ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM: 3ನೇ ಏಕದಿನ ಪಂದ್ಯದ ಸಮಯ, ಸ್ಥಳ, ಲೈವ್‌ಸ್ಟ್ರೀಮ್, ಸಂಭಾವ್ಯ ತಂಡಗಳು

IND vs ZIM: India vs Zimbabwe 3rd ODI Time, Venue, Livestream and Prediction Teams

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಲು ಭಾರತ ಕ್ರಿಕೆಟ್ ತಂಡವು ಎದುರು ನೋಡುತ್ತಿದ್ದರೆ, ಆತಿಥೇಯ ಜಿಂಬಾಬ್ವೆ ತಂಡ ಹೋರಾಟ ನೀಡಲೂ ಸಹ ಹೆಣಗಾಡುತ್ತಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಯಾವುದೇ ಹಂತದಲ್ಲಿ ತಿರುಗೇಟು ನೀಡದೆ ಎಲ್ಲಾ ವಿಭಾಗಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ.

ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿ ಎದುರಾಳಿಗಳನ್ನು ಸೋಲಿಸಿದ ಭಾರತ ತಂಡ, ಸೋಮವಾರ (ಆಗಸ್ಟ್ 22)ದಂದು ಹರಾರೆ ಕ್ರೀಡಾ ಕ್ಲಬ್‌ನಲ್ಲಿ ನಡೆಯುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿಯೂ ಗೆಲುವಿನ ಸರಮಾಲೆಯನ್ನು ಮುಂದುವರೆಸುವ ಸಾಧ್ಯತೆ ಇದೆ.

ರಿಷಭ್ ಪಂತ್ ಫಿನಿಶರ್ ಅಲ್ಲ; ಏಷ್ಯಾ ಕಪ್ 2022ಕ್ಕೂ ಮುನ್ನ ಮಾಜಿ ಕ್ರಿಕೆಟಿಗನಿಂದ ಶಾಕಿಂಗ್ ಹೇಳಿಕೆ!ರಿಷಭ್ ಪಂತ್ ಫಿನಿಶರ್ ಅಲ್ಲ; ಏಷ್ಯಾ ಕಪ್ 2022ಕ್ಕೂ ಮುನ್ನ ಮಾಜಿ ಕ್ರಿಕೆಟಿಗನಿಂದ ಶಾಕಿಂಗ್ ಹೇಳಿಕೆ!

ಮುಂದಿನ ವರ್ಷದ ಐಸಿಸಿ 50-ಓವರ್ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡ ಕೆಲವು ಬದಲಾವಣೆ ಮಾಡಲಿದೆ. ಹಂಗಾಮಿ ನಾಯಕ ಕೆಎಲ್ ರಾಹುಲ್ ಅವರನ್ನೊಳಗೊಂಡಂತೆ ಇತರ ಆಟಗಾರ ಉತ್ತಮ ಪ್ರದರ್ಶನ ನೀಡಲು ಪ್ರಯತ್ನ ಹಾಕಲಿದ್ದಾರೆ. ಮುಂಬರುವ ದಿನಗಳಲ್ಲಿ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಸೇರಿದಂತೆ ದೊಡ್ಡ ಸೆಣಸಾಟಗಳಿಗೆ ಸಜ್ಜಾಗುತ್ತಿರುವ ತಂಡದಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಯೋಜಿಸಿದ್ದಾರೆ.

50 ಓವರ್ ಮಾದರಿಯಲ್ಲಿ ಶಿಖರ್ ಧವನ್ ಉತ್ತಮ

50 ಓವರ್ ಮಾದರಿಯಲ್ಲಿ ಶಿಖರ್ ಧವನ್ ಉತ್ತಮ

ಎರಡನೇ ಪಂದ್ಯದಲ್ಲಿ 161 ಆಲೌಟ್ ಆಗಿರುವುದು ಆತಿಥೇಯ ತಂಡವು ತನ್ನ ಬ್ಯಾಟಿಂಗ್ ಸಮಸ್ಯೆಗಳಿಗೆ ತ್ವರಿತ ಪರಿಹಾರವನ್ನು ಹುಡುಕುವುದನ್ನು ಮುಂದುವರೆಸಿದೆ. ಆದರೆ ಬೌಲರ್‌ಗಳು ಕೆಲವು ಉನ್ನತ ಏಕದಿನ ಆಟಗಾರರನ್ನು ಹೊಂದಿರುವ ಭಾರತೀಯ ಬ್ಯಾಟಿಂಗ್ ಲೈನ್-ಅಪ್‌ಗೆ ತೊಂದರೆ ನೀಡಲು ಸಾಧ್ಯವಾಗುವುದಿಲ್ಲ. ಭಾರತದ ಶ್ರೇಣಿಯಲ್ಲಿರುವ ಆಟಗಾರರು ಹೇಗಿದ್ದಾರೆಂದರೆ, 50 ಓವರ್ ಮಾದರಿಯಲ್ಲಿ ಶಿಖರ್ ಧವನ್ ಅವರ ಅಂಕಿಅಂಶಗಳನ್ನು ನೋಡಬಹುದು.

