ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPLನ ಬೆಸ್ಟ್ ಬೌಲಿಂಗ್: ಕೆಕೆಆರ್ ವಿರುದ್ಧ 5 ವಿಕೆಟ್‌ ಪಡೆದ ಬುಮ್ರಾಗೆ ಎಷ್ಟನೇ ಸ್ಥಾನ? ಮೊದಲ ಸ್ಥಾನ ಯಾರಿಗೆ?

IPL 2022

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಬೌಲರ್‌ಗಳ ಪಾರುಪತ್ಯ ಎಂದಿಗೂ ಕಮ್ಮಿ ಆಗಿಲ್ಲ. ಚುಟುಕು ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ಫೇವರಿಟ್ ಆಗಿದ್ರೂ ಸಹ, ಪಂದ್ಯದ ಗತಿಯನ್ನ ಬದಲಾಯಿಸಿದ ಅದೆಷ್ಟೋ ಬೌಲರ್‌ಗಳನ್ನ ನಾವು ಕಾಣಬಹುದಾಗಿದೆ.

ಕಳೆದ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲೂ ಇಂತಹ ಒಂದು ಉದಾಹರಣೆಯನ್ನ ನಾವು ಕಾಣಬಹುದಾಗಿದೆ. ಮುಂಬೈ ಇಂಡಿಯನ್ಸ್ ಬೌಲರ್ ಜಸ್ಪ್ರೀತ್ ಬುಮ್ರಾ ಕೆಕೆಆರ್ ಬ್ಯಾಟ್ಸ್‌ಮನ್‌ಗಳನ್ನ ಬೇಟೆಯಾಡಿದ್ದನ್ನ ಮರೆಯಲು ಸಾಧ್ಯವಿಲ್ಲ. ಫಲಿತಾಂಶ ಮುಂಬೈ ಇಂಡಿಯನ್ಸ್ ಪರ ವಾಲದೇ ಇದ್ದರೂ ಸಹ, ಬುಮ್ರಾ ಐಪಿಎಲ್‌ನ ಬೆಸ್ಟ್ ಬೌಲಿಂಗ್ ಮಾತ್ರ ದಾಖಲೆಯ ಬುಕ್‌ನಲ್ಲಿ ಅಚ್ಚಳಿಯದೇ ಉಳಿಯಲಿದೆ.

4 ಓವರ್‌ಗೆ ಕೇವಲ 10 ರನ್‌ ನೀಡಿ 1 ಮೇಡನ್ ಸೇರಿದಂತೆ 5 ವಿಕೆಟ್ ಪಡೆದ ದಾಖಲೆಯನ್ನ ಬುಮ್ರಾ ಮಾಡಿದ್ದಾರೆ. ಅದ್ರಲ್ಲೂ ಕೊನೆಯ ಓವರ್‌ನಲ್ಲಿ ಕೇವಲ 1 ರನ್‌ ನೀಡಿದ ಬುಮ್ರಾ ಬಲಿಷ್ಠ ಬೌಲಿಂಗ್ ಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ 18ನೇ ಓವರ್‌ನಲ್ಲಿ ಮೇಡನ್ ಸೇರಿದಂತೆ ಮೂರು ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದು ಕೇವಲ ಐಪಿಎಲ್‌ ಅಷ್ಟೇ ಅಲ್ಲದೆ ಟಿ20 ಫಾರ್ಮೆಟ್‌ನಲ್ಲಿ ಬುಮ್ರಾ ಬೆಸ್ಟ್ ಫಿಗರ್ ಆಗಿದೆ.

ಹೀಗೆ ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಇರುವ ಬೆಸ್ಟ್ ಬೌಲಿಂಗ್ ಆದ್ರೂ ಯಾವುದು? ಯಾರ ಹೆಸರಿನಲ್ಲಿ ದಾಖಲೆ? ಬುಮ್ರಾ ಸ್ಥಾನ ಎಷ್ಟು? ಎಂಬೆಲ್ಲಾ ಪ್ರಶ್ನೆಗಳಿಗೆ ಈ ಕೆಳಗಿನ ಅಂಕಿ-ಅಂಶಗಳು ಉತ್ತರ ನೀಡಲಿವೆ

