ಭಾರತ ವಿರುದ್ಧ 2ನೇ ದಿನವೂ ಲಂಕಾ ಬೌಲರ್ ಗಳ ಪ್ರಾಬಲ್ಯ

Posted By:

ಕೋಲ್ಕತಾ, ನವೆಂಬರ್ 17: ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಆಟದ ಆರಂಭದಲ್ಲೆ ಭಾರತ ಮತ್ತೊಂದು ವಿಕೆಟ್ ಕಳೆದುಕೊಂಡಿದೆ.

ಅಜಿಂಕ್ಯ ರಹಾನೆ ಅವರು ಪೆವಿಲಿಯನ್ ಗೆ ತೆರಳಿದ್ದು, 50 ರನ್ ಸ್ಕೋರಿಗೆ 5 ವಿಕೆಟ್ ಉದುರಿದ್ದು, ಲಂಕಾ ಬೌಲರ್ ಗಳು ಪ್ರಾಬಲ್ಯ ತೋರಿದ್ದಾರೆ. ಮಳೆಯಿಂದ ಪಂದ್ಯ ಮತ್ತೆ ಅವಧಿಗೆ ಮುನ್ನ ಅಂತ್ಯ ಕಂಡಿದ್ದು, ಭಾರತದ ಸ್ಕೋರ್ 74/5.

ಸ್ಕೋರ್ ಕಾರ್ಡ್

ಸತತ 8 ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ವಿಶ್ವದ ನಂ.1 ತಂಡ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೀಲಂಕಾ ಸಜ್ಜಾಗಿದೆ. ಯುಎಇನಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನ ವಿರುದ್ಧ 2-0 ಅಂತರದ ಗೆಲುವು ಕಂಡ ಶ್ರೀಲಂಕಾ ಉತ್ತಮ ಲಯದಲ್ಲಿದೆ.

ಮೊದಲ ದಿನದ ಆಟ ಹಾಗೂ ಪಂದ್ಯದ ಸ್ವಾರಸ್ಯ

ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ತಡವಾಗಿ ಪಂದ್ಯ ಆರಂಭವಾಯಿತು. ದಿನದ ಅಂತ್ಯಕ್ಕೆ ಭಾರತ 17/3 ಸ್ಕೋರ್ ಮಾಡಿತ್ತು.

 India Vs Sri Lanka, Kolkata Test, Day 2, Live Updates: Rahane falls cheaply too; hosts 4 down

ಎರಡನೇ ದಿನದ ಆಟ ಮುಂದುವರೆಸಿದ ಭಾರತ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿದೆ. ಶ್ರೀಲಂಕಾ ಪರ ಸುರಂಗ ಲಕ್ಮಲ್ ಸದ್ಯ 5 ರನ್ನಿತ್ತು 3 ವಿಕೆಟ್ ಕಿತ್ತಿದ್ದಾರೆ. ಉಳಿದ ಎರಡು ವಿಕೆಟ್ ಶನಕ ಪಾಲಾಗಿದೆ.

Story first published: Friday, November 17, 2017, 10:37 [IST]
Other articles published on Nov 17, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