ಪ್ರತಿಭಾನ್ವಿತ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರು ಜಿಂಬಾಬ್ವೆ ಪ್ರವಾಸದಲ್ಲಿ ಇಲ್ಲಿಯವರೆಗೆ ಸಾಧಿಸಿದ್ದರಲ್ಲಿ ತೃಪ್ತರಾಗಬಾರದು ಮತ್ತು ಅವರು ಖಂಡಿತವಾಗಿಯೂ ಜಿಂಬಾಬ್ವೆ ಬೌಲರ್‌ಗಳನ್ನು ಎದುರಿಸಲು ಪ್ರಯತ್ನಿಸುತ್ತಾರೆ.

ಭಾರತದ ಅತ್ಯುತ್ತಮ ಬೌಲಿಂಗ್ ವಿಭಾಗ

ಭಾರತದ ಅತ್ಯುತ್ತಮ ಬೌಲಿಂಗ್ ವಿಭಾಗ

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸದ ನಾಯಕ ಕೆಎಲ್ ರಾಹುಲ್ ಎರಡನೇ ಪಂದ್ಯದಲ್ಲಿ ಆರಂಭಿಕರಾಗಿ ಬಡ್ತಿ ಪಡೆದು ಬಂದರು. ಆದರೆ ಐದು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ವಿಫಲರಾದರು. ಮೂರನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತೊಮ್ಮೆ ಮೊದಲ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಲಿದ್ದಾರೆ.

ಮುಂಚೂಣಿ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಬೌಲಿಂಗ್ ವಿಭಾಗವು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ಅದು ಏನು ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ತೋರಿಸಿದೆ. ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ ಮತ್ತು ಅಕ್ಷರ್ ಪಟೇಲ್ ಅವರಂತಹ ಬದ್ಧತೆಯ ಬೌಲರ್‌ಗಳು ಆತಿಥೇಯ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುತ್ತಿದ್ದಾರೆ.

ಭಾರತ ಮತ್ತು ಜಿಂಬಾಬ್ವೆ 3ನೇ ಏಕದಿನ ಪಂದ್ಯದ ವಿವರ

ಭಾರತ ಮತ್ತು ಜಿಂಬಾಬ್ವೆ 3ನೇ ಏಕದಿನ ಪಂದ್ಯದ ವಿವರ

ಭಾರತ ಮತ್ತು ಜಿಂಬಾಬ್ವೆ 3ನೇ ಏಕದಿನ ಪಂದ್ಯ ಯಾವಾಗ ನಡೆಯಲಿದೆ?
ಭಾರತ ಮತ್ತು ಜಿಂಬಾಬ್ವೆ 3ನೇ ಏಕದಿನ ಪಂದ್ಯ ಸೋಮವಾರ (ಆಗಸ್ಟ್ 22) ನಡೆಯಲಿದೆ.

ಭಾರತ ಮತ್ತು ಜಿಂಬಾಬ್ವೆ 3ನೇ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ಜಿಂಬಾಬ್ವೆ ನಡುವಿನ 3ನೇ ಏಕದಿನ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.

ಭಾರತ vs ಜಿಂಬಾಬ್ವೆ 3ನೇ ಏಕದಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಭಾರತ vs ಜಿಂಬಾಬ್ವೆ 3ನೇ ಏಕದಿನ ಪಂದ್ಯವು ಭಾರತೀಯ ಕಾಲಮಾನ 12.45 PM ಕ್ಕೆ ಪ್ರಾರಂಭವಾಗಲಿದೆ.

ಭಾರತದಲ್ಲಿ ಟಿವಿಯಲ್ಲಿ ಭಾರತ vs ಜಿಂಬಾಬ್ವೆ 3ನೇ ಏಕದಿನ ಪಂದ್ಯವನ್ನು ಹೇಗೆ ವೀಕ್ಷಿಸಬಹುದು?
ಭಾರತ vs ಜಿಂಬಾಬ್ವೆ 3ನೇ ಏಕದಿನ ಪಂದ್ಯವು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿರುತ್ತದೆ.

ಭಾರತ vs ಜಿಂಬಾಬ್ವೆ 3ನೇ ಏಕದಿನ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ಬರುತ್ತದೆ?
ಭಾರತ vs ಜಿಂಬಾಬ್ವೆ 3ನೇ ಏಕದಿನ ಪಂದ್ಯವನ್ನು SonyLiv ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಭಾರತ ಮತ್ತು ಜಿಂಬಾಬ್ವೆ ಪೂರ್ಣ ತಂಡಗಳು

ಭಾರತ ಮತ್ತು ಜಿಂಬಾಬ್ವೆ ಪೂರ್ಣ ತಂಡಗಳು

ಭಾರತ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ನದೀಮ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.

ಜಿಂಬಾಬ್ವೆ: ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಂಗಾ, ಬ್ರಾಡ್ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನ್ನೋಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ರಿಚರ್ಡ್ ನಾಗರವಾ, ವಿಕ್ಟರ್ ನ್ಯೌಚಿ, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ

Story first published: Monday, August 22, 2022, 8:20 [IST]
Other articles published on Aug 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X