ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭಿಮಾನಿಗಳ ಮನಗೆದ್ದ ಅಂಪೈರ್: ಕ್ರಿಕೆಟ್ ಲೋಕದ ಮಿಸ್ಟರ್‌ ಬೀನ್

Billy bowden

ಆತ ಕ್ರಿಕೆಟ್ ಲೋಕದ ಮಿಸ್ಟರ್ ಬೀನ್, ಆಟಗಾರನಲ್ಲದೇ ಇದ್ರೂ ನೆರದಿದ್ದ ಪ್ರೇಕ್ಷಕರಿಗೆ ಮನರಂಜನೆ ನೀಡುವ ಮಾಸ್ಟರ್. ಹಿಂದಿದ್ದ ಸಂಪ್ರದಾಯವನ್ನೆಲ್ಲಾ ಮುರಿದು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡ ಅಂಪೈರ್, ಆತನೇ ಬಿಲ್ಲಿ ಬೌಡನ್.

ಬಿಲ್ಲಿ ಬೌಡೆನ್‌ನಂತಹ ಜನಮೆಚ್ಚಿದ ಅಂಪೈರ್‌ ಕಂಡುಬರುವುದು ಬಹಳ ವಿರಳ. ಇತ್ತೀಚೆಗೆ ಐಪಿಎಲ್‌ 2022ರ ಸೀಸನ್‌ನಲ್ಲಿ ಅಂಪೈರ್ ತೀರ್ಪುಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಡೆಲ್ಲಿ ಕ್ಯಾಪಿಲಟ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ನಡುವೆ ನೋ ಬಾಲ್ ವಿವಾದ ಭಾರೀ ವಿವಾದವನ್ನೇ ಸೃಷ್ಟಿಸಿಬಿಟ್ಟಿದೆ. ಅಂತಿಮ ಓವರ್‌ನಲ್ಲಿ ನೋ ಬಾಲ್ ನೀಡದಿರುವ ಅಂಪೈರ್ ನಿರ್ಧಾರಕ್ಕೆ ಗಂರ ಆದ ರಿಷಭ್ ಪಂತ್ ಕೋಚ್ ಪ್ರವೀಣ್ ಆಮ್ರೆರನ್ನು ಪ್ರತಿಭಟಿಸಲು ಕಳುಹಿಸಿ ವಿವಾದಕ್ಕೆ ಗುರಿಯಾಗಿದ್ದರು.

ಪ್ರಸಕ್ತ ಐಪಿಎಲ್ ಸರಣಿಯಲ್ಲಿ ಹೀಗಾಗುತ್ತಿರುವುದು ಇದೇ ಮೊದಲಲ್ಲ. ಮುಂಬೈ - ಆರ್‌ಸಿಬಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಮೀಪಿಸುತ್ತಿದ್ದಂತೆ ಎಲ್‌ಬಿಡಬ್ಲ್ಯೂ ಮೂಲಕ ಔಟಾದರು. ಆದರೆ ಆ ಬಳಿಕ ತೋರಿಸಿರುವ ವಿಡಿಯೋದಲ್ಲಿ ಚೆಂಡು ಬ್ಯಾಟ್‌ಗೆ ಬಡಿದಿರುವುದು ಬೆಳಕಿಗೆ ಬಂದಿದೆ. ಇಂತಹ ವಿವಾದಾತ್ಮಕ ಫಲಿತಾಂಶಗಳ ನಡುವೆ ತುಂಬಾ ಅಕ್ಯುರೇಟ್ ಆಗಿ ತೀರ್ಪನ್ನ ನೀಡುತ್ತಿದ್ದ, ವಿಭಿನ್ನ ಶೈಲಿಯಲ್ಲಿ ಅಂಪೈರಿಂಗ್ ಮಾಡಿದ ಬಿಲ್ಲಿ ಬೌಡೆನ್ ನೆನಪಾಗುವುದು.

