ಐಪಿಎಲ್ 2021: ಆರ್‌ಸಿಬಿ ಅತಿ ಹೆಚ್ಚು ಸಮಸ್ಯೆಗೆ ಒಳಗಾಗಲಿದೆ ಎಂಬುದಕ್ಕೆ ಕಾರಣ ತಿಳಿಸಿದ ಚೋಪ್ರ

ಬೆಂಗಳೂರು, ಸೆಪ್ಟೆಂಬರ್ 13: ಐಪಿಎಲ್ 2021ರ ಆವೃತ್ತಿಯ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ಈಗ ದಿನಗಣನೆ ಆರಂಭವಾಗಿದೆ. ಟೂರ್ನಿಯಲ್ಲಿ ಭಾಗಿಯಾಗುವ ಬಹುತೇಕ ಎಲ್ಲಾ ಆಟಗಾರರು ಈಗ ಯುಎಇಗೆ ತಲುಪಿದ್ದು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆದರೆ ಈ ಬಾರಿಯ ಐಪಿಎಲ್ ಎರಡನೇ ಚರಣದ ಪಂದ್ಯಗಳಿಗೆ ಮೊದಲ ಹಂತದಲ್ಲಿ ಭಾಗಿಯಾಗಿದ್ದ ಕೆಲ ಪ್ರಮುಖ ಆಟಗಾರರ ಸೇವೆ ಲಭ್ಯವಾಗುತ್ತಿಲ್ಲ. ವೈಯಕ್ತಿಕ ಕಾರಣಗಳನ್ನು ನೀಡಿ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಂದ ಹಿಂದಕ್ಕೆ ಸರಿದಿದ್ದಾರೆ. ಇಂತಾ ಅಲಭ್ಯ ಆಟಗಾರರ ಸ್ಥಾನಕ್ಕೆ ಫ್ರಾಂಚೈಸಿಗಳು ಈಗಾಗಲೇ ಬದಲಿ ಆಟಗಾರರನ್ನು ಕೂಡ ಸೇರ್ಪಡೆಗೊಳಿಸಿದೆ.

ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಮಡಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ತಂಡಗಳಲ್ಲಿ ಕೂಡ ಮೊದಲ ಭಾಗದ ಐಪಿಎಲ್‌ನಲ್ಲಿ ಭಾಗವಹಿಸಿದ್ದ ಕೆಲ ಆಟಗಾರರು ಎರಡನೇ ಚರಣದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗಳು ಈ ಫ್ರಾಂಚೈಸಿಗಳಿಗೆ ಉಂಟಾಗಿದೆ.

5ನೇ ಟೆಸ್ಟ್‌ ಬದಲು ಹೆಚ್ಚುವರಿ ಟಿ20 ಆಡುವಂತೆ ಭಾರತದಿಂದ ಇಂಗ್ಲೆಂಡ್‌ಗೆ ಆಫರ್?!5ನೇ ಟೆಸ್ಟ್‌ ಬದಲು ಹೆಚ್ಚುವರಿ ಟಿ20 ಆಡುವಂತೆ ಭಾರತದಿಂದ ಇಂಗ್ಲೆಂಡ್‌ಗೆ ಆಫರ್?!

ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಹೆಚ್ಚು ತೊಂದರೆಗೆ ಒಳಗಾಗಲಿದೆ ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ ಆಕಾಶ್ ಚೋಪ್ರ.

"ಆರ್‌ಸಿಬಿಗೆ ಉಂಟಾಗಲಿದೆ ಹೆಚ್ಚಿನ ಸಮಸ್ಯೆ"

ಈ ಬಾರಿಯ ಐಪಿಎಲ್ ಎರಡನೇ ಚರಣದ ಪಂದ್ಯಕ್ಕೂ ಮುನ್ನ ಹೆಚ್ಚಿನ ಬದಲಾವನೆಯಾಗಿರುವ ತಂಡ ಎಂದರೆ ಅದು ಆರ್‌ಸಿಬಿ. ವಿರಾಟ್ ಕೊಹ್ಲಿ ನೇತೃತ್ವದ ತಂಡ ಅರ್ಧಕ್ಕರ್ಧ ವಿದೇಶಿ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಇವರಿಗೆ ಬದಲಿ ಆಟಗಾರರನ್ನು ಆರ್‌ಸಿಬಿ ಸೇರ್ಪಡೆಗೊಳಿಸಿದೆ. ಹಾಗಿದ್ದರೂ ಕೊಹ್ಲಿ ಪಡೆ ಹೆಚ್ಚಿನ ಸಮಸ್ಯೆಯನ್ನು ಎದುರಿಸಲಿದೆ ಎಂಬ ಅಭಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ. ಡೇನಿಯಲ್ ಸ್ಯಾಮ್ಸ್, ಆಡಮ್ ಜಂಪಾ, ಕೇನ್ ರಿಚರ್ಡ್ಸನ್, ಫಿನ್ ಅಲೆನ್ ಮತ್ತು ಸ್ಕಾಟ್ ಕುಗೆಲೆಜ್ನ್ ಐಪಿಎಲ್‌ನಿಂದ ಹೊರಗುಳಿದಿದ್ದು ಇವರ ಸ್ಥಾನಕ್ಕೆ ಆರ್‌ಸಿಬಿ ಟಿಮ್ ಡೇವಿಡ್, ದುಷ್ಮಂತ ಚಮೀರಾ, ವನಿಂದು ಹಸರಂಗ ಮತ್ತು ಜಾರ್ಜ್ ಗಾರ್ಟನ್ ಅವರನ್ನು ಸೇರ್ಪಡೆಗೊಳಿಸಿದೆ.

