ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಏಷ್ಯಾ ಕಪ್‌ನಿಂದ ಹೊರಬಿದ್ದ ಭಾರತದ ಮತ್ತೊಬ್ಬ ಬೌಲರ್; ದೀಪಕ್ ಚಹಾರ್ ಎಂಟ್ರಿ

Asia Cup 2022: Team India Bowler Avesh Khan Ruled Out From Asia Cup; Deepak Chahar Entry

ಭಾರತ ತಂಡದ ವೇಗದ ಬೌಲರ್ ಅವೇಶ್ ಖಾನ್ 2022ರ ಏಷ್ಯಾ ಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಮಂಗಳವಾರ, ಸೆಪ್ಟೆಂಬರ್ 6ರಂದು ವರದಿ ಮಾಡಿದೆ. ಅವೇಶ್ ಖಾನ್ ಸ್ಥಾನಕ್ಕೆ ದೀಪಕ್ ಚಹಾರ್ ಅವರನ್ನು ಹೆಸರಿಸಲಾಗಿದೆ ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ಅಮೋಘ ಪ್ರದರ್ಶನದ ನಂತರ ಭಾರತ ತಂಡವು ಅವೇಶ್ ಖಾನ್ ಅವರನ್ನು ಆಯ್ಕೆ ಮಾಡಿತ್ತು. ಆದಾಗ್ಯೂ, ಅವರು ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ವೇಗಿ ಪಾಕಿಸ್ತಾನದ ವಿರುದ್ಧ ಕೇವಲ ಎರಡು ಪಂದ್ಯಗಳನ್ನು ಆಡಿದರು ಮತ್ತು ಒಂದು ವಿಕೆಟ್ ಪಡೆದರು.

IND vs SL: ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಅರ್ಧಶತಕ; ಶ್ರೀಲಂಕಾಗೆ ಸವಾಲಿನ ಗುರಿIND vs SL: ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಅರ್ಧಶತಕ; ಶ್ರೀಲಂಕಾಗೆ ಸವಾಲಿನ ಗುರಿ

ಅವೇಶ್ ಖಾನ್ ಅವರು ಹಾಂಗ್‌ಕಾಂಗ್ ವಿರುದ್ಧ ಆಡುವಾಗ ಹೆಚ್ಚಿನ ರನ್ ಬಿಟ್ಟುಕೊಟ್ಟರು. ಇನ್ನು ದೀಪಕ್ ಚಹಾರ್ ಬೆನ್ನಿನ ಗಾಯದಿಂದ ಐಪಿಎಲ್‌ನಿಂದ ಹೊರಗುಳಿದ ನಂತರ ಜಿಂಬಾಬ್ವೆ ವಿರುದ್ಧ ಭಾರತ ತಂಡಕ್ಕೆ ಮರಳಿದರು ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು.

ದೀಪಕ್ ಚಾಹರ್ ಅವರು ಮಂಡಿರಜ್ಜು ಗಾಯವನ್ನು ಪಡೆದ ನಂತರ ಭಾರತ ತಂಡಕ್ಕೆ ಹಿಂತಿರುಗುವುದು ಸ್ವಲ್ಪ ಸಮಯದವರೆಗೆ ವಿಳಂಬವಾಯಿತು. ಆದಾಗ್ಯೂ ಅವರು ಹಿಂದಿರುಗಿದ ನಂತರ, ಅಭಿಮಾನಿಗಳು ಮತ್ತು ಕ್ರಿಕೆಟ್ ವಿಮರ್ಶಕರನ್ನು ಸಮಾನವಾಗಿ ಮೆಚ್ಚಿಸಿದ್ದಾರೆ.

Asia Cup 2022: Team India Bowler Avesh Khan Ruled Out From Asia Cup; Deepak Chahar Entry

ದೀಪಕ್ ಚಾಹರ್ ಸೇರ್ಪಡೆಯಾಗಿರುವುದರಿಂದ, ಭುವನೇಶ್ವರ್ ಕುಮಾರ್ ಅವರು ಭಾರತದ ಮೊದಲ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧದ ಅಂತಿಮ ಓವರ್‌ನಲ್ಲಿ ದುಬಾರಿ ಆಗಿರುವುದನ್ನು ಪರಿಗಣಿಸಿ ದೀಪಕ್ ಚಾಹರ್‌ಗೆ ಮುಂದಿನ ಪಂದ್ಯದಲ್ಲಿ ಅವಕಾಶ ಕಲ್ಪಿಸಬಹುದು.

ಗಾಯಗೊಳ್ಳುವ ಮೊದಲು ದೀಪಕ್ ಚಹಾರ್ ಅವರು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಪ್ರಭಾವಶಾಲಿ ಇನ್ನಿಂಗ್ಸ್‌ಗಳನ್ನು ಆಡಿದ ವೈಟ್-ಬಾಲ್ ಆಟಗಳಲ್ಲಿ ಭಾರತಕ್ಕೆ ಅಗತ್ಯವಿರುವ ಕೆಳ ಕ್ರಮಾಂಕದಲ್ಲಿ ಆಲ್‌ರೌಂಡರ್ ಆಗಿ ಹೊರಹೊಮ್ಮಿದರು.

Asia Cup 2022- Cold War Rishab Pant ಕಂಡ್ರೆ ಪಾಂಡ್ಯಗೆ ಆಗಲ್ವಾ !? | *Cricket | OneIndia Kannada

ತಂಡಕ್ಕೆ ಆಯ್ಕೆಯಾದರೆ, ದೀಪಕ್ ಚಹಾರ್ ಬಹುಶಃ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಬಲಪಡಿಸಿಕೊಳ್ಳಬಹುದು. ಭಾರತ ಇನ್ನೂ ತಮ್ಮ ತಂಡವನ್ನು ಅಂತಿಮಗೊಳಿಸಿಲ್ಲ ಮತ್ತು ಭಾರತ ತಂಡದಲ್ಲಿ ಇನ್ನೂ ಹಲವಾರು ಸ್ಥಾನಗಳು ಬದಲಾವಣೆಯಾಗುವುವು ಬಾಕಿ ಇದೆ.

Story first published: Tuesday, September 6, 2022, 22:07 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X