ಕೆಎಲ್‌ ರಾಹುಲ್ ಫಾರ್ಮ್‌ ಬಗ್ಗೆ ಆಯ್ಕೆದಾರರ ಅಸಮಾಧಾನ: ಇದೇ ಕೊನೆ ಅವಕಾಶ!

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ವಿಚಾರದಲ್ಲಿ ಆಯ್ಕೆದಾರರ ಸಮಿತಿ ತಾಳ್ಮೆ ಕಳೆದುಕೊಳ್ಳುತ್ತಿದೆ. ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಕೆಎಲ್ ರಾಹುಲ್ ಪದೇ ಪದೇ ವಿಫಲರಾಗುತ್ತಿದ್ದಾರೆ.

ಅವರ ಕಳಪೆ ಫಾರ್ಮ್‌ ಬಗ್ಗೆ ಈಗಾಗಲೇ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಪದೇ ಪದೇ ಅವರು ರನ್ ಗಳಿಸುವಲ್ಲಿ ವಿಫಲರಾಗುತ್ತಿದ್ದರು, ತಂಡದಲ್ಲಿ ಅವಕಾಶ ಪಡೆಯುವಲ್ಲಿ ಸಫಲರಾಗಿದ್ದರು.

ಆದರೆ, ಪದೇ ಪದೇ ವಿಫಲವಾದ ಕಾರಣ ಅವರ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡಿದೆ ಬಿಸಿಸಿಐ, ಏಕದಿನ ತಂಡದಲ್ಲಿ ಅವರನ್ನು ಉಪನಾಯಕನ ಸ್ಥಾನದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯರನ್ನು ಉಪನಾಕನನ್ನಾಗಿ ನೇಮಕ ಮಾಡಲಾಗಿದೆ. ಆರಂಭಿಕರಾಗಿ ಆಡುತ್ತಿದ್ದ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಆಡಲು ಹೇಳಲಾಗಿದೆ. ಅಲ್ಲದೆ ಅವರು ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

IND vs NZ : ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸ್ಟಾರ್ ಆಲ್‌ರೌಂಡರ್ ವಾಪಸ್, ಸಂಜು ಸ್ಯಾಮ್ಸನ್ ಆಯ್ಕೆ ಅನುಮಾನIND vs NZ : ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸ್ಟಾರ್ ಆಲ್‌ರೌಂಡರ್ ವಾಪಸ್, ಸಂಜು ಸ್ಯಾಮ್ಸನ್ ಆಯ್ಕೆ ಅನುಮಾನ

ರಿಷಬ್ ಪಂತ್ ಅಪಘಾತದಲ್ಲಿ ಗಾಯಗೊಂಡ ಬಳಿಕ ಅವರು 2023ರಲ್ಲಿ ಕ್ರಿಕೆಟ್ ಆಡುವುದು ಅನುಮಾನವಾಗಿದೆ. ಆದರೂ, ಭಾರತ ತಂಡದಲ್ಲಿ ಅವಕಾಶಕ್ಕಾಗಿ ಹಲವು ವಿಕೆಟ್ ಕೀಪರ್ ಬ್ಯಾಟರ್ ಕಾಯುತ್ತಿದ್ದಾರೆ. ಕೆಎಲ್ ರಾಹುಲ್‌ ತಮ್ಮ ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

 ಸ್ಯಾಮ್ಸನ್, ಇಶಾನ್ ಕಿಶನ್

ಸ್ಯಾಮ್ಸನ್, ಇಶಾನ್ ಕಿಶನ್

ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್‌ಗೆ ಶ್ರೀಲಂಕಾ ವಿರುದ್ಧದ ಸರಣಿಯೇ ಕೊನೆಯ ಅವಕಾಶ ಎನ್ನಲಾಗಿದೆ. ಈ ಸರಣಿಯಲ್ಲಿ ಅವರು ತಮ್ಮ ಫಾರ್ಮ್ ಕಂಡುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗುತ್ತದೆ.

ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಹೊರತಾಗಿಯೋ ಇಶಾನ್ ಕಿಶನ್ ಬೆಂಚ್ ಕಾಯುತ್ತಿದ್ದಾರೆ. ಸಂಜು ಸ್ಯಾಮ್ಸನ್ ಕೂಡ ಆಯ್ಕೆಯ ರೇಸ್‌ನಲ್ಲಿದ್ದಾರೆ. ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಆಯ್ಕೆಯಾದರು, ಮೊದಲನೇ ಪಂದ್ಯದಲ್ಲಿ ಮೊಣಕಾಲಿಗೆ ಗಾಯ ಮಾಡಿಕೊಂಡು ಸರಣಿಯಿಂದ ಹೊರಗುಳಿದರು.

