ಐಪಿಎಲ್ 2018ಗಾಗಿ ವಿಶೇಷ ಎಮೋಜಿ ಹೊರ ತಂದ ಟ್ವಿಟ್ಟರ್

Posted By:
IPL 2018: Twitter introduces Special themed Emojis for all the eight franchises

ಬೆಂಗಳೂರು, ಏಪ್ರಿಲ್ 16: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಆಗಿ ಸತತ ಹತ್ತು ವರ್ಷಗಳಿಗೂ ಅಧಿಕ ಕಾಲ ಉಳಿಯಲು ಸಾಮಾಜಿಕ ಜಾಲ ತಾಣ ಬಳಸುವ ಅಭಿಮಾನಿಗಳು ಕೂಡಾ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು. ಅದರಲ್ಲೂ ಪಂದ್ಯದ ವೇಳೆ ಟ್ವಿಟ್ಟರ್, ಫೇಸ್ಬುಕ್ ಹಾಗೂ ಇತ್ತೀಚೆಗೆ ಹಾಟ್ ಸ್ಟಾರ್ ನಲ್ಲಿ ತಮ್ಮ ನೆಚ್ಚಿನ ತಂಡದ ಪರ ಹೋರಾಟ ನಡೆಸುತ್ತಲೇ ಇರುತ್ತದೆ.

ಐಪಿಎಲ್ ವಿಶೇಷ ಪುಟ | ಬೆಂಗಳೂರು ತಂಡ | ಬೆಂಗಳೂರು ವೇಳಾಪಟ್ಟಿ

ಇದನ್ನು ಮನಗಂಡ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಅಭಿಮಾನಿಗಳಿಗಾಗಿ ಐಪಿಎಲ್ 11ರಲ್ಲೂ ಕೂಡಾ ಐಪಿಎಲ್ ಥೀಮ್ ವುಳ್ಳ ವಿಶೇಷ ಎಮೋಜಿಗಳನ್ನು ಬಿಡುಗಡೆ ಮಾಡಿದೆ. 2017ರ ಐಪಿಎಲ್ ಪ್ರಮುಖ ಆಟಗಾರರ ಹೆಸರಿನಲ್ಲಿ ಎಮೋಜಿಗಳನ್ನು ಹೊರ ತಂದಿತ್ತು. ಈ ಬಾರಿ ಎಲ್ಲಾ 8 ಫ್ರಾಂಚೈಸಿಗಳ ಹೆಸರಿನಲ್ಲಿ ಎಮೋಜಿಗಳನ್ನು ಹೊರ ತರಲಾಗಿದೆ.

ಟ್ವಿಟ್ಟರಲ್ಲಿ #ViratKohli ಬಳಸಿ, ಏನಾಗುವುದೋ ನೋಡಿ!

2018ರ ಹೊಸ ಎಮೋಜಿಗಳಲ್ಲಿ ಆಯಾ ತಂಡದ ಟ್ಯಾಗ್ ಲೈನ್ ಇರಲಿದೆ. ಉದಾಹರಣೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ಲೇ ಬೋಲ್ಡ್, ಚೆನ್ನೈ ಸೂಪರ್ ಕಿಂಗ್ಸ್ ನ ವಿಷಲ್ ಪೋಡು ಇತ್ಯಾದಿ.. ಯಾವ ತಂಡಕ್ಕೆ ಯಾವ ಹ್ಯಾಶ್ ಟ್ಯಾಗ್ ಬಳಸಲಾಗುತ್ತದೆ ಎಂಬುದನ್ನು ಮುಂದೆ ಓದಿ....

8 ಫ್ರಾಂಚೈಸಿಗಳ ಹೆಸರಿನಲ್ಲಿ ಎಮೋಜಿ

8 ಫ್ರಾಂಚೈಸಿಗಳ ಹೆಸರಿನಲ್ಲಿ ಎಮೋಜಿ

2017ರ ಐಪಿಎಲ್ ಪ್ರಮುಖ ಆಟಗಾರರ ಹೆಸರಿನಲ್ಲಿ ಎಮೋಜಿಗಳನ್ನು ಹೊರ ತಂದಿತ್ತು. ಈ ಬಾರಿ ಎಲ್ಲಾ 8 ಫ್ರಾಂಚೈಸಿಗಳ ಹೆಸರಿನಲ್ಲಿ ಎಮೋಜಿಗಳನ್ನು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಹೊರ ತಂದಿದೆ. ಜತೆಗೆ ಆಯಾ ಫ್ರಾಂಚೈಸಿಯ ಧ್ಯೇಯ ವಾಕ್ಯವಿರುವ ಹ್ಯಾಶ್ ಟ್ಯಾಗ್ ನೀಡಲಾಗಿದೆ. ಅದನ್ನು ಹಾಕಿದ ಕೂಡಲೇ ಆ ತಂಡ ಚಿತ್ರ(ಎಮೋಜಿ) ಕಾಣಿಸಿಕೊಳ್ಳುತ್ತದೆ.

ಡೆಲ್ಲಿಗಾಗಿ ಪ್ರತ್ಯೇಕ ಟ್ವಿಟ್ಟರ್ ಎಮೋಜಿ

ಡೆಲ್ಲಿ ಡೇರ್ ಡೆವಿಲ್ಸ್(@DelhiDaredevils) ತಂಡಕ್ಕಾಗಿ ಪ್ರತ್ಯೇಕ ಟ್ವಿಟ್ಟರ್ ಎಮೋಜಿ ಬಿಡುಗಡೆಯಾಗಿದ್ದು, #DilDilli #Dhadkega ಎಂಬ ಹ್ಯಾಶ್ ಟ್ಯಾಗ್ ಬಳಸಲಾಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು (@RCBTweets) ತಂಡದ ಅಧಿಕೃತ ಹ್ಯಾಶ್ ಟ್ಯಾಗ್ #PlayBold

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್(@rajasthanroyals) ತಂಡದ #Hallabol ಈಗಾಗಲೇ ಜನಪ್ರಿಯತೆ ಗಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ (@ChennaiIPL) ನ #WhistlePodu ಹ್ಯಾಶ್ ಟ್ಯಾಗ್ ಬಳಸಿದರೆ, ಚೆನ್ನೈ ತಂಡದ ಲೋಗೋ ಕಾಣಿಸಿಕೊಳ್ಳಲಿದೆ.

ಕೋಲ್ಕತಾ ನೈಟ್ ರೈಡರ್ಸ್

ಕೋಲ್ಕತಾ ನೈಟ್ ರೈಡರ್ಸ್ (@KKRiders) ಹ್ಯಾಶ್ ಟ್ಯಾಗ್ #KKRHaiTaiyaar

ಕಿಂಗ್ಸ್ XI ಪಂಜಾಬ್

ಕಿಂಗ್ಸ್ ಎಲೆವನ್ ಪಂಜಾಬ್ (@lionsdenkxip) ನ ಹ್ಯಾಶ್ ಟ್ಯಾಗ್ #LivePunjabiPlayPunjabi

ಸನ್ ರೈಸರ್ಸ್ ಹೈದರಾಬಾದ್

ಸನ್ ರೈಸರ್ಸ್ ಹೈದರಾಬಾದ್(@SunRisers) ನ ಹ್ಯಾಶ್ ಟ್ಯಾಗ್ #OrangeArmy

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ (@mipaltan) ತಂಡದ ಅಧಿಕೃತ ಹ್ಯಾಶ್ ಟ್ಯಾಗ್ #CricketMeriJaan

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 17, 2018, 16:33 [IST]
Other articles published on Apr 17, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