ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Team India's 1000th ODI: ವಿಶ್ವ ದಾಖಲೆಯ 1000ನೇ ಏಕದಿನ ಪಂದ್ಯವನ್ನಾಡಲಿರುವ ಭಾರತ: ಇದುವರೆಗೆ ಗೆದ್ದಿದ್ದೆಷ್ಟು, ಸೋತಿದೆಷ್ಟು?

Team india

ಫೆಬ್ರವರಿ 6ರಿಂದ ನಡೆಯಲಿರುವ ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ಆತಿಥ್ಯ ವಹಿಸುತ್ತಿರುವ ಅಹಮದಾಬಾದ್‌ ಕೋವಿಡ್-19 ಕಾರಣಗಳಿಂದಾಗಿ ಇಡೀ ಸರಣಿಯ ವೇದಿಕೆಯಾಗಿದೆ. ಕೊರೊನಾದಿಂದಾಗಿ ಏಕದಿನ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಮೈದಾನದಲ್ಲಿ ಅವಕಾಶವಿಲ್ಲ.

ಮೂಲ ವೇಳಾಪಟ್ಟಿಯ ಪ್ರಕಾರ ಅಹಮದಾಬಾದ್, ಜೈಪುರ ಮತ್ತು ಕೋಲ್ಕತ್ತಾದಲ್ಲಿ 3 ಏಕದಿನ ಪಂದ್ಯಗಳು ನಡೆಯಬೇಕಿತ್ತು. ಇನ್ನು ಮೂರು ಟಿ20 ಪಂದ್ಯಗಳು ಕಟಕ್, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲಿ ನಡೆಯಲು ಯೋಜಿಸಲಾಗಿತ್ತು. ಆದರೆ ಕೊರೊನಾದಿಂದಾಗಿ ಬಿಸಿಸಿಐ ಒಂದೇ ಸ್ಟೇಡಿಯಂನಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳನ್ನು ನಡೆಸಲು ನಿರ್ಧರಿಸಿದೆ. ಅಹಮದಾಬಾದ್‌ನಲ್ಲಿ 3 ಏಕದಿನ ಪಂದ್ಯಗಳು ಮತ್ತು ಕೋಲ್ಕತ್ತಾದಲ್ಲಿ 3 ಟಿ20 ಪಂದ್ಯಗಳು ನಡೆಯಲಿವೆ.

ಐತಿಹಾಸಿಕ 1000ನೇ ಏಕದಿನ ಪಂದ್ಯವನ್ನಾಡಲಿರುವ ಭಾರತ

ಐತಿಹಾಸಿಕ 1000ನೇ ಏಕದಿನ ಪಂದ್ಯವನ್ನಾಡಲಿರುವ ಭಾರತ

ಇದೇ 6ರಂದು ನಡೆಯಲಿರುವ ಏಕದಿನ ಪಂದ್ಯದ ಮೂಲಕ ಟೀಂ ಇಂಡಿಯಾ 1000 ಏಕದಿನ ಪಂದ್ಯಗಳ ಮೈಲುಗಲ್ಲು ತಲುಪಲಿದೆ. ಇದುವರೆಗೆ 999 ಏಕದಿನ ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಇದೇ 6ರಂದು ವಿಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ 1000 ಏಕದಿನ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಅಪರೂಪದ ಸಾಧನೆ ಮಾಡಲಿದೆ.

ಶೇಕಡಾ 54.5ರಷ್ಟು ಗೆಲುವನ್ನ ಸಾಧಿಸಿರುವ ಟೀಂ ಇಂಡಿಯಾ

ಶೇಕಡಾ 54.5ರಷ್ಟು ಗೆಲುವನ್ನ ಸಾಧಿಸಿರುವ ಟೀಂ ಇಂಡಿಯಾ

ಭಾರತದ ಇದುವರೆಗೂ 999 ಏಕದಿನ ಪಂದ್ಯಗಳನ್ನಾಡಿದ್ದು, ಇದರಲ್ಲಿ 518 ಪಂದ್ಯ ಗೆಲುವು, 431 ಪಂದ್ಯಗಳಲ್ಲಿ ಸೋಲು ಮತ್ತು 9 ಪಂದ್ಯ ಟೈ ಆಗಿದೆ. ಇನ್ನು 41 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಂದಿಲ್ಲ. ಈ ಮೂಲಕ ಭಾರತ ಒಟ್ಟಾರೆಯಾಗಿ ಶೇಕಡಾ 54.54ರಷ್ಟು ಗೆಲುವಿನ ಸರಾಸರಿ ಹೊಂದಿದೆ.

ಭಾರತ vs ವಿಂಡೀಸ್: ತಂಡಕ್ಕೆ ಒಳ್ಳೆ ಆಟಗಾರರು ಬೇಕು ಎಂದಿದ್ದ ರಾಹುಲ್‌ಗೆ ರೋಹಿತ್ ಶರ್ಮಾ ಪ್ರತ್ಯುತ್ತರ?