ಅಂಪೈರ್‌ ವೃತ್ತಿಗೂ ಮೊದಲು ಕ್ರಿಕೆಟರ್ ಆಗಿದ್ದ ಬೌಡೆನ್

ಅಂಪೈರ್‌ ವೃತ್ತಿಗೂ ಮೊದಲು ಕ್ರಿಕೆಟರ್ ಆಗಿದ್ದ ಬೌಡೆನ್

ಬ್ರೆಂಟ್ ಫ್ರೇಸರ್ ಬೌಡನ್, ಅಲಿಯಾಸ್ ಬಿಲ್ಲಿ ಬೌಡನ್. ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಅಂಪೈರಿಂಗ್ ಮಾಡುವ ಮೂಲಕ ಗುರುತಿಸಿಕೊಂಡ ಏಕೈಕ ಅಂಪೈರ್. 59 ವರ್ಷದ ಬಿಲ್ಲಿ ಬೌಡನ್ ಅಂಪೈರ್ ವೃತ್ತಿಗೂ ಮೊದಲು ಕ್ರಿಕೆಟ್ ಆಟಗಾರನಾಗಿದ್ರು. ಆದ್ರೆ ಆರೋಗ್ಯದ ಸಮಸ್ಯೆಯಿಂದ ಅಂಪೈರಿಂಗ್ ವೃತ್ತಿ ಆರಂಭಿಸಿದ್ರು. 1995ರಲ್ಲಿ ಮೊಟ್ಟ ಮೊದಲ ಬಾರಿಗೆ ಅಂತರಾಷ್ಟ್ರೀಯ ಪಂದ್ಯವೊಂದರ ಅಂಪೈರ್ ಆದ ಬಿಲ್ಲಿ ಬೌಡನ್ ನ್ಯೂಜಿಲೆಂಡ್ -ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಕ್ಕೆ ಆನ್‌ಫೀಲ್ಡ್‌ ಅಂಪೈರ್ ಆಗಿ ಕಣಕ್ಕಿಳಿದ್ರು. ನಂತರ 2000ನೇ ಇಸವಿಯಲ್ಲಿ ಟೆಸ್ಟ್ ಪಂದ್ಯಗಳಿಗೆ ಅಂಪೈರ್ ಆಗಿ ನೇಮಕಗೊಂಡ್ರು. ಅದೇ ರೀತಿ 2005ರಿಂದ ಟಿ20 ಅಂಪೈರ್ ಆಗಿ ಕೂಡ ಆಯ್ಕೆಯಾದ್ರು.

IPL ನಲ್ಲಿ ಉತ್ತಮ ಪ್ರದರ್ಶನ: ಭಾರತ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಬಲ್ಲ ಮೂವರು ದ. ಆಫ್ರಿಕಾ ಪ್ಲೇಯರ್ಸ್

ವಿಭಿನ್ನ ತೀರ್ಪಿನ ಭಂಗಿ

ವಿಭಿನ್ನ ತೀರ್ಪಿನ ಭಂಗಿ

ಬಿಲ್ಲಿ ಬೌಡೆನ್ ತನ್ನ ಖಡಕ್ ತೀರ್ಪುಗಳಿಂದ ಕ್ರಿಕೆಟ್ ಫೀಲ್ಡ್‌ನಲ್ಲಿ ಎಷ್ಟು ಫೇಮಸ್ ಆದ್ರೋ, ಅದಕ್ಕಿಂತ ಹೆಚ್ಚಾಗಿ ಇವರು ಆನ್‌ಫೀಲ್ಡ್‌ನಲ್ಲಿ ನೀಡ್ತಿದ್ದ ತೀರ್ಪಿನ ಭಂಗಿ ಪ್ರೇಕ್ಷಕರನ್ನ ಬಹುಬೇಗ ಸೆಳೆಯಿತು. ಅಲ್ಲಿಯವರೆಗೂ ಅಂಪೈರ್ ಅಂದ್ರೆ ಹೀಗೆ ಇರಬೇಕು ಚೌಕಟ್ಟನ್ನ ದಾಟಿದ ಬಿಲ್ಲಿ, ಕ್ರಿಕೆಟ್ ಅಭಿಮಾನಿಗಳ ಫೇವರಿಟ್ ಅಂಪೈರ್ ಆಗಿಹೋದರು. ಅದ್ರಲ್ಲೂ ಆಟಗಾರ ಔಟ್ ಎಂದು ನೀಡೋ ತೀರ್ಪನ್ನ ಕೊಕ್ಕೆ ರೀತಿಯಲ್ಲಿ ತೋರಿಸುವ ಮೂಲಕ ಸಖತ್ ಫೇಮಸ್ ಆದರು.

