ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ 4 ಕ್ರಿಕೆಟರ್ ಅಚ್ಚರಿಯ ಕಮ್ ಬ್ಯಾಕ್ ಆಗ್ಲಿ ಎಂದ ಫ್ಯಾನ್ಸ್

IPL 2020 mid-season transfer: These 4 India stars could make surprising return to IPL in UAE

ಮಿಡ್ ಸೀಸನ್ ಆಟಗಾರರ ವರ್ಗಾವಣೆಯನ್ನು ಸಮರ್ಥವಾಗಿ ಬಳಸಿಕೊಂಡು ಹಳೆ ಹುಲಿಗಳನ್ನು ಮತ್ತೆ ಐಪಿಎಲ್ ಅಂಗಳಕ್ಕೆ ಕರೆ ತನ್ನಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಐಪಿಎಲ್ 2020ರಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿವೆ. ಆದರೆ, ಕೆಲ ಹಿರಿಯ ಆಟಗಾರರಿಗೆ ಕಣಕ್ಕಿಳಿಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಐಪಿಎಲ್ ಸೀಸನ್ ಮಧ್ಯದಲ್ಲೇ ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರನ್ನು ತಂಡಗಳ ನಡುವೆ ಟ್ರೇಡ್ ಮಾಡಬಹುದಾಗಿದೆ.

ಐಪಿಎಲ್ ಮಧ್ಯದಲ್ಲೇ 5 ಸ್ಟಾರ್ ಭಾರತೀಯ ಕ್ರಿಕೆಟರ್ ವರ್ಗಾವಣೆ ಸಾಧ್ಯತೆಐಪಿಎಲ್ ಮಧ್ಯದಲ್ಲೇ 5 ಸ್ಟಾರ್ ಭಾರತೀಯ ಕ್ರಿಕೆಟರ್ ವರ್ಗಾವಣೆ ಸಾಧ್ಯತೆ

ಒಂದು ಕಾಲದಲ್ಲಿ ಮಿಂಚಿ ಈಗ ಮರೆಯಾಗಿರುವ ತಾರೆಗಳನ್ನು ಮತ್ತೊಮ್ಮೆ ಕರೆಸಿಕೊಳ್ಳಿ, ಈ ಮೂಲಕ ಐಪಿಎಲ್ ನ ಮಜಾ ಹೆಚ್ಚಿಸಿ ಎಂಬ ಕೂಗೆದ್ದಿದೆ. ಈ ಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಯೂಸುಫ್ ಪಠಾಣ್, ಮುಂಬೈ ಇಂಡಿಯನ್ಸ್ ಪರ ಮಿಂಚಿದ್ದ ಕನ್ನಡಿಗ ಆರ್ ವಿನಯ್ ಕುಮಾರ್, ಕರ್ನಾಟಕದ ಆಟಗಾರರಾದ ಪ್ರವೀಣ್ ದುಬೆ, ರೋಹನ್ ಕದಮ್ ಹೆಸರಿದೆ.

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಯಮಗಳು

ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಯಮಗಳು

* ಪ್ರಸಕ್ತ ಸೀಸನ್ ನಲ್ಲಿ ಎಲ್ಲಾ 8 ತಂಡಗಳು ಕನಿಷ್ಠ 7 ಪಂದ್ಯಗಳನ್ನಾಡಿರಬೇಕು.
* ವರ್ಗಾವಣೆಗೆ ಒಳಪಡುವ ಆಟಗಾರ 2 ಪಂದ್ಯಕ್ಕಿಂತ ಹೆಚ್ಚು ಪಂದ್ಯವನ್ನಾಡಿರಬಾರದು.

* ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರಿಬ್ಬರನ್ನು ಖರೀದಿಸಲು ಅಥವಾ ತಂಡದಿಂದ ತಂಡಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯ.
* ಹೀಗಾಗಿ, ಇನ್ನೂ ಒಂದು ಪಂದ್ಯವಾಡದ ಪವನ್ ದೇಶಪಾಂಡೆಗೂ ಒಂದೇ ನಿಯಮ, ಸಿಕ್ಸರ್ ಕಿಂಗ್ ಗೇಲ್ ಗೂ ಅದೇ ನಿಯಮ.
* ಒಂದು ವರ್ಷವಾದ ಬಳಿಕ ಮುಂದಿನ ಸೀಸನ್ ಹರಾಜು ಪ್ರಕ್ರಿಯೆಗೂ ಮುನ್ನ ಮತ್ತೆ ಹಳೆ ತಂಡಕ್ಕೆ ಮರಳಬಹುದಾಗಿದೆ.

