ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದವರ ಪಟ್ಟಿ; ಕೊಹ್ಲಿ ನಂ.1

IND vs SL: List of Most Man Of The Match Award Winners for India In T20 Cricket

ಟಿ20 ಪಂದ್ಯಗಳಲ್ಲಿ ಯಾವುದೇ ತಂಡ ಗೆಲ್ಲಲು ಅತ್ಯುತ್ತಮ ಬ್ಯಾಟಿಂಗ್ ಇಲ್ಲವೇ ಬೌಲಿಂಗ್ ಪ್ರದರ್ಶನಗಳು ನಿರ್ಣಾಯಕವಾಗಿರುತ್ತವೆ. ಪಂದ್ಯಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡುವ ನಿರ್ಧಾರವು ಹೆಚ್ಚಿನ ರನ್ ಅಥವಾ ಹೆಚ್ಚಿನ ವಿಕೆಟ್‌ಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

ಒಬ್ಬ ಆಟಗಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹನಾಗಿದ್ದಾನೆ ಎಂದರೆ, ಅವನು ಖಂಡಿತವಾಗಿಯೂ ಆ ಪಂದ್ಯದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿರುತ್ತಾನೆ ಎಂದರ್ಥ. ಒಬ್ಬ ಆಟಗಾರನು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಲವಾರು ಬಾರಿ ಗೆದ್ದಿದ್ದರೆ, ಅವನು ಖಂಡಿತವಾಗಿಯೂ ದೇಶದ ಪ್ರಮುಖ ಕ್ರಿಕೆಟಿಗನಾಗುತ್ತಾನೆ.

IND vs SL: 'ಸೂರ್ಯ'ನ ಪ್ರತಾಪದ ಮುಂದೆ ಎಬಿಡಿ, ಕ್ರಿಸ್ ಗೇಲ್ ಏನೂ ಅಲ್ಲ; ಪಾಕ್ ಕ್ರಿಕೆಟಿಗ ಶ್ಲಾಘನೆIND vs SL: 'ಸೂರ್ಯ'ನ ಪ್ರತಾಪದ ಮುಂದೆ ಎಬಿಡಿ, ಕ್ರಿಸ್ ಗೇಲ್ ಏನೂ ಅಲ್ಲ; ಪಾಕ್ ಕ್ರಿಕೆಟಿಗ ಶ್ಲಾಘನೆ

ಆ ಪಟ್ಟಿಯಲ್ಲಿ ಇಲ್ಲಿಯವರೆಗೆ ಟಿ20 ಪಂದ್ಯಗಳಲ್ಲಿ ಭಾರತ ತಂಡದ ಪರವಾಗಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಮೂವರು ಆಟಗಾರರಿದ್ದಾರೆ.

ವಿರಾಟ್ ಕೊಹ್ಲಿ - 15 (115 ಪಂದ್ಯಗಳು)

ವಿರಾಟ್ ಕೊಹ್ಲಿ - 15 (115 ಪಂದ್ಯಗಳು)

ಸಹಜವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಪರ ಮಾತ್ರವಲ್ಲ, ವಿಶ್ವದಾದ್ಯಂತ, ಈ ಪಟ್ಟಿಯನ್ನು ಭಾರತದ ಮಾಜಿ ನಾಯಕ ಮುನ್ನಡೆಸುತ್ತಿದ್ದಾರೆ. ಅವರ ಹಿಂದೆ 13 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿರುವ ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಇದ್ದಾರೆ.

ವಿರಾಟ್ ಕೊಹ್ಲಿ ಭಾರತ ತಂಡದ ಅನೇಕ ಗೆಲುವುಗಳಲ್ಲಿ ಪ್ರಮುಖ ಭಾಗವಾಗಿದ್ದಾರೆ ಮತ್ತು ಅವುಗಳಲ್ಲಿ ಹಲವು ಪಂದ್ಯಗಳಲ್ಲಿ ಅವರು ನೇರವಾಗಿ ಪ್ರಭಾವಿ ಪ್ರದರ್ಶನ ನೀಡಿದ್ದಾರೆ. ಅವರು ಆಡಿದ 115 ಪಂದ್ಯಗಳಲ್ಲಿ 15 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.

