ಭಾರತ ವಿರುದ್ಧದ ಟಿ20 ಸರಣಿಗೆ 16 ಆಟಗಾರರ ತಂಡ ಪ್ರಕಟಿಸಿದ ವಿಂಡೀಸ್; ತಂಡಕ್ಕೆ ಮರಳಿದ ಬಲಿಷ್ಠ ಆಟಗಾರ

ಸದ್ಯ ವೆಸ್ಟ್ ಇಂಡೀಸ್ ನೆಲದಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಕೆರಿಬಿಯನ್ನರ ವಿರುದ್ಧದ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಇತ್ತಂಡಗಳ ನಡುವೆ ಆಯೋಜನೆಯಾಗಿದ್ದ 3 ಪಂದ್ಯಗಳ ಏಕದಿನ ಸರಣಿ ಈಗಾಗಲೇ ಮುಕ್ತಾಯಗೊಂಡಿದ್ದು, ಈ ಸರಣಿಯ ಎಲ್ಲಾ ಪಂದ್ಯಗಳನ್ನೂ ಗೆದ್ದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡಕ್ಕೆ ಅವರ ತವರಿನಲ್ಲಿಯೇ ವೈಟ್ ವಾಷ್ ಮುಖಭಂಗ ಮಾಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಾಯಿಂಟ್ಸ್‌ ಅಪ್‌ಡೇಟ್‌: ಐದನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಾಯಿಂಟ್ಸ್‌ ಅಪ್‌ಡೇಟ್‌: ಐದನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

ಹೀಗೆ ಏಕದಿನ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋತು ಭಾರೀ ಮುಖಭಂಗಕ್ಕೆ ಒಳಗಾಗಿರುವ ವೆಸ್ಟ್ ಇಂಡೀಸ್ ಇದೀಗ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯುತ್ತಿದೆ. ಈ ಹಿಂದೆ ಕೇವಲ ಏಕದಿನ ಸರಣಿಗೆ ಮಾತ್ರ ತಂಡವನ್ನು ಪ್ರಕಟಿಸಿದ್ದ ವೆಸ್ಟ್ ಇಂಡೀಸ್ ಟಿ ಟ್ವೆಂಟಿ ಸರಣಿಗೆ ತಂಡವನ್ನು ಪ್ರಕಟಿಸಿರಲಿಲ್ಲ. ಆದರೆ ಇದೀಗ ಟಿ ಟ್ವೆಂಟಿ ಸರಣಿಯ ಪ್ರಥಮ ಪಂದ್ಯ ( ಪ್ರಥಮ ಪಂದ್ಯ ಜುಲೈ 29ರಂದು ನಡೆಯಲಿದೆ ) ಆರಂಭವಾಗುವುದಕ್ಕೂ ಹಿಂದಿನ ದಿನ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ 16 ಆಟಗಾರರ ತಂಡವನ್ನು ಟೀಮ್ ಇಂಡಿಯಾ ವಿರುದ್ಧದ 5 ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಿದೆ.

ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ಮರು ಪ್ರಶ್ನೆಯೇ ಇಲ್ಲ: ವಿಶ್ವನಾಥ್ ಆನಂದ್ಚೆಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ಮರು ಪ್ರಶ್ನೆಯೇ ಇಲ್ಲ: ವಿಶ್ವನಾಥ್ ಆನಂದ್

ವೆಸ್ಟ್ ಇಂಡೀಸ್ ತಂಡವನ್ನು ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕನಾಗಿ ಮುನ್ನಡೆಸಿದ್ದ ನಿಕೊಲಸ್ ಪೂರನ್ ಅವರೇ ಈ ಟಿ ಟ್ವೆಂಟಿ ತಂಡವನ್ನು ಕೂಡ ನಾಯಕನಾಗಿ ಮುನ್ನಡೆಸಲಿದ್ದಾರೆ ಹಾಗೂ ರೋವ್ಮನ್ ಪೊವೆಲ್ ಉಪನಾಯಕನಾಗಿದ್ದಾರೆ. ಹೀಗೆ ಭಾರತದ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಆಟಗಾರರ ಪಟ್ಟಿ ಮುಂದೆ ಇದೆ ಓದಿ.

