ಗೋಲ್ಡನ್ ಡಕ್ ಬಾರಿಸಿದ ಫಿಂಚ್, ಪಿಂಚ್ ಮಾಡಿದ ಟ್ವೀಟ್ಸ್

Posted By:
IPL 2018: Aaron Finch twin golden ducks Social media is abuzz

ಬೆಂಗಳೂರು, ಏಪ್ರಿಲ್ 16: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2018ರಲ್ಲಿ ಆಡಲು ತುಂಬಾ ಉತ್ಸುಕರಾಗಿ, ಹನಿಮೂನ್ ಕೂಡಾ ತೊರೆದು ಬಂದ ಆಸ್ಟ್ರೇಲಿಯಾದ ಆಟಗಾರ ಅರೋನ್ ಫಿಂಚ್ ಈ ಬಾರಿ ಕಿಂಗ್ಸ್ XI ಪಂಜಾಬ್ ಪರ ಆಡುತ್ತಿದ್ದಾರೆ.

ಮೊದಲ ಪಂದ್ಯ ಮಿಸ್ ಮಾಡಿಕೊಂಡಿದ್ದ ಫಿಂಚ್ ಈಗ ಎರಡು ಪಂದ್ಯಗಳನ್ನಾಡಿದ್ದಾರೆ. ಆದ್ರೆ, ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.

ಫಿಂಚ್ ಅವರ ತ್ಯಾಗಕ್ಕೆ ಬೆಲೆ ಸಿಕ್ಕು, ಆರ್ ಸಿಬಿ ವಿರುದ್ಧ ಅಡುವ ಅವಕಾಶ ಸಿಕ್ಕಿತ್ತು. ಆದರೆ, ಶೂನ್ಯ ಸುತ್ತಿ ಪೆವಿಲಿಯನ್ ಗೆ ತೆರಳಿ, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ಐಪಿಎಲ್ ವಿಶೇಷ ಪುಟ | ಪಂಜಾಬ್ ತಂಡ | ಪಂಜಾಬ್ ವೇಳಾಪಟ್ಟಿ

ಆರೋನ್ ಫಿಂಚ್ ಅವರು ಏಪ್ರಿಲ್ 07ರಂದು ಮದುವೆಯಾಗಿದ್ದು, ನಂತರ ನೇರವಾಗಿ ಐಪಿಎಲ್ ಗೆ ಬಂದಿದ್ದರು. ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರನಾಗಿ ಇಳಿಯಬೇಕಿದ್ದ ಆರೋನ್ ಫಿಂಚ್ ಅವರು ಮೊದಲ ವಿಕೆಟ್ ಪತನದ ನಂತರ ಕ್ರೀಸ್ ಗೆ ಬಂದರು. ಶೂನ್ಯ ಸುತ್ತಿದರು.

ಹನಿಮೂನ್ ಬಿಟ್ಟು ಮೈದಾನಕ್ಕೆ ಬಂದು ಸೊನ್ನೆ ಸುತ್ತಿದ ಫಿಂಚ್

ನಂತರ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ 15ನೇ ಓವರ್ ನಲ್ಲಿ ಆಡಲು ಬಂದ ಫಿಂಚ್, ಮೊದಲ ಎಸೆತದಲ್ಲೇ ಇಮ್ರಾನ್ ತಾಹೀರ್ ಅವರ ಎಲ್ ಬಿ ಬಲೆಗೆ ಬಿದ್ದರು. ಅಂಪೈರ್ ನಿರ್ಣಯವನ್ನು ಪ್ರಶ್ನಿಸಿ ರಿವ್ಯೂ ಕೇಳಿದರೂ ಪಾಸಾಗಲಿಲ್ಲ. ಫಿಂಚ್ ಗೋಲ್ಡನ್ ಡಕ್ ಬಾರಿಸಿದರು.