ಇತ್ತೀಚೆಗಷ್ಟೇ ಅವರು 2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. 2023ರಲ್ಲಿ ವಿರಾಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಸಂಖ್ಯೆಯನ್ನು ವಿಸ್ತರಿಸುತ್ತಾರೆ ಎಂದು ಭಾರತೀಯ ಅಭಿಮಾನಿಗಳು ಭಾವಿಸಿದ್ದಾರೆ.

ರೋಹಿತ್ ಶರ್ಮಾ - 12 (148 ಪಂದ್ಯಗಳು)

ರೋಹಿತ್ ಶರ್ಮಾ - 12 (148 ಪಂದ್ಯಗಳು)

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಲ್ಲಿಯವರೆಗೆ ಟಿ20 ಪಂದ್ಯಗಳಲ್ಲಿ ಭಾರತ ತಂಡಕ್ಕಾಗಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿರುವ ಆಟಗಾರರಲ್ಲಿ ಪ್ರಮುಖರು.

ಪ್ರಸ್ತುತ ಭಾರತದ ನಾಯಕ ರೋಹಿತ್ ಶರ್ಮಾ ಒಟ್ಟಾರೆ ಪಟ್ಟಿಯಲ್ಲಿ ಮೂರನೇ ಮತ್ತು ಭಾರತದ ಪರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಆಡಿದ 148 ಪಂದ್ಯಗಳಲ್ಲಿ 12 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.

ರೋಹಿತ್ ಶರ್ಮಾ ಒಮ್ಮೆ ಫಾರ್ಮ್‌ಗೆ ಬಂದರೆ, ಅವರನ್ನು ತಡೆಯುವುದು ಕಷ್ಟಕರವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅವರು ದೊಡ್ಡ ಮೊತ್ತದ ಪ್ರದರ್ಶನ ನೀಡುತ್ತಿಲ್ಲ. ಆದರೆ ಟಿ20ಯಲ್ಲಿ ರೋಹಿತ್ ಶರ್ಮಾ ಅವರಿಂದ ಭಾರತ ತಂಡ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲುವ ಪ್ರದರ್ಶನ ನೀಡಲಿ ಎಂಬುದು ಅಭಿಮಾನಿಗಳ ಆಶಯ.

ಸೂರ್ಯಕುಮಾರ್ ಯಾದವ್ - 10 (45 ಪಂದ್ಯಗಳು)

ಸೂರ್ಯಕುಮಾರ್ ಯಾದವ್ - 10 (45 ಪಂದ್ಯಗಳು)

ಇತರ ಕ್ರಿಕೆಟಿಗರು ಎರಡಂಕಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲು 100ಕ್ಕೂ ಹೆಚ್ಚು ಪಂದ್ಯಗಳನ್ನು ತೆಗೆದುಕೊಂಡರೆ, ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 50 ಪಂದ್ಯಗಳನ್ನು ಆಡದೆಯೂ 10 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯ ಸಾಧನೆ ಮಾಡಿದ್ದಾರೆ.

ಕುತೂಹಲಕಾರಿ ಅಂಶವೆಂದರೆ, ಪ್ರತಿ ಐದನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕಾಗಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಾರೆ. ಇದು ಅತ್ಯದ್ಭುತ ಸಾಧನೆಯಾಗಿದೆ ಮತ್ತು ಇದು ಅವರ ಆಟದ ಪ್ರಭಾವವನ್ನು ತೋರಿಸುತ್ತದೆ.

ಸೂರ್ಯಕುಮಾರ್ ಯಾದವ್ ಅವರ ಪ್ರಸ್ತುತ ಫಾರ್ಮ್ ಅನ್ನು ಪರಿಗಣಿಸಿದರೆ, ಅವರು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಆದಷ್ಟು ಬೇಗನೆ ಹಿಂದಿಕ್ಕುವ ಸೂಚನೆ ನೀಡಿದ್ದಾರೆ.

Story first published: Sunday, January 8, 2023, 18:17 [IST]
Other articles published on Jan 8, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X