ಐಪಿಎಲ್ 2018: ಕಿಂಗ್ಸ್ XI ಪಂಜಾಬಿನ ಸಿಂಹಗಳು

Posted By:

ಬೆಂಗಳೂರು, ಜನವರಿ 28: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರ ಹರಾಜಿನಲ್ಲಿ ಅತ್ಯಂತ ಉತ್ಸಾಹವಾಗಿ ಪಾಲ್ಗೊಂಡಿದ್ದು ಕಿಂಗ್ಸ್ ಎಲೆವನ್ ಪಂಜಾಬ್ ತಂಡ ಎಂದರೆ ತಪ್ಪಾಗಲಾರದು. ಕಳೆದ ಬಾರಿ ನಾಕೌಟ್ ಹಂತ ತಲುಪಲು ಆಗದೆ ಹೆಣಗಾಡಿದ ತಂಡ, ಈ ಬಾರಿ ಉತ್ತಮ ಬ್ಯಾಟ್ಸ್ ಮನ್ ಗಳ ಬಲವನ್ನು ಹೊಂದಿದೆ.

ಮ್ಯಾಕ್ಸ್ ವೆಲ್ ರನ್ನು ತಂಡದಿಂದ ಬಿಟ್ಟು, ಆಲ್ ರೌಂಡರ್ ಅಕ್ಷರ್ ಪಟೇಲ್ ಮಾತ್ರ ಉಳಿಸಿಕೊಂಡು(retained) ಅಚ್ಚರಿ ಮೂಡಿಸಿದ್ದ ಪ್ರೀತಿ ಜಿಂಟಾ, ಸೆಹ್ವಾಗ್ ಹಾಗೂ ಮಾಲೀಕರ ತಂಡ, ಹರಾಜಿನಲ್ಲಿ ಕೊನೆ ಕ್ಷಣದವರೆಗೂ ಬೇಟೆ ಮುಂದುವರೆಸಿತು.

ಕ್ರಿಸ್ ಗೇಲ್ ಗೆ ಕೊನೆ ಕ್ಷಣದಲ್ಲಿ ಪಂಜಾಬ್ ತಂಡಕ್ಕೆ ಸೇರ್ಪಡೆಗೊಂಡಿದ್ದು, ತಂಡದ ಬ್ಯಾಟಿಂಗ್ ಬಲ ಇನ್ನಷ್ಟು ಹೆಚ್ಚಿಸಿದೆ. ವಿಶೇಷವಾಗಿ ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರವಾಲ್ ಇದೇ ತಂಡದಲ್ಲಿರುವುದು ವಿಶೇಷ.

ಐಪಿಎಲ್ ಹರಾಜು: ಕೊನೆಗೂ ಸೇಲ್ ಆದ ಯೂನಿವರ್ಸಲ್ ಬಾಸ್

ಒಂದು ಕಾಲದಲ್ಲಿ ದುಬಾರಿ ಬೆಲೆಗೆ ಮಾರಾಟವಾಗಿದ್ದ ಸ್ಟಾರ್ ಆಟಗಾರ ಯುವರಾಜ್ ಸಿಂಗ್, ಸ್ಟಾರ್ ಸ್ಪಿನರ್ ಅಶ್ವಿನ್ ಕೂಡಾ ತಂಡದಲ್ಲಿದ್ದು, ಎಲ್ಲರ ಗಮನ ಸೆಳೆದಿದೆ. ಮಿಕ್ಕಂತೆ ಈ ತಂಡದಲ್ಲಿ ಯಾರೆಲ್ಲ ಇದ್ದಾರೆ, ಎಷ್ಟು ಮೊತ್ತಕ್ಕೆ ಖರೀದಿಯಾಗಿದೆ ಎಂಬೆಲ್ಲ ವಿವರ ಮುಂದೆ ಓದಿ...

ಬೌಲರ್ ಗಳು (3 ವಿದೇಶಿ)

ಬೌಲರ್ ಗಳು (3 ವಿದೇಶಿ)

* ಆಂಡ್ರ್ಯೂ ಟೈ 7.20 ಕೋಟಿ ರು ಗೆ ಖರೀದಿ
* ಮುಜೀಬ್ ಜದ್ರಾನ್ 4 ಕೋಟಿ ರು ಗೆ ಖರೀದಿ
* ಅಂಕಿತ್ ಸಿಂಗ್ ರಜಪೂತ್ 7.20 ಕೋಟಿ ರು ಗೆ ಖರೀದಿ
* ಮೋಹಿತ್ ಶರ್ಮಾ 2.40 ಕೋಟಿ ರು ಗೆ ಖರೀದಿ
* ಬರಿಂದರ್ ಸ್ರಾನ್ 2.20 ಕೋಟಿ ರು ಗೆ ಖರೀದಿ
* ಬೆನ್ ಡ್ವಾರ್ಶುಯಿಸ್ 1.40 ಕೋಟಿ ರು ಗೆ ಖರೀದಿ
* ಪ್ರದೀಪ್ ಸಾಹು ಮೂಲ ಬೆಲೆಗೆ ಖರೀದಿ

ವಿಕೆಟ್ ಕೀಪರ್

ವಿಕೆಟ್ ಕೀಪರ್

* ಕೆಎಲ್ ರಾಹುಲ್ 11 ಕೋಟಿ ರು ಗೆ ಖರೀದಿ
ಭಾರತೀಯ ಆಟಗಾರರ ಪೈಕಿ ವೇಗಿ ಜಯದೇವ್ ಉನದ್ಕತ್ 11.5 ಪಡೆದು ಅತ್ಯಂತ ದುಬಾರಿ ಮೊತ್ತಕ್ಕೆ ಸೇಲ್ ಆಗಿರುವ ಆಟಗಾರ ಎನಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಮನೀಶ್ ಪಾಂಡೆ ಜತೆಗೆ ಲೋಕೇಶ್ ರಾಹುಲ್ ಅವರು 11 ಕೋಟಿ ರು ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

Story first published: Sunday, January 28, 2018, 22:15 [IST]
Other articles published on Jan 28, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