ಐಪಿಎಲ್‌ನಲ್ಲಿ ಫ್ಲಾಪ್ ಆದ 3 ಅಂತಾರಾಷ್ಟ್ರೀಯ ತಂಡದ ನಾಯಕರು ಇವರು!

ವಿಶ್ವದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಲೀಗ್ ಎಂಬ ಖ್ಯಾತಿಯನ್ನು ಪಡೆದಿರುವ ಐಪಿಎಲ್ ಇಷ್ಟು ಪ್ರಖ್ಯಾತಿಯನ್ನು ಪಡೆಯಲು ಇದರಲ್ಲಿ ಭಾಗವಹಿಸುವ ಜಾಗತಿಕ ತಾರೆಗಳು ಕೂಡ ಕಾರಣ. ವಿಶ್ವ ಕ್ರಿಕೆಟ್‌ನ ಪ್ರಮುಖ ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುವ ಕಾರಣದಿಂದಾಗಿ ಅಭಿಮಾನಿಗಳ ಪಾಲಿಗೂ ಈ ಟೂರ್ನಿ ಹೆಚ್ಚಿನ ರೋಚಕತೆಯನ್ನು ನೀಡುತ್ತದೆ. ಆಟಗಾರರು ಕೂಡ ಅಷ್ಟೆ, ಇಲ್ಲಿ ಪಡೆಯುವ ಜಾಗತಿಕವಾಗಿ ಮನ್ನಣೆ ದೊರೆಯುವ ಕಾರಣದಿಂದಾಗಿ ಈ ಟೂರ್ನಿಯಲ್ಲಿ ಭಾಗವಹಿಸಲು ಉತ್ಸುಕತೆಯನ್ನು ವ್ಯಕ್ತಪಡಿಸುತ್ತಾರೆ.

ಬೇರೆ ಬೇರೆ ಸಂಸ್ಕೃತಿ, ಸಂಪ್ರದಾಯ, ಆಚರಣೆಯನ್ನು ಹೊಂದಿರುವ ಬೇರೆ ಬೇರೆ ದೇಶಗಳ ಆಟಗಾರರು ಸುದೀರ್ಘ ಕಾಲದಿಂದ ಈ ಟೂರ್ನಿಯ ಭಾಗವಾಗಿರುವುದರಿಂದಾಗಿ ಭಾರತೀಯ ಕ್ರಿಕೆಟ್ ಪ್ರೇಮಿಗಳು ಕೂಡ ಈ ಆಟಗಾರರನ್ನು ತಮ್ಮವರು ಎಂಬ ಭಾವನೆಯೊಂದಿಗೆ ಪ್ರೀತಿಸುತ್ತಾರೆ.

ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್

ಇಂಥಾ ಪ್ರಖ್ಯಾತ ಲೀಗ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ ಸಾಕಷ್ಟು ಆಟಗಾರರು ಮಿಂಚುವಲ್ಲಿ ವಿಫಲವಾಗಿದ್ದಾರೆ. ಅದರಲ್ಲಿ ಅಂತಾರಾಷ್ಟ್ರೀಯ ತಂಡದ ನಾಯಕರಾಗಿ ಮುನ್ನಡೆಸಿದ ಮೂವರು ಆಟಗಾರರು ಐಪಿಎಲ್‌ನಲ್ಲಿ ಯಶಸ್ಸು ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಬೇರೆ ಬೇರೆ ತಂಡಗಳಲ್ಲಿ ಆಡಿದ್ದರೂ ಸಫಲವಾಗಲು ಸಾಧ್ಯವಾಗಿಲ್ಲ. ಆ ಹಾಗಾದರೆ ಆ ಮೂವರು ನಾಯಕರು ಯಾರು? ಈ ಬಗ್ಗೆ ವಿವರಗಳು ಇಲ್ಲಿದೆ.