ಬೌಂಡರಿ, ಸಿಕ್ಸರ್‌ಗೂ ಬಿಲ್ಲಿ ಶೈಲಿ ಫೇಮಸ್

ಬೌಂಡರಿ, ಸಿಕ್ಸರ್‌ಗೂ ಬಿಲ್ಲಿ ಶೈಲಿ ಫೇಮಸ್

ಇಷ್ಟಲ್ಲದೆ ಬೌಂಡರಿ, ಹಾಗೂ ಸಿಕ್ಸರ್‍ಗಳನ್ನ ಬಿಲ್ಲಿ ತನ್ನದೇ ಆದ ಸ್ಟೈಲ್ ತೋರಿಸಿ ಅಭಿಮಾನಿಗಳನ್ನ ನಗೆಗಡಲಲ್ಲಿ ತೇಲಿಸಿದ್ರು. ಪೊರಕೆ ತಗೊಂಡು ಕಸ ಹೊಡೆಯೋ ರೀತಿಯಲ್ಲಿ ಬಿಲ್ಲಿ ಬೌಡೆನ್ ಬೌಂಡರಿ ಸಿಂಬಲ್ ಮಾಡ್ತಿದ್ರು. ಇಷ್ಟಲ್ಲದೆ ಮೊಟ್ಟ ಮೊದಲ ಟಿ20 ಪಂದ್ಯದಲ್ಲಿ ಆಸೀಸ್‍ನ ಎವರ್‍ಗ್ರೀನ್ ಬೌಲರ್ ಗ್ಲೆನ್ ಮೆಗ್ರಾಥ್ ಅಂಡರ್ ಆರ್ಮ್ ಬೌಲ್ ಮಾಡಲು ಹೋದಾಗ ಫುಟ್ಬಾಲ್ ಪಂದ್ಯದಂತೆ ರೆಡ್‌ಕಾರ್ಡ್‌ ತೋರಿಸಿದ್ದನ್ನ ಯಾರು ಮರೆಯಲು ಸಾಧ್ಯವಿಲ್ಲ.

ಹೀಗೆ 200 ಏಕದಿನ ಪಂದ್ಯ 84 ಟೆಸ್ಟ್ ಪಂದ್ಯ ಹಾಗೂ 24 ಟಿ 20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿರುವ ಬಿಲ್ಲಿಗೆ ತನ್ನ ವಿಭಿನ್ನ ಶೈಲಿಯೇ ಮುಳುವಾಗಿಬಿಟ್ಟಿತು. ತನ್ನ ಡಿಫರೆಂಟ್ ಆಕ್ಷನ್ ಮೂಲಕ ಅಭಿಮಾನಿಗಳ ಮನದಲ್ಲಿ ಸ್ಥಾನಪಡೆದಿದ್ದ ಅಂಪೈರ್ ಅದೇ ಕಾರಣಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದಲೂ ನಿಷೇಧಕ್ಕೊಳಪಟ್ಟಿದ್ದರು. 2009ರಲ್ಲೇ ಬಿಲ್ಲಿ ಬೌಡೆನ್‍ಗೆ ತನ್ನ ವಿಭಿನ್ನ ರೀತಿಯ ಅಂಪೈರಿಂಗ್‍ನ್ನು ಬದಲಾಯಿಸಿಕೊಳ್ಳಲು ಸೂಚಿಸಲಾಗಿತ್ತು. ಆದ್ರೆ ಬಿಲ್ಲಿ ಬೌಡೆನ್ ನಾನು ಏನು ಅತ್ಯುತ್ತಮವಾಗಿ ಮಾಡಲು ಸಾಧ್ಯವೇ ಅದನ್ನೇ ಮಾಡುತ್ತಿರುವೆ ಎಂದು ಉತ್ತರ ನೀಡಿದ್ರು. ಅಲ್ಲದೆ ತನ್ನ ಕ್ರಮವನ್ನ ಬಿಲ್ಲಿ ಬೌಡೆನ್ ಸಮರ್ಥಿಸಿಕೊಂಡಿದ್ರು.

