ಐಪಿಎಲ್ 2020: ಫ್ಲಾಪ್ ಶೋ ಕೊಟ್ಟಿರುವ 5 ದುಬಾರಿ ಕ್ರಿಕೆಟರ್ಸ್

ಕ್ರಿಕೆಟ್ ಲೋಕದ ಅತ್ಯಂತ ಶ್ರೀಮಂತ ಲೀಗ್ ಎನಿಸಿರುವ ಐಪಿಎಲ್ 2020 ಈಗಾಗಲೇ ಅರ್ಧ ಮುಗಿದಿದೆ. ಲೀಗ್ ನಲ್ಲಿರುವ ದುಬಾರಿ ಆಟಗಾರರ ಪೈಕಿ ಅನೇಕರು ಇನ್ನೂ ಲಯ ಕಂಡುಕೊಳ್ಳಲು ತಿಣುಕಾಡುತ್ತಿದ್ದಾರೆ. ಅಚ್ಚರಿಯೆಂಬಂತೆ ಸತತವಾಗಿ ವೈಫಲ್ಯ ಕಂಡರೂ ಅವಕಾಶ ಪಡೆದುಕೊಳ್ಳುತ್ತಿದ್ದಾರೆ.

ಅತ್ಯಂತ ದುಬಾರಿ ವೇಗಿ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಮಿಂಚಿದ್ದು ಕಮ್ಮಿ. ಆದರೆ, ಮುಂಬೈ ವಿರುದ್ಧ ಅಕ್ಟೋಬರ್ 16ರಂದು ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. ಒಟ್ಟಾರೆ 104 ಪ್ಲಸ್ ರನ್ ಗಳಿಸಿರುವ ಕಮಿನ್ಸ್ ಪ್ರಮುಖ ಆಟಗಾರರಾದ ಹೇಟ್ಮೆರ್, ರಸೆಲ್, ಉತ್ತಪ್ಪ, ಮ್ಯಾಕ್ಸ್ ವೆಲ್, ಜಾಧವ್ ಗಿಂತ ಹೆಚ್ಚು ಸ್ಕೋರ್ ಮಾಡಿದ್ದಾರೆ ಎಂಬುದು ಅಚ್ಚರಿಯಾದರೂ ನಿಜ. ದಿನೇಶ್ ಕಾರ್ತಿಕ್(112), ರವೀಂದ್ರ ಜಡೇಜ (126), ಧೋನಿ (133) ಕೂಡಾ ವೈಫಲ್ಯ ಕಂಡಿದ್ದಾರೆ.

ಆಟಗಾರರ ಮೇಲೆ ಭಾರಿ ಮೊತ್ತ ಹೂಡಿಕೆ ಮಾಡಿ, ಅದೇ ರೀತಿ ಪ್ರತಿಫಲ ನಿರೀಕ್ಷಿಸಲಾಗುತ್ತದೆ. ಆದರೆ, ಎಷ್ಟೋ ಬಾರಿ ಹರಾಜಿನಲ್ಲಿ ಕೋಟ್ಯಂತರ ರುಪಾಯಿ ಕೊಟ್ಟು ಖರೀದಿಸಿದ ಆಟಗಾರರೇ ಫ್ಲಾಪ್ ಶೋ ನೀಡುತ್ತಾರೆ. 2015ರಲ್ಲಿ 16 ಕೋಟಿ ರು ಗೆ ಡೆಲ್ಲಿ ಡರ್ ಡೆವಿಲ್ಸ್ ಸೇರಿದ್ದ ಯುವರಾಜ್ ಸಿಂಗ್ ಫ್ಲಾಪ್ ಆಗಿದ್ದರು. 2020ರಲ್ಲಿ ಅಕ್ಟೋಬರ್ 16ರಂತೆ ವೈಫಲ್ಯ ಕಂಡಿರುವ 5 ದುಬಾರಿ ಕ್ರಿಕೆಟರ್ಸ್ ವಿವರ ಇಲ್ಲಿದೆ...

