ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅವರಿಬ್ಬರೇ ಯಾವಾಗಲೂ ಗೆಲ್ಲಿಸಲು ಸಾಧ್ಯವಿಲ್ಲ: ಗುಜರಾತ್ ತಂಡದ ಹುಳುಕು ಬೊಟ್ಟು ಮಾಡಿದ ಚೋಪ್ರ!

IPL 2022: Aakash Chopra statement on GTs batting issues said Miller and Tewatia wont save you every time

ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಅದ್ಭುತ ಪ್ರದರ್ಶನ ನೀಡಿ ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದ ಗುಜರಾತ್ ಟೈಟನ್ಸ್ ಗೆಲುವಿನ ಲಯ ಕಳೆದುಕೊಂಡಿದೆ. ಕಳೆದ ಎರಡು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಸೋಲು ಅನುಭವಿಸಿದೆ. ಹೀಗಾಗಿ ಮತ್ತೆ ಗೆಲುವಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿದೆ ಜಿಟಿ.

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಗುಜರಾತ್ ಟೈಟನ್ಸ್ ತಂಡದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲಿಗೆ ಕಾರಣವನ್ನು ತಿಳಿಸಿದ್ದಾರೆ. ಅಲ್ಲದೆ ಬಲಿಷ್ಠ ತಂಡ ಎನಿಸಿಕೊಂಡಿರುವ ಗುಜರಾತ್ ಟೈಟನ್ಸ್‌ನಲ್ಲಿರುವ ಪ್ರಮುಖ ಹುಳುಕನ್ನು ಆಕಾಶ್ ಚೋಪ್ರ ಬೊಟ್ಟು ಮಾಡಿದ್ದಾರೆ.

ಹಾಗಾದರೆ ಸಾಕಷ್ಟು ಆಲ್‌ರೌಂಡರ್‌ಗಳು, ಫಿನಿಷರ್‌ಗಳನ್ನು ಹೊಂದಿರುವ ಗುಜರಾತ್ ಟೈಟನ್ಸ್ ತಂಡದಲ್ಲಿರುವ ಕೊರತೆಯೇನು? ಆಕಾಶ್ ಚೋಪ್ರ ಹೇಳಿದ್ದೇನು? ಮುಂದೆ ಓದಿ..

ಕೆಕೆಆರ್ ವಿರುದ್ಧ ಸೋಲು: ಬ್ಯಾಟರ್‌ಗಳ ಪ್ರದರ್ಶನವೇ ಹೊಣೆ ಸೋಲಿಗೆ ಕಾರಣ ಎಂದ ರೋಹಿತ್ ಶರ್ಮಾಕೆಕೆಆರ್ ವಿರುದ್ಧ ಸೋಲು: ಬ್ಯಾಟರ್‌ಗಳ ಪ್ರದರ್ಶನವೇ ಹೊಣೆ ಸೋಲಿಗೆ ಕಾರಣ ಎಂದ ರೋಹಿತ್ ಶರ್ಮಾ

ಜಿಟಿ ಬ್ಯಾಟಿಂಗ್ ಬಗ್ಗೆ ಚೋಪ್ರ ಕಳವಳ: ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ವಿಭಾಗದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಆರಂಭಿಕ ಆಟಗಾರರಾದ ವೃದ್ಧಿಮಾನಾ ಸಾಹಾ ಅದ್ಭುತ ಪ್ರದರ್ಶನ ನೀಡುತ್ತಿದ್ದು ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ಅಸ್ಥಿರ ಪ್ರದರ್ಶನ ನೀಡುತ್ತಿದೆ ಎಂದು ಆಕಾಶ್ ಚೋಪ್ರ ಬೊಟ್ಟು ಮಾಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಜಿಟಿ ತಂಡದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.

ಗುಜರಾತ್ ಬೌಲಿಂಗ್ ಉತ್ತಮವಾಗಿದೆ: "ಗುಜರಾತ್ ಟೈಟನ್ಸ್ ತಂಡ ಉತ್ತಮ ಬೌಲಿಂಗ್ ವಿಭಾಗವನ್ನಜು ಹೊಂದಿದೆ. ಅವರ ಬ್ಯಾಟಿಂಗ್ ವಿಭಾಗದಲ್ಲಿ ಕೊರತೆ ಕಾಣಿಸುತ್ತಿದೆ. ಯಾವಾಗ ಶುಬ್ಮನ್ ಗಿಲ್ ಉತ್ತಮವಾಗಿ ರನ್‌ಗಳಿಸುತ್ತಾರೋ ಆಗ ಅವರ ರನ್ ಉತ್ತಮವಾಗಿ ಕಾಣಿಸುತ್ತಿದೆ. ಈಗ ವೃದ್ಧಿಮಾನ್ ಸಾಹಾ ಕೂಡ ಅದ್ಭುತವಾಗಿ ಆಡುತ್ತಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ಇತ್ತೀಚೆಗೆ ಕುಸಿದಂತೆ ಕಾಣಿಸುತ್ತದೆ. ಕಳೆದ ಪಂದ್ಯದಲ್ಲಿ ಅವರು ರನೌಟ್ ಆಗಿಲ್ಲದಿದ್ದರೆ ಗೆಲುವು ಸಾಧಿಸುತ್ತಿದ್ದರು. ಮಿಲ್ಲರ್ ಹಾಗೂ ತೆವಾಟಿಯಾ ಮಾತ್ರವೇ ಪ್ರತಿ ಬಾರಿಯೂ ತಂಡವನ್ನು ಗೆಲ್ಲಿಸುವುದು ಸಾಧ್ಯವಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

LSG vs GT ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದು?: ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ ತಂಡಗಳು ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿರುವ ತಂಡಗಳು ಎನಿಸಿಕೊಂಡಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸುವ ತಮಡಗಳು ಹೆಚ್ಚು ಅನುಕೂಲವನ್ನು ಹೊಂದಿರಲಿದೆ ಎಂದಿದ್ದಾರೆ ಚೋಪ್ರ, ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸುವ ತಂಡವೇ ಗೆಲ್ಲಲಿದೆ ಎಂದು ಆಕಾಶ್ ಚೋಪ್ರ ಭವಿಷ್ಯ ನುಡಿದಿದ್ದಾರೆ.

"ಐಪಿಎಲ್ 2022ರ ಅತಿ ಕೆಟ್ಟ ರೀಟೆನ್ಶನ್ ಇದು": ಮುಂಬೈ ಇಂಡಿಯನ್ಸ್ ಸೋಲಿನ ಬಳಿಕ ಅಭಿಮಾನಿಗಳ ಆಕ್ರೋಶ

Hardik Pandya ಮಗ ತೊಟ್ಟಿದ್ದು lucknow jersey | Oneindia Kannada

ಸಂಭಾವ್ಯ ಆಡುವ ಬಳಗ: ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಅವೇಶ್ ಖಾನ್, ಮೊಹ್ಸಿನ್ ಖಾನ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ

Story first published: Tuesday, May 10, 2022, 15:34 [IST]
Other articles published on May 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X