ಆಸಿಸ್ ಹಾಲಿ ನಾಯಕ ಆರೋನ್ ಫಿಂಚ್

ಆಸಿಸ್ ಹಾಲಿ ನಾಯಕ ಆರೋನ್ ಫಿಂಚ್

ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ತಂಡದ ಹಾಲಿ ನಾಯಕ ಆರೋನ್ ಫಿಂಚ್ ಐಪಿಎಲ್‌ನಲ್ಲಿ ಈವರೆಗೆ ಒಟ್ಟು 8 ತಂಡಗಳ ಪರವಾಗಿ ಆಡಿದ್ದಾರೆ. ಆದರೆ ಯಾವುದೇ ತಂಡದಲ್ಲಿಯೂ ಫಿಂಚ್ ಅದ್ಭುತ ಪ್ರದರ್ಶನ ನಿಡುವ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಅತಿ ಹೆಚ್ಚು ಬಾರಿ ಫ್ರಾಂಚೈಸಿಯಿಂದ ಫ್ರಾಂಚೈಸಿಗೆ ವಲಸೆಹೋಗಿದ್ದಾರೆ ಫಿಂಚ್.

ಐಪಿಎಲ್‌ನಲ್ಲಿ 85 ಇನ್ನಿಂಗ್ಸ್‌ಗಳಲ್ಲಿ ಆಡಿರುವ ಫಿಂಚ್ ಒಟ್ಟು ಈವರೆಗೆ 2005 ರನ್‌ಗಳನ್ನು ಬಾರಿಸಿದ್ದಾರೆ. 25.38 ರ ಸರಾಸರಿಯಲ್ಲಿ 127.71 ಸ್ಟ್ರೈಕ್ ರೇಟ್‌ನಲ್ಲಿ ರನ್‌ಗಳಿಸಿದ್ದಾರೆ ಆಸ್ಟ್ರೇಲಿಯಾದ ಈ ಅನುಭವಿ ಆಟಗಾರ. ಫಿಂಚ್ ಸ್ಪಿನ್ ಬೌಲಿಂಗ್‌ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಆಟಗಾರನಾಗಿದ್ದರೂ ಭಾರತದ ಪಿಚ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. 2020ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಆಡಿದ್ದ ಫಿಂಚ್ ಬಳಿಕ ತಂಡದಿಂದ ಹೊರಗುಳಿದಿದ್ದರು. ಈ ಬಾರಿಯ ಐಪಿಎಲ್‌ಗೆ ನಡೆದ ಹರಾಜಿನಲ್ಲಿ ಯಾವುದೇ ತಂಡ ಆರೋನ್ ಫಿಂಚ್‌ಗೆ ಮಣೆ ಹಾಕುವ ಮನಸ್ಸು ಮಾಡಲಿಲ್ಲ. ಈ ಬಾರಿಯ ಐಪಿಎಲ್ ಮುಕ್ತಾಯದ ಬಳಿಕ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಫಿಂಚ್

ಶ್ರೀಲಂಕಾ ಮಾಜಿ ನಾಯಕ ಏಂಜಲೋ ಮ್ಯಾಥ್ಯೂಸ್

ಶ್ರೀಲಂಕಾ ಮಾಜಿ ನಾಯಕ ಏಂಜಲೋ ಮ್ಯಾಥ್ಯೂಸ್

ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದು ಮಿಮಚಲು ವಿಫಲವಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ತಮಡದ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್. ಏಂಜಲೋ ಮ್ಯಾಥ್ಯೂಸ್‌ಗೆ ಐಪಿಎಲ್‌ನಲ್ಲಿ ಮಿಂಚುವ ಸಾಕಷ್ಟು ಅವಕಾಶಗಳು ದೊರೆತಿತ್ತು. ಕೆಲ ಬಾರಿ ಹರಾಜುಗಳಲ್ಲಿ ಮ್ಯಾಥ್ಯೂಸ್ ದೊಡ್ಡ ಮೊತ್ತವನ್ನೂ ಪಡೆದುಕೊಂಡಿದ್ದರು. ಡೆಲ್ಲಿ ಡೇರ್‌ಡೆವಿಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪುಣೆ ವಾರಿಯರ್ಸ್ ತಂಡದೊಮದಿಗೆ ಒಪ್ಪಂದ ಮಾಡಿಕೊಂಡಿದ್ದ ಮ್ಯಾಥ್ಯೂಸ್ ಯಾವ ತಂಡದಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ನೆಲೆಯಾಗಲು ಸಾಧ್ಯವಾಗಲಿಲ್ಲ.