ಏಕದಿನ ಫಾರ್ಮೆಟ್‌ನಲ್ಲಿ ಆಸ್ಟ್ರೇಲಿಯಾದ ಮೇಲುಗೈ

ಏಕದಿನ ಫಾರ್ಮೆಟ್‌ನಲ್ಲಿ ಆಸ್ಟ್ರೇಲಿಯಾದ ಮೇಲುಗೈ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 900ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನಾಡಿರುವ ತಂಡಗಳಲ್ಲಿ ಭಾರತ ಹೊರತುಪಡಿಸಿ ಆಸ್ಟ್ರೇಲಿಯಾ 958, ಪಾಕಿಸ್ತಾನ 936 ಹಾಗೂ ಭಾರತ 999 ಪಂದ್ಯಗಳನ್ನಾಡಿದ ರಾಷ್ಟ್ರಗಳಾಗಿವೆ. ಈ ಮೂವರಲ್ಲಿ ಅತಿ ಹೆಚ್ಚು ಏಕದಿನ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಹೆಚ್ಚಿನ ಗೆಲುವಿನ ಸರಾಸರಿ ಹೊಂದಿದೆ.

ಆಸ್ಟ್ರೇಲಿಯಾ ಆಡಿರುವ 958 ಏಕದಿನ ಪಂದ್ಯಗಳಲ್ಲಿ 581 ಗೆಲುವು, 334 ಸೋಲು, 9 ಟೈ, 34 ಪಂದ್ಯಗಳ ಫಲಿತಾಂಶವಿಲ್ಲ ಒಟ್ಟಾರೆ ಶೇಕಡಾ 63.36 ಗೆಲುವಿನ ಸರಾಸರಿಯನ್ನ ಹೊಂದಿದ್ದು ಮೇಲುಗೈ ಸಾಧಿಸಿದೆ.

ಇನ್ನು ಪಾಕಿಸ್ತಾನ ಆಡಿರುವ 936 ಏಕದಿನ ಪಂದ್ಯಗಳಲ್ಲಿ 490 ಗೆಲುವು, 417 ಸೋಲು, 9 ಟೈ ಹಾಗೂ 20 ಪಂದ್ಯಗಳಲ್ಲಿ ಯಾವುದೇ ಫಲಿತಾಂಶವಿಲ್ಲ. ಈ ಮೂಲಕ ಪಾಕ್ ಶೇಕಡಾ 53.98ರ ಗೆಲುವಿನ ಸರಾಸರಿ ಹೊಂದಿದೆ.

ವಿರಾಟ್ ಕೊಹ್ಲಿ ಬಳಿ ಓಡಿ ಹೋಗಿ, ಏನು ಬೇಕಾದ್ರೂ ಹೇಳು ಎಂದು ಹೇಳಿದ್ರಂತೆ ವೆಟ್ಟ್ಹೋರಿ

ಭಾರತ-ವೆಸ್ಟ್ ಇಂಡೀಸ್ ಏಕದಿನ ಸ್ಕ್ವಾಡ್

ಭಾರತ-ವೆಸ್ಟ್ ಇಂಡೀಸ್ ಏಕದಿನ ಸ್ಕ್ವಾಡ್

ಅಹಮದಾಬಾದ್‌ನಲ್ಲಿ ನಾಳೆ (ಫೆ. 6) ಮೊದಲ ಏಕದಿನ ಪಂದ್ಯವನ್ನಾಡಲಿರುವ ಉಭಯ ತಂಡಗಳ ಏಕದಿನ ಸ್ಕ್ವಾಡ್ ಈ ಕೆಳಗಿದೆ

ವೆಸ್ಟ್ ಇಂಡೀಸ್ ಏಕದಿನ ಸ್ಕ್ವಾಡ್
ಭಾರತ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 16 ಮಂದಿಯ ತಂಡವನ್ನು ಆಯ್ಕೆ ಮಾಡಿದೆ.

ವೆಸ್ಟ್ ಇಂಡೀಸ್ ODI ತಂಡ: ಕೀರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಎನ್ಕ್ರುಮಾ ಬೊನ್ನರ್, ಡ್ಯಾರೆನ್ ಬ್ರಾವೋ, ಶೇಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶೇ ಹೋಪ್, ಅಕಿಲ್ಸ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮೆರೊ ಸ್ಮಿತ್, ಓಡಿಯನ್ ಝಾಪರ್ಡ್, ಓಡಿಯನ್ ಶೆಫರ್ಡ್.


ಟೀಂ ಇಂಡಿಯಾ ಏಕದಿನ ಸ್ಕ್ವಾಡ್
ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ 18 ಸದಸ್ಯರ ಹೆಸರು ಈ ಕೆಳಗಿನಂತಿದೆ.

ಟೀಂ ಇಂಡಿಯಾ ಏಕದಿನ ಫಾರ್ಮೆಟ್‌ನ ಸ್ಕ್ವಾಡ್‌
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್

Story first published: Saturday, February 5, 2022, 15:37 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X