ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

AUS vs AFG: ಆಸ್ಟ್ರೇಲಿಯಾಗೆ ತಿರುಗೇಟು; BBLನಿಂದ ಹಿಂದೆ ಸರಿಯುವುದಾಗಿ ರಶೀದ್ ಖಾನ್ ಬೆದರಿಕೆ

AUS vs AFG: Afghanistan All-rounder Rashid Khan Threatens To Pull Out From BBL

ಮುಂಬರುವ ಮಾರ್ಚ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ದ್ವಿಪಕ್ಷೀಯ ಏಕದಿನ ಸರಣಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದ ನಂತರ, ಅಫ್ಘಾನಿಸ್ತಾನ ಸ್ಟಾರ್ ಆಲ್‌ರೌಂಡರ್ ರಶೀದ್ ಖಾನ್ ಅವರು ಬಿಗ್ ಬ್ಯಾಷ್ ಲೀಗ್‌ನಿಂದ (ಬಿಬಿಎಲ್) ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದ್ದಾರೆ.

"ಮಹಿಳೆಯರು ಹಾಗೂ ಬಾಲಕಿಯರ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು, ಉದ್ಯಾನವನಗಳು, ಜಿಮ್‌ ಪ್ರವೇಶಿಸುವುದಕ್ಕೆ ತಾಲಿಬಾನ್ ಇತ್ತೀಚಿಗೆ ನಿರ್ಬಂಧ ವಿಧಿಸಿದ ನಂತರ, ಏಕದಿನ ಸರಣಿಯಿಂದ ಹಿಂದೆ ಸರಿಯುವುದಾಗಿ," ಕ್ರಿಕೆಟ್ ಆಸ್ಟ್ರೇಲಿಯಾದ ಹೇಳಿಕೆಯಲ್ಲಿ ತಿಳಿಸಿದೆ.

ಅಫ್ಘಾನಿಸ್ತಾನ ವಿರುದ್ಧದ ODI ಸರಣಿಯಿಂದ ಹಿಂದೆ ಸರಿದು 30 ಅಂಕ ಕಳೆದುಕೊಂಡ ಆಸೀಸ್; ಕಾರಣ?ಅಫ್ಘಾನಿಸ್ತಾನ ವಿರುದ್ಧದ ODI ಸರಣಿಯಿಂದ ಹಿಂದೆ ಸರಿದು 30 ಅಂಕ ಕಳೆದುಕೊಂಡ ಆಸೀಸ್; ಕಾರಣ?

"ಮಾರ್ಚ್‌ನಲ್ಲಿ ಅಫ್ಘಾನಿಸ್ತಾನ ತಂಡದೊಂದಿಗೆ ಆಡಲು ಆಸ್ಟ್ರೇಲಿಯಾ ತಂಡ ಸರಣಿಯಿಂದ ಹಿಂದೆ ಸರಿದಿದೆ ಎಂದು ಕೇಳಿ ನಾನು ನಿಜವಾಗಿಯೂ ನಿರಾಶೆಗೊಂಡಿದ್ದೇನೆ," ಎಂದು ರಶೀದ್ ಖಾನ್ ಹೇಳಿದ್ದಾರೆ.

"ನನ್ನ ದೇಶವನ್ನು ಪ್ರತಿನಿಧಿಸುವುದಕ್ಕೆ ನಾನು ತುಂಬಾ ಹೆಮ್ಮೆಪಡುತ್ತೇನೆ. ನಾವು ವಿಶ್ವ ವೇದಿಕೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ. ಕ್ರಿಕೆಟ್ ಆಸ್ಟ್ರೇಲಿಯಾದ ಈ ನಿರ್ಧಾರವು ನಮ್ಮ ಕ್ರಿಕೆಟ್ ಪ್ರಗತಿಯ ಪ್ರಯಾಣದಲ್ಲಿ ನಮ್ಮನ್ನು ಹಿಮ್ಮೆಟ್ಟಿಸುತ್ತದೆ," ಎಂದು ರಶೀದ್ ಖಾನ್ ಟ್ವೀಟ್ ಮಾಡಿದ್ದಾರೆ.

"ಅಫ್ಘಾನಿಸ್ತಾನ ವಿರುದ್ಧ ಆಡುವುದು ಆಸ್ಟ್ರೇಲಿಯಾ ತಂಡಕ್ಕೆ ತುಂಬಾ ಅನಾನುಕೂಲವಾಗಿದ್ದರೆ, ನಾನು ಆ ರೀತಿ ಮಾಡಲು ಬಯಸುವುದಿಲ್ಲ. ಬಿಗ್ ಬ್ಯಾಷ್ ಲೀಗ್‌ (ಬಿಬಿಎಲ್) ನಲ್ಲಿ ನನ್ನ ಉಪಸ್ಥಿತಿಯಿಂದ ಯಾರಿಗಾದರೂ ಅನಾನುಕೂಲವಾಗಲು ಬಯಸುವುದಿಲ್ಲ. ನಾನು ಆ ಸ್ಪರ್ಧೆಯಲ್ಲಿ ನನ್ನ ಭವಿಷ್ಯವನ್ನು ಪರಿಗಣಿಸಬೇಕಾಗುತ್ತದೆ," ಎಂದು ರಶೀದ್ ಖಾನ್ ಬರೆದುಕೊಂಡಿದ್ದಾರೆ.

AUS vs AFG: Afghanistan All-rounder Rashid Khan Threatens To Pull Out From BBL

ಮಾರ್ಚ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಪುರುಷರ ಏಕದಿನ ಸರಣಿಯಿಂದ ಕ್ರಿಕೆಟ್ ಆಸ್ಟ್ರೇಲಿಯಾ ಹಿಂದೆ ಸರಿಯುವ ನಿರ್ಧಾರದ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಅಧಿಕೃತವಾಗಿ ಪತ್ರ ಬರೆಯುವುದಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಬುಧವಾರ ತಿಳಿಸಿದೆ.

IND vs SL: ರಿಕಿ ಪಾಂಟಿಂಗ್ vs ರೋಹಿತ್ ಶರ್ಮಾ ನಡುವೆ ಹೋಲಿಕೆ; ಶಾಕಿಂಗ್ ಹೇಳಿಕೆ ನೀಡಿದ ಗಂಭೀರ್IND vs SL: ರಿಕಿ ಪಾಂಟಿಂಗ್ vs ರೋಹಿತ್ ಶರ್ಮಾ ನಡುವೆ ಹೋಲಿಕೆ; ಶಾಕಿಂಗ್ ಹೇಳಿಕೆ ನೀಡಿದ ಗಂಭೀರ್

ಬುಧವಾರದಂದು, ಕ್ರಿಕೆಟ್ ಆಸ್ಟ್ರೇಲಿಯಾವು ತನ್ನ ಅಧಿಕೃತ ಹೇಳಿಕೆಯಲ್ಲಿ, ಐಸಿಸಿ ಸೂಪರ್ ಲೀಗ್‌ನ ಭಾಗವಾಗಿರುವ ಮಾರ್ಚ್‌ನಲ್ಲಿ ಯುಎಇಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ತಿಳಿಸಿತು.

Story first published: Thursday, January 12, 2023, 20:51 [IST]
Other articles published on Jan 12, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X