IND vs SL: ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 23ನೇ ಭಾರತೀಯ ಬೌಲರ್ ಎನಿಸಿದ ಕುಲದೀಪ್ ಯಾದವ್

ಗುರುವಾರ, ಜನವರಿ 12ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಎರಡನೇ ಏಕದಿನ ಪಂದ್ಯವದಲ್ಲಿ ಭಾರತ ತಂಡ 4 ವಿಕೆಟ್ ಜಯ ಸಾಧಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿಗೆ ವಶಪಡಿಸಿಕೊಂಡಿತು.

ಎರಡನೇ ಪಂದ್ಯದಲ್ಲಿ ಭಾರತದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ತಲಾ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರೆ, ಬ್ಯಾಟಿಂಗ್‌ನಲ್ಲಿ 64 ರನ್‌ಗಳ ಗಳಿಸಿದ ಕೆಎಲ್ ರಾಹುಲ್ ಭಾರತದ ಗೆಲುವಿಗೆ ನೆರವಾದರು ಮತ್ತು ಕಳಪೆ ಫಾರ್ಮ್‌ನಿಂದ ಹೊರಬಂದರು.

IND vs SL: ಕೋಚ್ ರಾಹುಲ್ ದ್ರಾವಿಡ್ ಅಸ್ವಸ್ಥ; ಚಿಕಿತ್ಸೆಗಾಗಿ ಬೆಂಗಳೂರಿಗೆ ವಾಪಸ್; 3ನೇ ಪಂದ್ಯಕ್ಕೆ ಲಭ್ಯವೇ?

ಇದೇ ವೇಳೆ ಎಡಗೈ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದರು. ಈ ವಿಷಯ ತಿಳಿದು ಅವರೇ ಸ್ವಲ್ಪ ದಿಗ್ಭ್ರಮೆಗೊಂಡರು.

ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದ ನಂತರ, ಕುಲದೀಪ್ ಯಾದವ್ ಅವರನ್ನು ಸಂದರ್ಶಿಸಿದ ಯುಜ್ವೇಂದ್ರ ಚಹಾಲ್ ಅವರು 200 ವಿಕೆಟ್‌ಗಳ ಸಾಧನೆ ಬಗ್ಗೆ ತಿಳಿಸಿದರು.

ಸಂವಾದದ ವೇಳೆ ಯುಜ್ವೇಂದ್ರ ಚಹಾಲ್ ಅವರು 200 ವಿಕೆಟ್‌ಗಳ ಗಡಿಯನ್ನು ಮುಟ್ಟಿದ್ದಿರಾ ಎಂದು ಕುಲದೀಪ್ ಯಾದವ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಈ ಮೈಲಿಗಲ್ಲಿನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಎಂದು ಹೇಳಿದರು.

200 ವಿಕೆಟ್‌ಗಳ ದಾಖಲೆಯನ್ನು ತಲುಪಿದ 23ನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಕುಲದೀಪ್ ಯಾದವ್ ಪಾತ್ರರಾದರು.

"ನನಗೆ ಈ ಸಾಧನೆ ಬಗ್ಗೆ ತಿಳಿದಿರಲಿಲ್ಲ. 200 ವಿಕೆಟ್‌ಗಳನ್ನು ಕಬಳಿಸುವುದು ದೊಡ್ಡ ಕೆಲಸ ಮತ್ತು ನಾನು ಅದರ ಬಗ್ಗೆ ಹೆಮ್ಮೆಪಡುತ್ತೇನೆ," ಎಂದು ಕುಲದೀಪ್ ಯಾದವ್ ಅವರು ಯುಜ್ವೇಂದ್ರ ಚಹಾಲ್ ಟಿವಿಯಲ್ಲಿ ಹೇಳಿದ್ದಾರೆ.