ಯೂಸುಫ್ ಪಠಾಣ್

ಯೂಸುಫ್ ಪಠಾಣ್

ಐಪಿಎಲ್ ಇತಿಹಾಸದಲ್ಲೇ ತ್ವರಿತಗತಿ ಅರ್ಧಶತಕ ಸಿಡಿಸಿರುವ ಯೂಸುಫ್ ಪಠಾಣ್ ಅತ್ಯಂತ ಜನಪ್ರಿಯ ಆಟಗಾರರು ಹೌದು. ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಜೊತೆ ಆಡಿ ಕಪ್ ಎತ್ತಿರುವ ಸಾಧನೆ, ಅನುಭವ ಪಠಾಣ್ ಅವರಿಗಿದೆ. 37 ವರ್ಷ ವಯಸ್ಸಿನ ಯೂಸುಫ್ ಅವರು ಮತ್ತೆ ಮೈದಾನಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ.

ಯಾವ ತಂಡ ಖರೀದಿಸಬಹುದು: ರಾಜಸ್ಥಾನದಲ್ಲಿ ಮಧ್ಯಮ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಬದಲಿಗೆ ಯೂಸುಫ್ ಕರೆ ತರಬಹುದು.

ಪಂಜಾಬ್: ರಾಯಲ್ಸ್ ತಂಡದಂತೆ ಪಂಜಾಬ್ ಕೂಡಾ ಮಧ್ಯಮ ಕ್ರಮಾಂಕದಲ್ಲಿ ಆಲ್ ರೌಂಡರ್ ಆಟಗಾರನ ಕೊರತೆ ಅನುಭವಿಸುತ್ತಿದೆ. ಮ್ಯಾಕ್ ವೆಲ್ ನಿರೀಕ್ಷಿತ ಆಟ ನೀಡುತ್ತಿಲ್ಲ. ಸರ್ಫರಾಜ್, ಮಂದೀಪ್ ಸಿಕ್ಕ ಅವಕಾಶ ಕೈ ಚೆಲ್ಲಿದ್ದಾರೆ. ಯೂಸುಫ್ ಗೆ ದುಬೈ ಟಿಕೆಟ್ ಕೊಟ್ರೆ ಒಳ್ಳೆಯದು.

ಚೆನ್ನೈ: ದುಬಾರಿ ಆಟಗಾರ ಕೇದಾರ್ ಜಾಧವ್, ಋತುರಾಜ್ ಗಾಯಕ್ವಾಡ್ ಪೇಲವ ಪ್ರದರ್ಶನದಿಂದ ಬೇಸತ್ತಿರುವ ಚೆನ್ನೈ ಈಗ ಗೆಲುವಿನ ಲಯಕ್ಕೆ ಮರಳಿದೆ. ಪ್ಲೇ ಆಫ್ ತಲುಪಬೇಕಾದರೆ, ಮಧ್ಯಮ ಕ್ರಮಾಂಕದಲ್ಲಿ ಯೂಸುಫ್ ರಂಥ ಆಟಗಾರ ಅವಶ್ಯ.

ಆರ್ ವಿನಯ್ ಕುಮಾರ್

ಆರ್ ವಿನಯ್ ಕುಮಾರ್

ಕರ್ನಾಟಕದ ಮಾಜಿ ರಣಜಿ ನಾಯಕ, ಮಧ್ಯಮ ವೇಗಿ ಆರ್ ವಿನಯ್ ಕುಮಾರ್ ಅವರು ಐಪಿಎಲ್ ನಲ್ಲಿ 105 ವಿಕೆಟ್ ಪಡೆದಿರುವ ಅನುಭವಿ ಬೌಲರ್. ಕೊನೆಯದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಕಳೆದ ದೇಶಿ ಸೀಸನ್ ನಲ್ಲಿಪುದುಚೇರಿ ಪರ ಬ್ಯಾಟ್, ಬೌಲ್ ಎರಡರಲ್ಲೂ ಮಿಂಚಿದ್ದಾರೆ. ಐಪಿಎಲ್ ನಲ್ಲಿ ಮುಂಬೈ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರೂ ಕೂಡಾ.

ಸನ್ ರೈಸರ್ಸ್ ಹೈದರಾಬಾದ್: ಭುವನೇಶ್ವರ್ ಕುಮಾರ್, ಮಿಚೆಲ್ ಮಾರ್ಷ್ ಇಲ್ಲದ ಬೌಲಿಂಗ್ ಪಡೆಗೆ ವಿನಯ್ ಅನುಭವ ಸಹಾಯವಾಗಬಲ್ಲುದು. ಭುವಿ ಬದಲಿಗೆ ಪೃಥ್ವಿರಾಜ್ ಯಾರಾ ಬಂದಿದ್ದರೂ ಇನ್ನೊಬ್ಬರಿಗೆ ಸ್ಥಾನ ಇದ್ದೇ ಇದೆ.

