ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್: ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿ ಅಫ್ಘಾನಿಸ್ತಾನ

india afghanistan test match 2nd day report followon

ಬೆಂಗಳೂರು, ಜೂನ್ 15: ಟೆಸ್ಟ್ ಕ್ರಿಕೆಟ್ ಆಡಲು ಅಫ್ಘಾನಿಸ್ತಾನದ ತಂಡ ಆಟಗಾರರು ಇನ್ನೂ ಸಾಕಷ್ಟು ತಯಾರಿ ನಡೆಸಬೇಕು ಎನ್ನುವುದು ಭಾರತದ ವಿರುದ್ಧದ ಅದರ ಮೊದಲ ಇನ್ನಿಂಗ್ಸ್ ಆಟ ಸಾಬೀತುಪಡಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 109 ರನ್‌ಗೆ ಆಲೌಟ್ ಆಗಿ 365 ರನ್‌ಗಳ ಹಿನ್ನಡೆ ಅನುಭವಿಸಿದ ಅಫ್ಘಾನಿಸ್ತಾನದ ತಂಡದ ಮೇಲೆ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಫಾಲೊಆನ್ ಹೇರಿದ್ದು, ಎರಡನೆಯ ಇನ್ನಿಂಗ್ಸ್‌ನಲ್ಲಿಯೂ ಪಟಪಟನೆ ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಕೆಎಲ್ ರಾಹುಲ್ ರನ್ನು ಭಾರತದ ಜೋ ರೂಟ್ ಎಂದು ಕರೆದಿದ್ದೇಕೆ?ಕೆಎಲ್ ರಾಹುಲ್ ರನ್ನು ಭಾರತದ ಜೋ ರೂಟ್ ಎಂದು ಕರೆದಿದ್ದೇಕೆ?

ಏಕದಿನ ಮತ್ತು ಟಿ 10ಯ ಗುಂಗಿನಿಂದ ಹೊರಬರದ ಆಫ್ಘನ್ ಆಟಗಾರರು ದೀರ್ಘಾವಧಿಯ ಕ್ರಿಕೆಟ್ ಆಡಲು ಇನ್ನೂ ಮಾನಸಿಕವಾಗಿ ಸಿದ್ಧತೆ ನಡೆಸಬೇಕಾಗಿದೆ.

ಮಳೆಯ ಕಾಟದ ನಡುವೆಯೂ ಕೇವಲ ಎರಡೇ ದಿನಕ್ಕೆ ಆಫ್ಘನ್ ಆಟ ಮುಕ್ತಾಯವಾಗುವ ಸಾಧ್ಯತೆ ಇದೆ.

ಭೋಜನ ವಿರಾಮಕ್ಕೂ ಮುಂಚೆ ಶತಕ, ಧವನ್ ದಾಖಲೆಭೋಜನ ವಿರಾಮಕ್ಕೂ ಮುಂಚೆ ಶತಕ, ಧವನ್ ದಾಖಲೆ

ಇನ್ನಿಂಗ್ಸ್‌ನ ಆರಂಭದಲ್ಲಿಯೇ ವಿಕೆಟ್‌ಗಳನ್ನು ಕಳೆದುಕೊಂಡ ಆಫ್ಘನ್ ಆಟಗಾರರು ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಆರ್. ಅಶ್ವಿನ್ ಆಫ್ ಸ್ಪಿನ್ ಮೋಡಿಗೆ ಸುಲಭವಾಗಿ ವಿಕೆಟ್ ಒಪ್ಪಿಸಿದರು.

ಆಫ್ಘನ್ ಪರ ಮೊಹಮದ್ ನಬಿ 24 ರನ್ ಗಳಿಸಿದ್ದೇ ಆಟಗಾರನ ಗರಿಷ್ಠ ವೈಯಕ್ತಿಕ ಸ್ಕೋರ್ ಎನಿಸಿಕೊಂಡಿತು. ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವ ಅವಕಾಶವನ್ನು ಆಫ್ಘನ್ ಆಟಗಾರರು ಬಹುತೇಕ ಕೈತಪ್ಪಿಸಿಕೊಂಡಿದ್ದಾರೆ.

ಭಾರತದ ಪರ ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ 2, ರವಿಚಂದ್ರನ್ ಅಶ್ವಿನ್ 4 ಮತ್ತು ಉಮೇಶ್ ಯಾದವ್ 1 ವಿಕೆಟ್ ಕಬಳಿಸಿದರು.

Story first published: Friday, June 15, 2018, 15:49 [IST]
Other articles published on Jun 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X