ತೋರುಬೆರಳನ್ನು ಕೊಕ್ಕೆ ರೀತಿಯಲ್ಲಿ ಮಾಡಿ ಔಟ್ ಎಂದು ತೋರಿಸಿದ್ರೆ, ಆಟಗಾರರುಅರ್ಧ ಔಟ್ ಎಂದು ತಿಳಿದುಕೊಳ್ಳುವುದಿಲ್ಲ. ಔಟ್ ಎಂದು ತೋರಿದೊಡನೆ ಪೆವಿಲಿಯನ್‍ಗೆ ಹೋಗುತ್ತಾರೆ. ಆದ್ರೆ ನಿಯಮದ ವಿಚಾರಕ್ಕೆ ಬಂದ್ರೆ ಔಟ್ ಎಂದು ತೋರಿಸಬೇಕಾದ್ರೆ ತೋರು ಬೆರಳನ್ನು ತಲೆಯಿಂದ ಮೇಲಕ್ಕೆತ್ತಬೇಕಾಗುತ್ತೆ. ಆದ್ರೆ ನಿಯಮದಲ್ಲಿ ಎಲ್ಲೂ ಮಡಚಬಾರದು ನೇರವಾಗಿಯೇ ಇಟ್ಟುಕೊಳ್ಳಬೇಕು ಎಂದು ಹೇಳಿಲ್ಲ. ಅಂಪೈರ್ ಅಂದ್ರೆ ಅವರಿಗೆ ಅವರದೇ ಆದ ವ್ಯಕ್ತಿತ್ವಗಳಿರುತ್ತವೇ. ನಾವೇನು ಪೇಪರ್ ಕಟೌಟ್‍ಗಳಲ್ಲ, ಎಲ್ಲ ಅಂಪೈರ್‍ಗಳು ಒಂದೇ ರೀತಿಯಲ್ಲಿ ಗುರುತಿಸಿಕೊಂಡ್ರೆ ಅದು ಪ್ರೇಕ್ಷಕರಿಗೆ ಬೇಸರವಾಗುತ್ತೆ ಎಂದಿದ್ದರು.

KKR vs MI: ಮುಂಬೈ ವಿರುದ್ಧ ಗೆದ್ದ ಕೆಕೆಆರ್ ಪ್ಲೇ ಆಫ್ ಜೀವಂತ, ಪಾಯಿಂಟ್ಸ್ ಎಷ್ಟು?

Rohit Sharma ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
ಐಸಿಸಿ ಅಂಪೈರ್ಸ್ ಪ್ಯಾನೆಲ್‌ನಲ್ಲಿದ್ದ ಬಿಲ್ಲಿ ಬೌಡೆನ್

ಐಸಿಸಿ ಅಂಪೈರ್ಸ್ ಪ್ಯಾನೆಲ್‌ನಲ್ಲಿದ್ದ ಬಿಲ್ಲಿ ಬೌಡೆನ್

2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ಯಾನೆಲ್‌ನಿಂದ ಹೊರಬಿದ್ದಿದ್ದ ಬಿಲ್ಲಿ ಬೌಡೆನ್ ಮತ್ತೆ 2014ರಲ್ಲಿ ಕ್ರಿಕೆಟ್‌ಗೆ ಮರಳಿದ್ರು. ಆದ್ರೆ ನಂತರದಲ್ಲಿ ನ್ಯೂಜಿಲೆಂಡ್ ಅಂತರಾಷ್ಟ್ರೀಯ ಕ್ರಿಕೆಟ್ ಪ್ಯಾನೆಲ್‌ನಿಂದ ಅವರನ್ನು ಕೈ ಬಿಡಲಾಯಿತು. ಇದ್ರಿಂದಾಗಿ ಬಿಲ್ಲಿ ಬೌಡೆನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಅದೇ ವರ್ಷ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯವೇ ಬೌಡೆನ್‍ರ 200ನೇ ಏಕದಿನ ಪಂದ್ಯದ ಅಂಪೈರಿಂಗ್ ಆಗಿತ್ತು.

ನ್ಯೂಜಿಲೆಂಡ್ ಕ್ರಿಕೆಟ್ ಕಮಿಟಿಯ ರಾಜಕೀಯವೋ ಅಥವಾ ಬಿಲ್ಲಿ ಬೌಡೆನ್‍ರ ಬಿಟ್ಟು ಕೊಡದ ಹಠದಿಂದಾಗಿಯೋ ಈ ಕ್ರಿಕೆಟ್‌ನ ಮಿಸ್ಟರ್ ಬೀನ್ ತಮ್ಮ ಅಂಪೈರಿಂಗ್ ಕರಿಯರ್ ಬೇಗನೆ ಅಂತ್ಯಗೊಂಡಿತು. ತಮ್ಮ 21 ವರ್ಷಗಳ ಸುದೀರ್ಘ ಪಯಣದಲ್ಲಿ ಉತ್ತಮವಾದ ನಿರ್ಣಯಗಳಿಂದ ಹೆಸರು ಪಡೆದಿದ್ದ ಈತ , ಅಂಪೈರ್ ಆಗಿದ್ದುಕೊಂಡೆ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದಂತು ನಿಜ.

Story first published: Tuesday, May 10, 2022, 15:36 [IST]
Other articles published on May 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X