ಹನಿಮೂನ್ ಬಿಟ್ಟು ಮೈದಾನಕ್ಕೆ ಬಂದು ಸೊನ್ನೆ ಸುತ್ತಿದ ಫಿಂಚ್

Posted By:
IPL 2018 : Kings XI Punjab player A Finch marriage and Cricket

ಬೆಂಗಳೂರು, ಏಪ್ರಿಲ್ 13: ಆಸ್ಟ್ರೇಲಿಯಾದ ಅಟಗಾರ ಅರೋನ್ ಫಿಂಚ್ ಈ ಬಾರಿ ಕಿಂಗ್ಸ್ XI ಪಂಜಾಬ್ ಪರ ಆಡುತ್ತಿದ್ದು, ಮದುವೆಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ ಮೊದಲ ಪಂದ್ಯ ಮಿಸ್ ಮಾಡಿಕೊಂಡಿದ್ದರು.

ಆದರೆ, ಈಗ ಮದುವೆ ನಂತರ ಮಧುಚಂದ್ರಕ್ಕೆ ತೆರಳದೆ ನೇರವಾಗಿ ಭಾರತಕ್ಕೆ ಬಂದು, ಕ್ರಿಕೆಟ್ ಮೈದಾನಕ್ಕಿಳಿದಿದ್ದಾರೆ. ಫಿಂಚ್ ಅವರ ತ್ಯಾಗಕ್ಕೆ ಬೆಲೆ ಸಿಕ್ಕು, ಆರ್ ಸಿಬಿ ವಿರುದ್ಧ ಅಡುವ ಅವಕಾಶ ಸಿಕ್ಕಿತ್ತು. ಆದರೆ, ಶೂನ್ಯ ಸುತ್ತಿ ಪೆವಿಲಿಯನ್ ಗೆ ತೆರಳಿ, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ಸ್ಕೋರ್ ಕಾರ್ಡ್, ಕಾಮೆಂಟ್ರಿ

ಆರೋನ್ ಫಿಂಚ್ ಅವರು ಏಪ್ರಿಲ್ 07ರಂದು ಮದುವೆಯಾಗಿದ್ದು, ನಂತರ ನೇರವಾಗಿ ಐಪಿಎಲ್ ಗೆ ಬಂದಿದ್ದರು. ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರನಾಗಿ ಇಳಿಯಬೇಕಿದ್ದ ಆರೋನ್ ಫಿಂಚ್ ಅವರು ಮೊದಲ ವಿಕೆಟ್ ಪತನದ ನಂತರ ಕ್ರೀಸ್ ಗೆ ಬಂದರು.

ಆದರೆ, ಆರ್ ಸಿಬಿ ಬೌಲರ್ ಉಮೇಶ್ ಯಾದವ್ ಎಸೆತ ಅರಿಯಲಾರದೆ ಎಲ್ ಬಿ ಯಾದರು. ಮಾಯಾಂಕ್, ಫಿಂಚ್ ಹಾಗೂ ಯುವರಾಜ್ ಸಿಂಗ್ ವಿಕೆಟ್ ಕಿತ್ತಿರುವ ಉಮೇಶ್ ಅವರು ಆರ್ ಸಿಬಿ ಬೌಲಿಂಗ್ ಪಡೆಗೆ ಬಲ ತಂದಿದ್ದಾರೆ.

ಐಪಿಎಲ್ ವಿಶೇಷ ಪುಟ | ಪಂಜಾಬ್ ವೇಳಾಪಟ್ಟಿ | ಬೆಂಗಳೂರು ವೇಳಾಪಟ್ಟಿ

ಕನ್ನಡಿಗ ಕೆಎಲ್ ರಾಹುಲ್ ಹಾಗೂ ಮಾಯಾಂಕ್ ಅಗರವಾಲ್ ಅವರು ಆರಂಭಿಕ ಆಟಗಾರರಾಗಿ ಕಣಕ್ಕಿಳಿದು ಉತ್ತಮ ಆರಂಭ ಒದಗಿಸಿದ್ದರು. ಕ್ರಿಸ್ ಗೇಲ್ ಆಡುವ ನಿರೀಕ್ಷೆಯಿತ್ತಾದರೂ ಫಿಂಚ್ ಗೆ ಸ್ಥಾನ ಲಭಿಸಿದೆ.

ಐಪಿಎಲ್‌ನಲ್ಲಿ 65 ಪಂದ್ಯಗಳನ್ನು ಆಡಿ 1604 ರನ್ ಗಳಿಸಿರುವ ಫಿಂಚ್ ಅವರು ಮದುವೆ ಹಿನ್ನೆಲೆಯಲ್ಲಿ ಪಂಜಾಬ್ ಪರ ಮೊದಲ ಪಂದ್ಯವನ್ನಾಡಿರಲಿಲ್ಲ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, April 13, 2018, 20:07 [IST]
Other articles published on Apr 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