AUS vs AFG: ಆಸ್ಟ್ರೇಲಿಯಾಗೆ ತಿರುಗೇಟು; BBLನಿಂದ ಹಿಂದೆ ಸರಿಯುವುದಾಗಿ ರಶೀದ್ ಖಾನ್ ಬೆದರಿಕೆ

ಶ್ರೀಲಂಕಾ ತಂಡವನ್ನು ಭಾರತ ನಾಲ್ಕು ವಿಕೆಟ್‌ಗಳಿಂದ ಸೋಲಿಸಿ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡ ನಂತರ ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಪಂದ್ಯದಲ್ಲಿ 10 ಓವರ್‌ಗಳಲ್ಲಿ 51 ರನ್ ನೀಡಿ 3 ಪ್ರಮುಖ ವಿಕೆಟ್ ಉರುಳಿಸಿದರು. ಇದು ಶ್ರೀಲಂಕಾ ತಂಡವನ್ನು 39.4 ಓವರ್‌ಗಳಲ್ಲಿ 215 ರನ್‌ಗಳಿಗೆ ಆಲೌಟ್ ಮಾಡಲು ನೆರವಾಯಿತು.

ನಂತರ, ಬ್ಯಾಟಿಂಗ್‌ನಲ್ಲಿ ಕುಲದೀಪ್ ಯಾದವ್ ಕೂಡ 10 ರನ್‌ಗಳ ಕೊಡುಗೆ ನೀಡಿದರು ಮತ್ತು ಗೆಲುವಿನ ಬೌಂಡರಿ ಬಾರಿಸಿದರು. ಇದೇ ವೇಳೆ 103 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 64 ರನ್ ಗಳಿಸಿದ ಕೆಎಲ್ ರಾಹುಲ್ ಜೊತೆಗೆ ಮುರಿಯದ ಏಳನೇ ವಿಕೆಟ್‌ಗೆ 28 ​​ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡರು.

Hockey World Cup 2023: ಜ.13ರಿಂದ ಹಾಕಿ ವಿಶ್ವಕಪ್‌ಗೆ ಚಾಲನೆ; ತವರಿನಲ್ಲಿ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟ ಭಾರತHockey World Cup 2023: ಜ.13ರಿಂದ ಹಾಕಿ ವಿಶ್ವಕಪ್‌ಗೆ ಚಾಲನೆ; ತವರಿನಲ್ಲಿ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟ ಭಾರತ

ಪಂದ್ಯಶ್ರೇಷ್ಠ ಪ್ರದರ್ಶನದ ನಂತರ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಪ್ರದರ್ಶನದ ಮೇಲೆ ಕೇಂದ್ರೀಕರಿಸುವ ಬಗ್ಗೆ ಮತ್ತು ರಾಷ್ಟ್ರೀಯ ತಂಡಕ್ಕೆ ಮರಳಲು ತನ್ನ ಶಕ್ತಿಯನ್ನು ಬೆಂಬಲಿಸುವ ಬಗ್ಗೆ ಮಾತನಾಡಿದರು.

"ನನ್ನ ಪ್ರದರ್ಶನದಿಂದ ನನಗೆ ಸಂತೋಷವಾಗಿದೆ. ಕಳೆದ ಒಂದು ವರ್ಷದಿಂದ, ನಾನು ನನ್ನಲ್ಲಿರುವ ಶಕ್ತಿಯನ್ನು ಬೆಂಬಲಿಸಲು ಪ್ರಯತ್ನಿಸುತ್ತಿದ್ದೇನೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಉತ್ತಮ ಪ್ರದರ್ಶನದ ಬಗ್ಗೆ ಯೋಚಿಸುತ್ತೇನೆ. ನನ್ನ ಬೌಲಿಂಗ್ ಅನ್ನು ನಾನು ತುಂಬಾ ಆನಂದಿಸುತ್ತಿದ್ದೇನೆ," ಎಂದು ಕುಲದೀಪ್ ಯಾದವ್ ಪಂದ್ಯದ ನಂತರ ಹೇಳಿದರು.

For Quick Alerts
ALLOW NOTIFICATIONS
For Daily Alerts
Story first published: Friday, January 13, 2023, 13:27 [IST]
Other articles published on Jan 13, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X