 ದಿನೇಶ್ ಕಾರ್ತಿಕ್ (7.74 ಕೋಟಿ ರು)

ದಿನೇಶ್ ಕಾರ್ತಿಕ್ (7.74 ಕೋಟಿ ರು)

ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ 7.74 ಕೋಟಿ ರು ನೀಡಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ರನ್ನು ತಂಡಕ್ಕೆ ಸೇರಿಸಿಕೊಂಡಿದ್ದಲ್ಲದೆ, ನಾಯಕನ ಪಟ್ಟವನ್ನು ನೀಡಿತು. ಆದರೆ, ಸತತ ವೈಫಲ್ಯ ಕಂಡಿರುವ ಕಾರ್ತಿಕ್ ನಾಯಕ ಸ್ಥಾನವನ್ನು ಮಾರ್ಗನ್ ಕೈಗೊಪ್ಪಿಸಿದ್ದಾರೆ. ಬ್ಯಾಟಿಂಗ್ ಸುಧಾರಣೆ ಬಗ್ಗೆ ಹೆಚ್ಚಿನ ಗಮನ ಹರಿಸುವುದಾಗಿ ಹೇಳಿದ್ದಾರೆ.

ಐಪಿಎಲ್ ಮೊದಲ ಪಂದ್ಯಗಳಲ್ಲಿ ಗೇಲ್ ಗಳಿಸಿದ ರನ್ ಗಳೆಷ್ಟು?

ಐಪಿಎಲ್ 2020ರಲ್ಲಿ 8 ಪಂದ್ಯಗಳಿಂದ 14 ರನ್ ಸರಾಸರಿ, 128.73 ಸ್ಟ್ರೈಕ್ ರೇಟ್ ನಂತೆ 112ರನ್ ಮಾತ್ರ ಗಳಿಸಿದ್ದಾರೆ 58 ರನ್ ವಯಕ್ತಿಕ ಅತ್ಯಧಿಕ ಮೊತ್ತ.

ಐಪಿಎಲ್ ವೃತ್ತಿಯಲ್ಲಿ 190 ಪಂದ್ಯಗಳಿಂದ 26.33 ರನ್ ಸರಾಸರಿ, 129.77 ಸ್ಟ್ರೈಕ್ ರೇಟ್ ನಂತೆ 3766ರನ್ ಗಳಿಸಿದ್ದಾರೆ. ಅಜೇಯ 97 ಗರಿಷ್ಠ ಮೊತ್ತ.

 ಶಿಮ್ರೋನ್ ಹೆಟ್ಮೇರ್ (7.75 ಕೋಟಿ ರು)

ಶಿಮ್ರೋನ್ ಹೆಟ್ಮೇರ್ (7.75 ಕೋಟಿ ರು)

ಗಯಾನಾ ಮೂಲದ ಸ್ಫೋಟಕ ಬ್ಯಾಟ್ಸ್ ಮನ್ ಶಿಮ್ರೋನ್ ಹೆಟ್ಮೇರ್ 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ್ ಆಡಿದ್ದರು. ಈ ಬಾರಿಯ ಹರಾಜಿನಲ್ಲಿ 7.75 ಕೋಟಿ ರು ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.

ಡೆಲ್ಲಿ ತಂಡದಲ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಿ ಹೆಚ್ಚು ಅವಕಾಶ ನೀಡಿದರೂ ಹೆಟ್ಮೇರ್ ಕ್ಲಿಕ್ ಆಗಿಲ್ಲ. 2019ರಲ್ಲಿ 5 ಪಂದ್ಯಗಳಲ್ಲಿ 90ರನ್ ಗಳಿಸಿದ್ದ ಹೇಟ್ಮೇರ್ ಅವರು 2020ರಲ್ಲಿ 6 ಪಂದ್ಯಗಳಿಂದ 30.33 ರನ್ ಸರಾಸರಿಯಂತೆ 91ರನ್ ಮಾತ್ರ ಗಳಿಸಿದ್ದಾರೆ. 45 ಗರಿಷ್ಠ ಮೊತ್ತ. 149.18 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

