ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾದ ಎಲ್ಲಾ ಆಟಗಾರರ ಕೋವಿಡ್ ವರದಿ ನೆಗೆಟಿವ್: ಬಯೋಬಬಲ್‌ಗೆ ಸೇರ್ಪಡೆ ಸಾಧ್ಯತೆ

India vs Sri Lanka: Sri Lankas players tested negative in the recent RT-PCR test

ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಂಡಿದ್ದ ಶ್ರೀಲಂಕಾ ತಂಡಕ್ಕೂ ಕೊರೊನಾವೈರಸ್ ಆತಂಕವನ್ನು ಮೂಡಿಸಿದೆ. ಶ್ರೀಲಂಕಾ ತಂಡದ ಕೋಚ್ ಹಾಗೂ ದತ್ತಾಂಶ ವಿಶ್ಲೇಷಕ ಕೊರೊನಾವೈರಸ್‌ಗೆ ತುತ್ತಾಗಿರುವುದು ಪರೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು. ಆದರೆ ಶ್ರೀಲಂಕಾ ಆಟಗಾರರು ನಿಟ್ಟುಸಿರು ಬಿಡುವಂತಾ ಸುದ್ದಿಯೊಂದು ಹೊರಬಿದ್ದಿದೆ. ಶ್ರೀಲಂಕಾ ಆಟಗಾರರ ಇತ್ತೀಚಿನ ಕೋವಿಡ್ ರಿಪೋರ್ಟ್ ಬಂದಿದ್ದು ಎಲ್ಲಾ ಆಟಗಾರರು ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ತಂಡದ ಎಲ್ಲಾ ಆಟಗಾರರು ಅನುಭವಿಗಳಾದ ಕುಸಲ್ ಪೆರೆರಾ, ದುಷ್ಮಂತ್ ಚಮೀರಾ ಮತ್ತಿ ಧನಂಜಯ ಡಿಸಿಲ್ವ ಅವರನ್ನೂ ಒಳಗೊಂಡಂತೆ ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಶ್ರೀಲಂಕಾ ಕ್ರಿಕೆಟ್ ಈ ಪರೀಕ್ಷೆಯನ್ನು ನಡೆಸಿತ್ತು.

ಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ

ಈ ವರದಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟಿಗರು ಸೋಮವಾರ ಬಯೋಬಬಲ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್‌ನಿಂದ ಶ್ರೀಲಂಕಾಗೆ ಬಂದಿಳಿದ ಬಳಿಕ ಲಂಕಾ ಕ್ರಿಕೆಟಿಗರು ಸರಿ ಸುಮಾರು ಒಂದು ವಾರಗಳ ಕಾಲ ಕಠಿಣ ಕ್ವಾರಂಟೈನ್‌ನಲ್ಲಿದ್ದಾರೆ. ಈ ಸರಣಿ ಪೂರ್ವ ನಿಗದಿಯ ಪ್ರಕಾರ ಜುಲೈ 13ರಿಂದ ಆರಂಭವಾಗಬೇಕಾಗಿತ್ತು. ಆದರೆ ಕೊರೊನಾ ಪ್ರಕರಣಗಳ ಕಾರಣದಿಂದಾಗಿ ಐದು ದಿನಗಳ ಕಾಲ ತಡವಾಗಿ ಆರಂಭವಾಗಲಿದೆ.

ಇನ್ನು ಕೊರೊನಾವೈರಸ್‌ಗೆ ತುತ್ತಾಗಿರುವ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಹಾಗೂ ದತ್ತಾಂಶ ವಿಶ್ಲೇಷಕ ನಿರೋಶನ್ ಅಬರ ಆರೋಗ್ಯದ ಬಗ್ಗೆ ಇದೇ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಾಹಿತಿಯನ್ನು ನೀಡಿದೆ. ಇಬ್ಬರು ಕೂಡ ಯಾವುದೇ ರೋಗ ಲಕ್ಷಣಗಳನ್ನು ಹೊಂದಿಲ್ಲ ಎಂದು ಸಿಎಸ್‌ಸಿ ಮಾಹಿತಿ ನೀಡಿದೆ.

ಇಂಗ್ಲೆಂಡ್ ತಂಡವನ್ನು ಇಟಲಿ ಪೆನಾಲ್ಟಿಯಲ್ಲಿ ಸೋಲಿಸಿ ಚಾಂಪಿಯನ್ | Oneindia Kannada

"ನಿಮಯದ ಪ್ರಕಾರ ಗ್ರಾಂಟ್ ಫ್ಲವರ್ ಹಾಗೂ ನಿರೋಶನ್ ಇಬ್ಬರೂ ಐಸೋಲೇಶನ್ ವ್ಯವಸ್ಥೆಯಲ್ಲಿದ್ದಾರೆ. ಇಬ್ಬರು ಕೂಡ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲದೆ ಆರೋಗ್ಯವಾಗಿದ್ದಾರೆ. ಅವರು ತಮ್ಮ ಐಸೋಲೇಶನ್‌ನ ಅವಧಿಯನ್ನು ನಿಗದಿಯಂತೆಯೇ ಪೂರ್ಣಗೊಳಿಸುತ್ತಾರೆ" ಎಂದು ಲಂಕಾ ಕ್ರಿಕೆಟ್ ಅಧಿಕೃತ ಮಾಹಿತಿ ನೀಡಿದೆ.

Story first published: Sunday, July 11, 2021, 19:43 [IST]
Other articles published on Jul 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X