ಪಾಕಿಸ್ತಾನ vs ನ್ಯೂಜಿಲೆಂಡ್: 2ನೇ ಪಂದ್ಯ ಸೋತ ಪಾಕ್ ಪಡೆಗೆ ಚಾಟಿ ಬೀಸಿದ ಶೋಯೆಬ್ ಅಖ್ತರ್

ಇದೇ ಕೊನೆ ಅವಕಾಶ

ಇದೇ ಕೊನೆ ಅವಕಾಶ

"ಕೆಎಲ್ ರಾಹುಲ್ ಈಗ ಒತ್ತಡದಲ್ಲಿದ್ದಾರೆ. ಆತ ಪ್ರತಿಭಾವಂತ ಕ್ರಿಕೆಟಿಗ, ಆದರೆ ಅದು ಈಗ ಮುಖ್ಯವಾಗುವುದಿಲ್ಲ. ಆಯ್ಕೆದಾರರು ಈಗ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ತಂಡದ ಮ್ಯಾನೇಜ್‌ಮೆಂಟ್ ಬೆಂಬಲ ನೀಡುತ್ತಿದೆ. ಆದರೆ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವರು ವಿಫಲವಾದರೆ, ಅವರು ಮುಂದಿನ ಸರಣಿಯಲ್ಲಿ ಅವಕಾಶ ಪಡೆಯುವುದು ಅನುಮಾನವಾಗುತ್ತದೆ" ಎಂದು ಬಿಸಿಸಿಐನ ಹತ್ತಿರದ ಮೂಲ ತಿಳಿಸಿದೆ ಎಂದು ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮಾತನಾಡಿ "ಕೆಎಲ್‌ ರಾಹುಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅವರು ಔಟಾಗಿರುವುದು ಉತ್ತಮ ಎಸೆತಗಳಲ್ಲಿ ಅಲ್ಲ, ಕಳಪೆ ಶಾಟ್ ಆಯ್ಕೆಯಿಂದ" ಎಂದು ಹೇಳಿದ್ದಾರೆ.

"ಕೆಎಲ್ ರಾಹುಲ್‌ಗೆ ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಅವರು ತಮ್ಮ ಬ್ಯಾಟಿಂಗ್‌ ಸುಧಾರಣೆ ಮಾಡಿಕೊಳ್ಳಬೇಕು, ಅವರ ಬ್ಯಾಟಿಂಗ್ ದೋಷ ಸರಿಪಡಿಸಲು ತರಬೇತುದಾರರು ಇದ್ದಾರೆ. ಬ್ಯಾಟಿಂಗ್ ಮೇಲೆ ಅವರು ಕೆಲಸ ಮಾಡಬೇಕು" ಎಂದು ಹೇಳಿದರು.

2021ರ ಆರಂಭದಿಂದ ಕಳಪೆ ಫಾರ್ಮ್

2021ರ ಆರಂಭದಿಂದ ಕಳಪೆ ಫಾರ್ಮ್

ಕಳೆದ 18 ತಿಂಗಳುಗಳಿಂದ ಕೆಎಲ್ ರಾಹುಲ್ ಅಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಅವರು ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ, ಔಟಾದ ವಿಧಾನ, ಫಿಟ್ನೆಸ್ ಸಮಸ್ಯೆ ಆಯ್ಕೆದಾರರ ತಲೆನೋವಿಗೆ ಕಾರಣವಾಗಿದೆ.

2022 ಜನವರಿ 1 ರಿಂದ ಇದುವರೆಗೂ ಅವರು 11 ಏಕದಿನ ಪಂದ್ಯಗಳನ್ನು ಆಡಿದ್ದು, 29ರ ಸರಾಸರಿಯಲ್ಲಿ 290 ರನ್ ಗಳಿಸಿದ್ದಾರೆ. ಇದೇ ಅವಧಿಯಲ್ಲಿ 16 ಟಿ20 ಪಂದ್ಯಗಳನ್ನಾಡಿದ್ದು, 28.93 ಸರಾಸರಿಯಲ್ಲಿ 434 ರನ್ ಗಳಿಸಿದ್ದಾರೆ. 4 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 17.12 ಸರಾಸರಿಯಲ್ಲಿ 117 ರನ್‌ ಗಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, January 12, 2023, 15:25 [IST]
Other articles published on Jan 12, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X