 ಕೇದಾರ್ ಜಾಧವ್ (7.8 ಕೋಟಿ ರು)

ಕೇದಾರ್ ಜಾಧವ್ (7.8 ಕೋಟಿ ರು)

ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಅನುಭವ ಹೊಂದಿರುವ ಮಹಾರಾಷ್ಟ್ರದ ಬ್ಯಾಟ್ಸ್ ಮನ್ ಕೇದಾರ್ ಜಾಧವ್ ಅವರು ಐಪಿಎಲ್ 2020ನಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡಿ ಟ್ರಾಲ್ ಗೊಳಗಾಗಿದ್ದು ನೆನಪಿರಬಹುದು. ಸುಮಾರು 7.8 ಕೋಟಿ ರು ನೀಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿತ್ತು. ಕಳೆದ ಸೀಸನ್ ನಲ್ಲಿ 14 ಪಂದ್ಯಗಳಿಂದ 162 ರನ್ ಮಾತ್ರ ಗಳಿಸಿದ ಕೇದಾರ್ ಈ ಬಾರಿಯೂ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ.

ಕಾಮೆಂಟೆಟರ್ಸ್ ಡ್ರೀಮ್11 ಫ್ಯಾಂಟಸಿ ತಂಡ, ಕೊಹ್ಲಿಯೇ ಮಿಸ್ಸಿಂಗ್!

2020ರಲ್ಲಿ 6 ಪಂದ್ಯಗಳಿಂದ 19.33 ರನ್ ಸರಾಸರಿಯಂತೆ 98.30 ಸ್ಟ್ರೈಕ್ ರೇಟ್ ನಂತೆ 58ರನ್ ಮಾತ್ರ ಗಳಿಸಿದ್ದಾರೆ. 26 ಗರಿಷ್ಠ ಮೊತ್ತ. ಒಟ್ಟಾರೆ ಐಪಿಎಲ್ ವೃತ್ತಿಯಲ್ಲಿ 85 ಪಂದ್ಯಗಳಲ್ಲಿ 22.74 ರನ್ ಸರಾಸರಿ ಹಾಗೂ 124. 67 ಸ್ಟ್ರೈಕ್ ರೇಟ್ ನಂತೆ 1137ರನ್ ಗಳಿಸಿದ್ದು, 69 ಗರಿಷ್ಠ ಮೊತ್ತ.

 ಆಂಡ್ರೆ ರಸೆಲ್ (8.5 ಕೋಟಿ ರು)

ಆಂಡ್ರೆ ರಸೆಲ್ (8.5 ಕೋಟಿ ರು)

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಬಲ ಎನಿಸಿಕೊಂಡಿರುವ ವಿಂಡೀಸ್ ಆಟಗಾರ ಆಂಡ್ರೆ ರಸೆಲ್ ಸತತವಾಗಿ ವಿಫಲರಾಗಿದ್ದಾರೆ. ಸಿಪಿಎಲ್ 2020ರಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ರಸೆಲ್ ಈ ಬಾರಿ ಕೆಕೆಆರ್ ತಂಡಕ್ಕೆ ಬೌಲಿಂಗ್ ಹಾಗೂ ಕೆಳ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ಬಲ ತುಂಬಬಲ್ಲರು ಎಂದು ನಿರೀಕ್ಷಿಸಲಾಗಿತ್ತು. ಕಳೆದ ವರ್ಷ 14 ಪಂದ್ಯಗಳಲ್ಲಿ 56.66 ರನ್ ಸರಾಸರಿಯಂತೆ 510ರನ್, 204.81 ಸ್ಟ್ರೈಕ್ ರೇಟ್ ನಂತೆ 52 ಸಿಕ್ಸ್ ಕೂಡಾ ಚೆಚ್ಚಿದ್ದರು.