ಅನುಭವಿ ಐಪಿಎಲ್ ಆಟಗಾರ

ಅನುಭವಿ ಐಪಿಎಲ್ ಆಟಗಾರ

ಐಪಿಎಲ್‌ನಲ್ಲಿ 65 ಪಂದ್ಯಗಳನ್ನು ಆಡಿ 1604 ರನ್ ಗಳಿಸಿರುವ ಫಿಂಚ್ ಅವರು ಮದುವೆ ಹಿನ್ನೆಲೆಯಲ್ಲಿ ಪಂಜಾಬ್ ಪರ ಮೊದಲ ಪಂದ್ಯವನ್ನಾಡಿರಲಿಲ್ಲ. ಕಳೆದ 10 ವರ್ಷಗಳಲ್ಲಿ ಸುಮಾರು 6 ತಂಡಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಟಿ20 ಮಾದರಿಯಲ್ಲಿ ತಜ್ಞ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದು, ಪಂಜಾಬ್ ನ ಬಲಿಷ್ಠ ಬ್ಯಾಟಿಂಗ್ ಪಡೆಗೆ ಮತ್ತಷ್ಟು ಬಲ ತುಂಬುವ ನಿರೀಕ್ಷೆಯಿದೆ. ಆದರೆ, ಸತತ ವೈಫಲ್ಯ ಹಲವರಿಗೆ ಅಚ್ಚರಿ ಮೂಡಿಸಿದ್ದು, ಕಾಮೆಂಟೆಟರ್ ಗಳು ಕೂಡಾ ಹಾಸ್ಯ ಮಾಡುವಂತಾಗಿದೆ.

ಫಿಂಚ್ ಅದ್ಭುತ ಬ್ಯಾಟ್ಸ್ ಮನ್

ಫಿಂಚ್ ಅದ್ಭುತ ಬ್ಯಾಟ್ಸ್ ಮನ್, ಅದೇ ರೀತಿ ಬ್ರೆಂಡನ್ ಮೆಕಲಮ್ ಕೂಡಾ. ಆದರೆ, ಇಬ್ಬರು ಗೋಲ್ಡನ್ ಡಕ್ ಬಾರಿಸಿದ್ದಾರೆ.

ಮದುವೆಯಾಗಿದ್ದು ಯಾಕೋ ಸರಿ ಬಂದಿಲ್ಲ

ಫಿಂಚ್ ಮದುವೆಯಾಗಿದ್ದು, ಯಾಕೋ ಸರಿ ಬಂದಿಲ್ಲ ಎಂದು ಕಾಣುತ್ತೆ. ಮದುವೆಯಾಗಿದ್ದಾಗಿನಿಂದ ಶೂನ್ಯ ಸುತ್ತುತ್ತಿದ್ದಾರೆ.

ಭಾರತದ ಟಿವಿಯಲ್ಲಿ ಸುದ್ದಿ ಹೀಗಿರುತ್ತದೆ

ಫಿಂಚ್ ಅವರು ಗೋಲ್ಡನ್ ಡಕ್ ಹೊಡೆದಿದ್ದಾರೆ. ಫಿಂಚ್ ಮದುವೆಯಲ್ಲಿ ಏನಾದರೂ ದೋಷವಿದೆಯೆ?

ವಾಹ್ ಫಿಂಚ್

ಸೊನ್ನೆಗೆ ಪ್ರಚಾರ ನೀಡಲು ಆರಂಭಿಸಿದ ಅರೋನ್ ಫಿಂಚ್. ಸತತ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಆಸ್ಟ್ರೇಲಿಯಾದ ದಾಂಡಿಗ.

ಮದುವೆಯಾದ ಮೇಲೆ ಬೆಡ್ ನಲ್ಲೇ ಕೆಲಸ

ಮದುವೆಯಾದ ಮೇಲೆ ಬೆಡ್ ಮೇಲೆ ಅಷ್ಟೇ ಕಾರ್ಯಕ್ಷಮತೆ ತೋರಿದ ಅರೋನ್ ಫಿಂಚ್ ಎಂದು ಕಿಚಾಯಿಸಿದ್ದಾರೆ.

ಫಿಂಚ್ ಮನಸ್ಸಿನಲ್ಲಿ ಏನಿರಬಹುದು

ಬಹುಶಃ ಹನಿಮೂನ್ ಗೆ ಹೋಗದೆ ತಪ್ಪದು ಮಾಡಿದೆ ಅನ್ಸುತ್ತೆ.

ಹನಿಮೂನ್ ಮಿಸ್ ಮಾಡ್ಕೊ ಬಾರದಿತ್ತು

ಅರೋನ್ ಫಿಂಚ್ ಅವರು ಹನಿಮೂನ್ ಮಿಸ್ ಮಾಡ್ಕೊ ಬಾರದಿತ್ತು

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 16, 2018, 17:06 [IST]
Other articles published on Apr 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