ಆಡುವ ಬಳಗದಲ್ಲಿ ಹೆಚ್ಚಿನ ಬದಲಾವಣೆಯಿಲ್ಲ

ಆಡುವ ಬಳಗದಲ್ಲಿ ಹೆಚ್ಚಿನ ಬದಲಾವಣೆಯಿಲ್ಲ

ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಆರ್‌ಸಿಬಿ ತಂಡದಲ್ಲಿ ಹೆಚ್ಚಿನ ಬದಲಾವಣೆಯಾಗಿದ್ದರೂ ಆಡುವ ಬಳಗದಲ್ಲಿ ದೊಡ್ಡ ವ್ಯತ್ಯಾಸಗಳು ಆಗುವುದಿಲ್ಲ ಎಂದಿದ್ದಾರೆ. ಯಾಕೆಂದರೆ ಹೊರಗುಳಿಯಲು ನಿರ್ಧರಿಸಿದ ಆಟಗಾರರು ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. ಆದರೆ ಮೂಲ ತಂಡದಲ್ಲಿ ಬದಲಾವಣೆಯಾಗಿದೆ ಎಂಬ ಅಬಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಬಲಿಷ್ಠವಾದಂತೆ ಕಾಣಿಸುತ್ತಿದೆ ಆರ್‌ಸಿಬಿ

ಮತ್ತಷ್ಟು ಬಲಿಷ್ಠವಾದಂತೆ ಕಾಣಿಸುತ್ತಿದೆ ಆರ್‌ಸಿಬಿ

ಆಕಾಶ್ ಚೋಪ್ರ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಹೊರತುಪಡಿಸಿ ವಿಶ್ಲೇಷಣೆ ಮಾಡಿದರೆ ಆರ್‌ಸಿಬಿ ತಂಡದ ಆಟಗಾರರಲ್ಲಿ ಪ್ರಮುಖ ಬದಲಾವಣೆಯಾದರು ಕೂಡ ಇದು ತಂಡದ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಸ್ವತಃ ಆರ್‌ಸಿಬಿ ಕೂಡ ಈ ಬಗ್ಗೆ ಕಳವಳಗೊಂಡಂತಿಲ್ಲ. ಟಿಮ್ ಡೇವಿಡ್, ವನಿಂದು ಹಸರಂಗಾ ಅವರಂತಾ ಆಟಗಾರರು ತಂಡದಲ್ಲಿ ಮತ್ತಷ್ಟು ಆಲ್‌ರೌಂಡರ್ ಶಕ್ತಿಯನ್ನು ತುಂಬಿದ್ದಾರೆ. ಇದು ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೂ ಪರಿಹಾರವನ್ನು ನೀಡುತ್ತದೆ.

RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada
ಆರ್‌ಸಿಬಿ ಸಂಪೂರ್ಣ ತಂಡ ಹೀಗಿದೆ

ಆರ್‌ಸಿಬಿ ಸಂಪೂರ್ಣ ತಂಡ ಹೀಗಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ತಂಡ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಜಾರ್ಜ್ ಗಾರ್ಟನ್, ಆಕಾಶ್ ದೀಪ್, ಪವನ್ ದೇಶಪಾಂಡೆ, ಟಿಮ್ ಡೇವಿಡ್, ಶಹಬಾಜ್ ಅಹಮದ್, ನವದೀಪ್ ಸೈನಿ, ವನಿಂದು ಹಸರಂಗ, ಕೈಲ್ ಜೇಮಿಸನ್ , ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್, ಕೆಎಸ್ ಭರತ್, ಮೊಹಮ್ಮದ್ ಅಜರುದ್ದೀನ್, ಸುಯಾಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ದುಷ್ಮಂತ ಚಮೀರಾ

For Quick Alerts
ALLOW NOTIFICATIONS
For Daily Alerts
Story first published: Monday, September 13, 2021, 19:25 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X