ಆರ್‌ಸಿಬಿಗೆ ಮ್ಯಾಕ್ಸ್ ಲೈಫ್ ಅಧಿಕೃತ ವಿಮಾ ಪಾಲುದಾರ ಸಂಸ್ಥೆ

ಬೆಂಗಳೂರು, ಏಪ್ರಿಲ್ 07: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದೊಂದಿಗೆ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಪಾಲುದಾರಿಕೆ ಘೋಷಿಸಿದೆ.

ಸತತ ಮೂರನೇ ವರ್ಷ ಈ ಪಾಲುದಾರಿಕೆಯನ್ನು ಹೊಂದುವ ಮೂಲಕ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ತಂಡಕ್ಕೆ ಅಧಿಕೃತ ಲೈಫ್ ಇನ್ಶೂರೆನ್ಸ್ ಪಾಲುದಾರ ಸಂಸ್ಥೆಯಾಗಿದೆ. ಇದರ ಅಂಗವಾಗಿ ತಂಡದ ಸದಸ್ಯರ ನಾನ್-ಲೀಡಿಂಗ್ ಟ್ರೌಸರ್ ಲೆಗ್‌ನಲ್ಲಿ ಸಂಸ್ಥೆಯ ಲೋಗೋ ಇರಲಿದೆ. ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಪಂದ್ಯ 9 ಏಪ್ರಿಲ್ 2021 ರಂದು ಚೆನ್ನೈನಲ್ಲಿ ನಿಗದಿಯಾಗಿದೆ.

ಸಮಗ್ರ ಕ್ರಿಕೆಟ್ ಗೇರ್ ಆಟಗಾರರನ್ನು ದೈಹಿಕ ಅಪಾಯಗಳು ಮತ್ತು ಗಾಯಗಳಿಂದ ತಡೆಯುವಂತೆ, ಜೀವ ವಿಮೆಯ ರೂಪದಲ್ಲಿ ಕೂಡ ರಕ್ಷಣಾತ್ಮಕ ಗೇರ್ ಅಗತ್ಯವಿರುತ್ತದೆ. ಇದು ಹಣಕಾಸಿನ ಅನಿಶ್ಚಿತತೆಯಿಂದ ಕೂಡ ರಕ್ಷಿಸುತ್ತದೆ.

ಐಪಿಎಲ್ : 2020ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಆಟಗಾರರು

ಈ ಪಾಲುದಾರಿಕೆಯ ಮೂಲಕ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಆರ್ ಸಿಬಿ ಆಟಗಾರರನ್ನು ರಕ್ಷಣಾತ್ಮಕವಾಗಿ' ಆಟವಾಡುವಂತೆ ಪ್ರೇರೇಪಣೆ ಮಾಡುವುದಷ್ಟೇ ಅಲ್ಲದೇ ಟರ್ಮ್ ಲೈಫ್ ಇನ್ಶೂರೆನ್ಸ್ ಅನ್ನು ಮಾಡಿಸಿಕೊಂಡು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತೆ ಆಟಗಾರರ ಅಭಿಮಾನಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿದೆ. ಈ ಪಾಲುದಾರಿಕೆಯು ನೀವು ವಿಭಿನ್ನರು' ಎಂಬ ಕಂಪನಿಯ ನಂಬಿಕೆಯನ್ನು ಪುನರುಚ್ಚಾರ ಮಾಡುತ್ತದೆ. ಈ ತತ್ತ್ವದ ಆಧಾರದ ಮೇಲೆ ನಿಮ್ಮನ್ನು ಪ್ರೀತಿಸುವವರಿಗೆ ಆರ್ಥಿಕವಾಗಿ ರಕ್ಷಣೆ ನೀಡುವ ಮೂಲಕ ಅವರು ಉತ್ತಮ ಜೀವನವನ್ನು ಸಾಗಿಸುವಂತೆ ಮಾಡಲು ಲೈಫ್ ಇನ್ಶೂರೆನ್ಸ್ ನಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡಲಿದೆ.

ಈ ಪಾಲುದಾರಿಕೆ ಬಗ್ಗೆ ಮಾತನಾಡಿದ ಮ್ಯಾಕ್ಸ್ ಲೈಫ್‌ನ ನಿರ್ದೇಶಕ ಮತ್ತು ಮುಖ್ಯ ಮಾರುಕಟ್ಟೆ ಅಧಿಕಾರಿ ಅಲೋಕ್ ಭಾನ್, ''ಕೋವಿಡ್-19 ನಿಂದ ಗ್ರಾಹಕರ ಭಾವನಾತ್ಮಕ ವಿಚಾರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಆದರೆ, ಕ್ರಿಕೆಟ್ ಮತ್ತು ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ದೇಶವನ್ನು ಧನಾತ್ಮಕ ರೀತಿಯಲ್ಲಿ ಬೆಸೆಯುವ ಕೆಲಸ ಮಾಡುತ್ತಿವೆ. ಈ ದಿಸೆಯಲ್ಲಿ ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಸತತ ಮೂರನೇ ವರ್ಷ ಅಧಿಕೃತ ಲೈಫ್ ಇನ್ಶೂರೆನ್ಸ್ ಪಾಲುದಾರಿಕೆಯನ್ನು ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವೆನಿಸುತ್ತಿದೆ.

ಈ ಪಾಲುದಾರಿಕೆ ಮೂಲಕ ತಂಡದ ವೈವಿಧ್ಯತೆ ಮತ್ತು ತಂಡದ ಅಭಿಮಾನಿಗಳು ತಮ್ಮ ಪ್ರೀತಿಪಾತ್ರರ ಜೀವನವನ್ನು ವಿಭಿನ್ನವಾಗಿ ರೂಪಿಸುವ ಸಂದೇಶವನ್ನು ನೀಡಲಿದ್ದೇವೆ. ಇದರ ಜತೆಗೆ ಪ್ರಸ್ತುತ ಇರುವ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಒಬ್ಬರ ಆರ್ಥಿಕ ಭವಿಷ್ಯವನ್ನು ರೂಪಿಸುವುದು ಅತ್ಯಂತ ಮುಖ್ಯವಾಗಿದೆ. ವಿಶೇಷವಾಗಿ ಟರ್ಮ್ ಇನ್ಶೂರೆನ್ಸ್ ಯೋಜನೆಗಳನ್ನು ಹೊಂದಿರುವುದು ಪ್ರಮುಖವಾಗಿದೆ. ಏಕೆಂದರೆ, ಈ ಯೋಜನೆಗಳು ಅಗತ್ಯ ಬಿದ್ದಾಗ ಆದಾಯ ಪ್ರಯೋಜನಗಳನ್ನು ನೀಡುತ್ತವೆ'' ಎಂದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, April 7, 2021, 20:30 [IST]
Other articles published on Apr 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X