚಿಸಿದರೆ ನಾವು ನಿಜಕ್ಕೂ ಮೂರ್ಖರಾಗುತ್ತೇವೆ ಎಂದಿದ್ದಾರೆ ಟೆಂಬಾ ಬವುಮಾ. ಮೂಲಕ ಮುಂದಿನ ಪಂದ್ಯಗಳಲ್ಲಿಯೂ ತಮ್ಮ ತಂಡದ ಬ್ಯಾಟಿಂಗ್ ವಿಧಾನ ಹೀಗೆಯೇ ಮುಂದುವರಿಯಲಿದೆ ಎಂಬುದನ್ನು ತಿಳಿಸಿದ್ದಾರೆ.

ಭಾರತ ತಂಡ ದುರ್ಬಲವಲ್ಲ

ಭಾರತ ತಂಡ ದುರ್ಬಲವಲ್ಲ

ಇನ್ನು ಭಾರತ ತಂಡದಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ, ಕೆಎಲ್ ರಾಹುಲ್ ಅವರಂತಾ ಆಟಗಾರರು ಇಲ್ಲ. ಹಾಘಿದ್ದರೂ ಭಾರತ ತಂಡವನ್ನು ದುರ್ಬಲ ತಂಡ ಎಂದು ದಕ್ಷಿಣ ಆಫ್ರಿಕಾ ನಾಯಕ ಒಪ್ಪಿಕೊಳ್ಳಲಿಲ್ಲ. "ನಾನು ಈ ತಂಡವನ್ನು ದುರ್ಬಲ ಎಂದು ಅಂದುಕೊಂಡಿಲ್ಲ. ಈ ಎಲ್ಲಾ ಆಟಗಾರರು ತಮ್ಮ ದೇಶೀಯ ಕ್ರಿಕೆಟ್‌ನಲ್ಲಿ ಹಾಗೂ ಐಪಿಎಲ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನಿಡಿದ ಆಟಗಾರರಾಗಿದ್ದಾರೆ. ಅವರೆಲ್ಲರೂ ಗುಣಮಟ್ಟದ ಆಟಗಾರರಾಗಿದ್ದಾರೆ. ನಾವು ಉತ್ತಮವಾಗಿ ಆಡಿದರೆ ಮಾತ್ರವೇ ಗೆಲುವು ಸಾಧ್ಯ ಎಂಬುದು ನಮಗೆ ಅರಿವಿದೆ. ಹಾಗಾಗಿ ನಾವು ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದೇವೆ" ಎಂದಿದ್ದಾರೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ.

Story first published: Wednesday, June 15, 2022, 16:16 [IST]
Other articles published on Jun 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X