ವೆಸ್ಟ್ ಇಂಡೀಸ್ ಪ್ರಕಟಿಸಿರುವ ತಂಡ

ವೆಸ್ಟ್ ಇಂಡೀಸ್ ಪ್ರಕಟಿಸಿರುವ ತಂಡ

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆಯಲಿರುವ 5 ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಿಸಿರುವ 16 ಆಟಗಾರರ ಸ್ಕ್ವಾಡ್ ಹೀಗಿದೆ: ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಶಮರ್ ಬ್ರೂಕ್ಸ್, ಡೊಮಿನಿಕ್ ಡ್ರೇಕ್ಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ಕೀಮೋ ಪಾಲ್, ರೊಮಾರಿಯೊ ಶೆಫರ್ಡ್, ಒಡಿಯನ್ ಸ್ಮಿತ್, ಡೆವಿನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್

ತಂಡಕ್ಕೆ ಮರಳಿದ ಬಲಿಷ್ಠ ಆಟಗಾರ, ಕೆಲವರು ಗೈರು

ತಂಡಕ್ಕೆ ಮರಳಿದ ಬಲಿಷ್ಠ ಆಟಗಾರ, ಕೆಲವರು ಗೈರು

ವೆಸ್ಟ್ ಇಂಡೀಸ್ ಪ್ರಕಟಿಸಿರುವ ಈ 16 ಆಟಗಾರರನ್ನೊಳಗೊಂಡ ತಂಡದಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಟಗಾರ ಶಿಮ್ರಾನ್ ಹೆಟ್ಮಾಯೆರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷ ಯುಎಇಯಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯದಾಗಿ ತಮ್ಮ ತಂಡವನ್ನು ಪ್ರತಿನಿಧಿಸಿದ್ದ ಶಿಮ್ರಾನ್ ಹೆಟ್ಮಾಯೆರ್ ಫಿಟ್‌ನೆಸ್ ಸಮಸ್ಯೆಯಿಂದ ಹೊರಗುಳಿದಿದ್ದರು. ಸದ್ಯ ಫಿಟ್‌ನೆಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಶಿಮ್ರಾನ್ ಹೆಟ್ಮಾಯೆರ್ ಹಲವು ತಿಂಗಳುಗಳ ಬಳಿಕ ತಂಡದ ಪರ ಕಣಕ್ಕಿಳಿಯಲಿದ್ದಾರೆ ಹಾಗೂ ಹೆಟ್ಮಾಯೆರ್ ಪುನರಾಗಮನ ತಂಡಕ್ಕೆ ಬಲ ಒದಗಿಸಿದೆ. ಇನ್ನು ತಂಡದ ಆರಂಭಿಕ ಆಟಗಾರ ಎವಿನ್ ಲೆವಿಸ್ ಈ ಬಾರಿಯೂ ಕೂಡ ಅಲಭ್ಯರಾಗಿದ್ದು, ಏಕದಿನ ಸರಣಿಯ ವೇಳೆ ಗಾಯಕ್ಕೊಳಗಾಗಿದ್ದ ಗುಡಕೇಶ್ ಮೋಟಿ ಕೂಡ ತಂಡದಿಂದ ಹೊರಬಿದ್ದಿದ್ದಾರೆ. ಇನ್ನುಳಿದಂತೆ ತಂಡದ ಪ್ರಮುಖ ಆಟಗಾರರಾದ ಫ್ಯಾಬಿಯನ್ ಅಲೆನ್ ಮತ್ತು ಶೆಲ್ಡನ್ ಕಾಟ್ರೆಲ್ ಕೂಡ ಈ ಸರಣಿಗೆ ಅಲಭ್ಯರಾಗಿದ್ದಾರೆ.

ಸರಣಿಗೆ ಪ್ರಕಟವಾಗಿರುವ ಟೀಮ್ ಇಂಡಿಯಾ

ಸರಣಿಗೆ ಪ್ರಕಟವಾಗಿರುವ ಟೀಮ್ ಇಂಡಿಯಾ

ವೆಸ್ಟ್ ಇಂಡೀಸ್ ಟಿ ಟ್ವೆಂಟಿ ಸರಣಿಗೆ ಇದೀಗ ತಂಡವನ್ನು ಪ್ರಕಟಿಸಿದ್ದರೆ, ಟೀಂ ಇಂಡಿಯಾ ಈ ಹಿಂದೆಯೇ ಪ್ರಕಟ ಮಾಡಿತ್ತು. ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ಕಾರಣದಿಂದಾಗಿ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಟಿ ಟ್ವೆಂಟಿ ಸರಣಿಗೆ ಮರಳಿದ್ದು ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಟಿ ಟ್ವೆಂಟಿ ಸರಣಿಗೆ ಪ್ರಕಟಗೊಂಡಿರುವ ಭಾರತ ತಂಡ ಹೀಗಿದೆ: ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಶಮರ್ ಬ್ರೂಕ್ಸ್, ಡೊಮಿನಿಕ್ ಡ್ರೇಕ್ಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ಕೀಮೋ ಪಾಲ್, ರೊಮಾರಿಯೊ ಶೆಫರ್ಡ್, ಒಡೆವನ್ ಶೆಫರ್ಡ್, ಥಾಮಸ್, ಹೇಡನ್ ವಾಲ್ಷ್ ಜೂನಿಯರ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, July 29, 2022, 9:58 [IST]
Other articles published on Jul 29, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X