ಐಪಿಎಲ್‌ನಲ್ಲಿ ಒಟ್ಟು 42 ಇನ್ನಿಂಗ್ಸ್‌ಗಳಲ್ಲಿ ಆಡಿರುವ ಏಂಜಲೋ ಮ್ಯಾಥ್ಯೂಸ್ 23.35 ಸರಾಸರಿಯಲ್ಲಿ 724 ರನ್ ಬಾರಿಸಿದ್ದು 125.91 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಮ್ಯಾಥ್ಯೂಸ್ 44 ಇನ್ನಿಂಗ್ಸ್‌ಗಳಲ್ಲಿ 39.96 ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಶ್ರೀಲಂಕಾದ ಅನುಭವಿ 8.18 ಎಕಾನಮಿ ದರದಲ್ಲಿ ಬೌಲಿಂಗ್ ನಡೆಸಿದ್ದಾರೆ.

ನಾಯಕತ್ವದ ವಿಚಾರದಲ್ಲಿ KL ರಾಹುಲ್ ಗೆ ಮಣೆ ಹಾಕುತ್ತಾ BCCI? | Oneindia Kannada
ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರೆನ್ ಸಮಿ

ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರೆನ್ ಸಮಿ

ವೆಸ್ಟ್ ಇಂಡೀಸ್ ಕ್ರಿಕೆಟ್ ಟಿ20 ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿದ್ದಾರೆ. ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಟಿ20 ಚಾಂಪಿಯನ್ ಪಟ್ಟಕ್ಕೇರಿದ್ದಾಗ ಸಮಿ ತಂಡದ ನಾಯಕನಾಗಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಬಲ್ಲಿ ತಾವು ಹೊಂದಿದ್ದ ಫಾರ್ಮ್‌ಅನ್ನು ಐಪಿಎಲ್‌ನಲ್ಲಿ ಮುಮದುವರಿಸಲು ಅವರು ವಿಫಲವಾಗಿದ್ದರು. ಸಮಿ 2013 ರಲ್ಲಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರವಾಗಿ ಕಣಕ್ಕಿಳಿಯುವ ಮೂಲಕ ಪದಾರ್ಪಣೆ ಮಾಡಿದರು. ಅದಾದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಆಡಿದ್ದರು.

ಡ್ಯಾರನ್ ಸಮಿಯನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನನ್ನಾಗಿಯೂ ಮಾಡಲಾಗಿತ್ತು. ಆದರೆ ಸಮಿ ಪ್ರದರ್ಶನ ಮಾತ್ರ ಸುಧಾರಣೆಯಾಗಲೇ ಇಲ್ಲ. ಐಪಿಎಲ್‌ನಲ್ಲಿ ಒಟ್ಟು 22 ಪಂದ್ಯಗಳನ್ನು ಆಡಿರುವ ಸಮಿ ಕೇವಲ 241 ರನ್‌ ಮಾತ್ರವೇ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಪಡೆದಿದ್ದು 11 ವಿಕೆಟ್ ಮಾತ್ರ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಿರುವ ಸಮಿ ಐಪಿಎಲ್‌ನಲ್ಲಿ ಈ ಪರಿಯಾಗಿ ವೈಫಲ್ಯತೆ ಅನುಭವಿಸಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುತ್ತದೆ.

For Quick Alerts
ALLOW NOTIFICATIONS
For Daily Alerts
Story first published: Thursday, September 16, 2021, 20:36 [IST]
Other articles published on Sep 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X