1) ಅಲ್ಜಾರಿ ಜೋಸೆಫ್ (ಮುಂಬೈ ಇಂಡಿಯನ್ಸ್‌) 2019

1) ಅಲ್ಜಾರಿ ಜೋಸೆಫ್ (ಮುಂಬೈ ಇಂಡಿಯನ್ಸ್‌) 2019

ಯಾರ ವಿರುದ್ಧ: ಸನ್‌ರೈಸರ್ಸ್ ಹೈದ್ರಾಬಾದ್
ಓವರ್ : 3.4
ಮೇಡನ್: 1
ರನ್: 12
ವಿಕೆಟ್: 6

ಅಭಿಮಾನಿಗಳ ಮನಗೆದ್ದ ಅಂಪೈರ್: ಕ್ರಿಕೆಟ್ ಲೋಕದ ಮಿಸ್ಟರ್‌ ಬೀನ್

2) ಸೊಹೈಲ್ ತನ್ವೀರ್ (ರಾಜಸ್ತಾನ್ ರಾಯಲ್ಸ್‌) 2008

2) ಸೊಹೈಲ್ ತನ್ವೀರ್ (ರಾಜಸ್ತಾನ್ ರಾಯಲ್ಸ್‌) 2008

ಯಾರ ವಿರುದ್ಧ: ಚೆನ್ನೈ ಸೂಪರ್ ಕಿಂಗ್ಸ್‌
ಓವರ್ : 4
ಮೇಡನ್: 0
ರನ್: 14
ವಿಕೆಟ್: 6

ಮುಂಬೈನಲ್ಲಿ ಟೆವೆಲ್‌ನಲ್ಲೇ 2-3 ದಿನ ಕಳೆದಿದ್ದ ಕ್ರಿಕೆಟಿರ್: ಡಿಸಿ ಬ್ಯಾಟರ್ ಪೋವೆಲ್ ಬಿಚ್ಚಿಟ್ಟ ಟವೆಲ್ ಕಥೆ!

3) ಆ್ಯಡಂ ಜಂಪಾ (ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌) 2016

3) ಆ್ಯಡಂ ಜಂಪಾ (ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌) 2016

ಯಾರ ವಿರುದ್ಧ: ಸನ್‌ರೈಸರ್ಸ್ ಹೈದ್ರಾಬಾದ್
ಓವರ್ : 4
ಮೇಡನ್: 0
ರನ್: 19
ವಿಕೆಟ್: 6

IPL ನಲ್ಲಿ ಉತ್ತಮ ಪ್ರದರ್ಶನ: ಭಾರತ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಬಲ್ಲ ಮೂವರು ದ. ಆಫ್ರಿಕಾ ಪ್ಲೇಯರ್ಸ್

4) ಅನಿಲ್ ಕುಂಬ್ಳೆ (ಆರ್‌ಸಿಬಿ) 2009

4) ಅನಿಲ್ ಕುಂಬ್ಳೆ (ಆರ್‌ಸಿಬಿ) 2009

ಯಾರ ವಿರುದ್ಧ: ರಾಜಸ್ತಾನ್ ರಾಯಲ್ಸ್‌
ಓವರ್ : 3.1
ಮೇಡನ್: 1
ರನ್: 5
ವಿಕೆಟ್: 5

KKR vs MI: ಮುಂಬೈ ವಿರುದ್ಧ ಗೆದ್ದ ಕೆಕೆಆರ್ ಪ್ಲೇ ಆಫ್ ಜೀವಂತ, ಪಾಯಿಂಟ್ಸ್ ಎಷ್ಟು?

Marcus Stoinis ಔಟ್ ಆದ ರೀತಿ ಇದು | Oneindia Kannada
5) ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್‌) 2022

5) ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್‌) 2022

ಯಾರ ವಿರುದ್ಧ: ಕೊಲ್ಕತ್ತಾ ನೈಟ್ ರೈಡರ್ಸ್‌
ಓವರ್ : 4
ಮೇಡನ್: 1
ರನ್: 10
ವಿಕೆಟ್: 5

Story first published: Tuesday, May 10, 2022, 15:34 [IST]
Other articles published on May 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X