ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಜಿಂಬಾಬ್ವೆ ODI ಸರಣಿಯ ವೇಳಾಪಟ್ಟಿ, ಸಮಯ, ತಂಡಗಳು; ನೇರ ಪ್ರಸಾರದ ಮಾಹಿತಿ

India vs Zimbabwe ODI Series Schedule, Timings, Teams; Live Broadcast Information

ಶಿಖರ್ ಧವನ್ ನಾಯಕತ್ವದ ಟೀಂ ಇಂಡಿಯಾ ಏಷ್ಯಾ ಕಪ್‌ಗೆ ಮುಂಚಿತವಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಆಗಸ್ಟ್ 18ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲು ಸಜ್ಜಾಗಿದೆ.

ದೀಪಕ್ ಹೂಡಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್ ಮತ್ತು ದೀಪಕ್ ಚಹಾರ್ ಅವರಂತಹ ಆಟಗಾರರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಕಾತರರಾಗಿದ್ದಾರೆ ಮತ್ತು ಐಸಿಸಿ ಟಿ20 ವಿಶ್ವಕಪ್‌ಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಎದುರು ನೋಡುತ್ತಿದ್ದಾರೆ.

Asia Cup 2022: ಭಾರತ vs ಪಾಕಿಸ್ತಾನ ಪಂದ್ಯದ ಒತ್ತಡ ಕುರಿತು ಬಾಬರ್ ಅಜಮ್ ಹೇಳಿದ್ದೇನು?Asia Cup 2022: ಭಾರತ vs ಪಾಕಿಸ್ತಾನ ಪಂದ್ಯದ ಒತ್ತಡ ಕುರಿತು ಬಾಬರ್ ಅಜಮ್ ಹೇಳಿದ್ದೇನು?

ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಈ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ್ದರಿಂದ ಎಡಗೈ ಶಿಖರ್ ಧವನ್ ಮೂರನೇ ಬಾರಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಸಾಧಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಕುಲದೀಪ್ ಯಾದವ್ ಉತ್ತಮ ಪ್ರದರ್ಶನ

ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಕುಲದೀಪ್ ಯಾದವ್ ಉತ್ತಮ ಪ್ರದರ್ಶನ

ಇನ್ನು ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ಕಾರಣ ತನ್ನನ್ನು ತಾನು ಸಾಬೀತುಪಡಿಸಲು ಸಾಕಷ್ಟು ಅವಕಾಶ ಸಿಗದ ಕಾರಣ ಕುಲದೀಪ್ ಯಾದವ್ ತಂಡಕ್ಕೆ ಮರಳಲು ಬಯಸಿದ್ದಾರೆ. ಐಪಿಎಲ್ 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ನಂತರ, ಅವರು ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ. ಇದೇ ವೇಳೆ ಆಲ್‌ರೌಂಡರ್ ದೀಪಕ್ ಚಹಾರ್ ಕೂಡ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದು, ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ, ಸದ್ಯ ಏಷ್ಯಾಕಪ್ ತಂಡದ ಸ್ಟ್ಯಾಂಡ್-ಬೈನಲ್ಲಿ ಹೆಸರಿಸಿದ್ದಾರೆ.

ಜಿಂಬಾಬ್ವೆಯ ಭಾರತ ಪ್ರವಾಸ 2022 ವೇಳಾಪಟ್ಟಿ

ಜಿಂಬಾಬ್ವೆಯ ಭಾರತ ಪ್ರವಾಸ 2022 ವೇಳಾಪಟ್ಟಿ

ಆಗಸ್ಟ್ 18- ಜಿಂಬಾಬ್ವೆ vs ಭಾರತ, 1ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - 12:45 PM

ಆಗಸ್ಟ್ 20- ಜಿಂಬಾಬ್ವೆ vs ಭಾರತ, 2ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - 12:45 PM

ಆಗಸ್ಟ್ 22- ಜಿಂಬಾಬ್ವೆ vs ಭಾರತ, 3ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - 12:45 PM

ಜಿಂಬಾಬ್ವೆ ಪ್ರವಾಸದ ಭಾರತದ ಪೂರ್ಣ ತಂಡ

ಜಿಂಬಾಬ್ವೆ ಪ್ರವಾಸದ ಭಾರತದ ಪೂರ್ಣ ತಂಡ

ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.

ಜಿಂಬಾಬ್ವೆ vs ಭಾರತ ಸರಣಿ 2022 ಲೈವ್ ಸ್ಟ್ರೀಮಿಂಗ್

ಜಿಂಬಾಬ್ವೆ vs ಭಾರತ ಸರಣಿ 2022 ಲೈವ್ ಸ್ಟ್ರೀಮಿಂಗ್

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದ ಜಿಂಬಾಬ್ವೆ ಪ್ರವಾಸದ ಪ್ರಸಾರ ಹಕ್ಕುಗಳನ್ನು ಹೊಂದಿದೆ. 3 ಪಂದ್ಯಗಳ ಏಕದಿನ ಸರಣಿಯ ಲೈವ್ ಸ್ಟ್ರೀಮಿಂಗ್ Sony Liv ನಲ್ಲಿ ಲಭ್ಯವಿರುತ್ತದೆ. ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ 12:45 PMಗೆ ಪ್ರಾರಂಭವಾಗಲಿವೆ.

Story first published: Friday, August 12, 2022, 10:26 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X