ರೋಹನ್ ಕದಂ

ರೋಹನ್ ಕದಂ

ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕಳೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ವಿರುದ್ಧ ಸ್ಫೋಟ 81ರನ್ ಸಿಡಿಸಿದ್ದರು. ಸುಮಾರು 142 ಸ್ಟ್ರೈಕ್ ರೇಟ್ ನಂತೆ 800 ಪ್ಲಸ್ ರನ್ ಗಳಿಸಿದ್ದರೂ ಐಪಿಎಲ್ ಫ್ರಾಂಚೈಸಿಗಳು ಗಮನ ಹರಿಸಿಲ್ಲದಿರುವುದು ಅಚ್ಚರಿಯೇ ಸರಿ.

ರಾಜಸ್ಥಾನ್ ರಾಯಲ್ಸ್, ಕಿಂಗ್ಸ್ ಎಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಯೂಸುಫ್ ಬದಲಿಗೆ ರೋಹನ್ ಆಯ್ಕೆ ಮಾಡಬಹುದು. ಈ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಯುವ ಪ್ರತಿಭೆಗೆ ಅವಕಾಶ ನೀಡಬಹುದು.

ಐಪಿಎಲ್ transfer ಆಗಬಲ್ಲ ಸಂಭಾವ್ಯ 5 ವಿದೇಶಿ ಆಟಗಾರರು ಯಾರು?

ಪ್ರವೀಣ್ ದುಬೆ

ಪ್ರವೀಣ್ ದುಬೆ

ಕರ್ನಾಟಕದ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆ ಇಲ್ಲಿ ತನಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ಬೌಲರ್ ಆಗಿ ಉಳಿದಿದ್ದಾರೆ. ಕೊಹ್ಲಿ, ಎಬಿಡಿ ಅವರಿಂದ ಹೊಗಳಿಸಿಕೊಂಡಿದ್ದು ಬಿಟ್ಟರೆ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿಲ್ಲ. 14 ಟಿ 20ಯಲ್ಲಿ 16 ವಿಕೆಟ್ ಪಡೆದಿದ್ದು ಎಕಾನಾಮಿ 6.87ರಷ್ಟಿದೆ. ಕೆಳ ಕ್ರಮಾಂಕದಲ್ಲಿ ಬ್ಯಾಟ್ ಕೂಡಾ ಬೀಸಬಲ್ಲರು.

ಯಾವ ತಂಡ?: ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಅಮಿತ್ ಮಿಶ್ರಾಗೆ ಬದಲಿ ಆಟಗಾರನನ್ನು ಹೆಸರಿಸಿಲ್ಲ. ಪ್ರವೀಣ್ ಒಳ್ಳೆ ಆಯ್ಕೆಯಾಗಬಲ್ಲರು. ಡೆಲ್ಲಿಯಲ್ಲಿ ನೇಪಾಳ ಮೂಲದ ಸಂದೀಪ್ ಲಾಮಿಚಾನೆ ಇದ್ದರೂ ಅವಕಾಶ ನೀಡುತ್ತಿಲ್ಲ. ವಿದೇಶಿ ಕೋಟಾದಲ್ಲಿ ಸಂದೀಪ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಕಷ್ಟ, ಅಕ್ಷರ್ ಹಾಗೂ ಅರ್ ಅಶ್ವಿನ್ ಇಲ್ಲದಿದ್ದಾಗ ಅವಕಾಶ ಸಿಗಬಹುದು ಅಷ್ಟೆ.

ಪಂಜಾಬ್: ರವಿ ಬಿಷ್ನೋಯಿಗೆ ಸಾಥ್ ನೀಡಬಲ್ಲ ಮತ್ತೊಬ್ಬ ಬೌಲರ್ ಹುಡುಕಾಟದಲ್ಲಿರುವ ಪಂಜಾಬ್ ಗೆ ಪ್ರವೀಣ್ ಉತ್ತಮ ಆಯ್ಕೆಯಾಗಬಲ್ಲರು.

ಚೆನ್ನೈಗೆ Mid season Transferನಲ್ಲಿ ಬೇಕಿರುವ 4 ಕ್ರಿಕೆಟರ್ಸ್

Story first published: Wednesday, October 14, 2020, 12:48 [IST]
Other articles published on Oct 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X