ಚೆನ್ನೈಗೆ Mid season Transferನಲ್ಲಿ ಬೇಕಿರುವ 4 ಕ್ರಿಕೆಟರ್ಸ್

ಆದರೆ, 2020ರಲ್ಲಿ 8 ಪಂದ್ಯಗಳನ್ನಾಡಿದ್ದು, 140.97 ಸ್ಟ್ರೈಕ್ ರೇಟ್ ಹೊಂದಿದ್ದರೂ 11.85 ರನ್ ಸರಾಸರಿಯಂತೆ 83ರನ್ ಮಾತ್ರ ಗಳಿಸಿದ್ದಾರೆ. 24 ಗರಿಷ್ಠ ಮೊತ್ತ. 6 ಸಿಕ್ಸರ್ ಮಾತ್ರ ಸಿಡಿಸಿದ್ದಾರೆ.

ಐಪಿಎಲ್ ವೃತ್ತಿಯಲ್ಲಿ 72 ಪಂದ್ಯಗಳಿಂದ 183.08 ಸ್ಟ್ರೈಕ್ ರೇಟ್ 30.26 ರನ್ ಸರಾಸರಿಯಂತೆ 1483ರನ್ ಗಳಿಸಿದ್ದಾರೆ 126 ಸಿಕ್ಸರ್ ಬಾರಿಸಿದ್ದಾರೆ.

 ಗ್ಲೆನ್ ಮ್ಯಾಕ್ಸ್ ವೆಲ್ (10.75 ಕೋಟಿ ರು)

ಗ್ಲೆನ್ ಮ್ಯಾಕ್ಸ್ ವೆಲ್ (10.75 ಕೋಟಿ ರು)

ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಪ್ರಮುಖ ಆಲ್ ರೌಂಡರ್ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ ಅತ್ಯಂತ ದುಬಾರಿ ಆಟಗಾರನಾಗಿದ್ದು, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ಕೂಡಾ ನೀಡಿದ್ದರು. 2020ರಲ್ಲಿ 8 ಪಂದ್ಯಗಳಿಂದ 95.08 ಸ್ಟ್ರೈಕ್ ರೇಟ್ ನಂತೆ 14.50ರನ್ ಸರಾಸರಿಯಲ್ಲಿ58 ರನ್ ಮಾತ್ರ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ಒಂದ್ದು ವಿಕೆಟ್ ಮಾತ್ರ ಗಳಿಸಿದ್ದಾರೆ, ಹೀಗಾಗಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಮ್ಯಾಕ್ಸ್ ವೆಲ್ ವಿಫಲರಾಗಿದ್ದರಿಂದ ಗೆಲ್ಲುವ ಪಂದ್ಯಗಳನ್ನು ಪಂಜಾಬ್ ಕೈ ಚೆಲ್ಲುತ್ತಿದೆ. ತಂಡದಿಂದ ಮ್ಯಾಕ್ಸ್ ವೆಲ್ ತೆಗೆದು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿ ಎಂದು ಫ್ಯಾನ್ಸ್ ಆಗ್ರಹಿಸಿದ್ದು ನಡೆದಿದೆ. ಒಟ್ಟಾರೆ 77 ಪಂದ್ಯಗಳಿಂದ 156.78 ಸ್ಟ್ರೈಕ್ ರೇಟ್ ನಂತೆ 22.38ರನ್ ಸರಾಸರಿಯಲ್ಲಿ1455 ರನ್ ಮಾತ್ರ ಗಳಿಸಿದ್ದಾರೆ. 95 ಗರಿಷ್ಠ ಮೊತ್ತ.

ಈ 4 ಕ್ರಿಕೆಟರ್ ಅಚ್ಚರಿಯ ಕಮ್ ಬ್ಯಾಕ್ ಆಗ್ಲಿ ಎಂದ ಫ್ಯಾನ್ಸ್

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, October 16, 2020, 23:26 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X