ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ರವೀಂದ್ರ ಜಡೇಜಾ CSK ತಂಡವನ್ನ ತೊರೆದ್ರೆ, ಈ ಇಬ್ಬರು ಆಟಗಾರರ ಮೇಲಿದೆ ಫ್ರಾಂಚೈಸಿ ಕಣ್ಣು

Ravindra jadeja

ಐಪಿಎಲ್ 2022ರ ಸೀಸನ್‌ ಬಳಿಕ ಭಾರತೀಯ ಕ್ರಿಕೆಟ್‌ನಲ್ಲಿ ಪ್ರಮುಖ ಚರ್ಚೆ ನಡೆಯುತ್ತಿರುವುದು ರವೀಂದ್ರ ಜಡೇಜಾ ಮತ್ತು ಸಿಎಸ್‌ಕೆ ನಡುವೆ ಮುಸುಕಿನ ಗುದ್ದಾಟ. ಸಿಎಸ್‌ಕೆ 2022ರ ಸೀಸನ್‌ನಲ್ಲಿ ರವೀಂದ್ರ ಜಡೇಜಾಗೆ ನಾಯಕತ್ವ ಪಟ್ಟ ಕಟ್ಟಿ ಸಿಎಸ್‌ಕೆ ಕೈ ಸುಟ್ಟುಕೊಂಡಿದೆ.

ಟೀಂ ಇಂಡಿಯಾ ನಾಯಕರಾಗಿ ರವೀಂದ್ರ ಜಡೇಜಾ ಭಾರೀ ನಿರಾಸೆ ಮೂಡಿಸಿದರು. ಇದರೊಂದಿಗೆ ಅವರೇ ಸ್ವತಃ ನಾಯಕತ್ವ ಸ್ಥಾನದಿಂದ ಕೆಳಗಿಳಿದರು. ಪರಿಣಾಮ ಸೀಸನ್‌ಗೂ ಮುನ್ನವೇ ನಾಯಕತ್ವ ಬಿಟ್ಟುಕೊಟ್ಟಿದ್ದ ಧೋನಿ ಉಳಿದ ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನ ಮುನ್ನಡೆಸಿದರು.

ಜಡ್ಡು ಮತ್ತು ಸಿಎಸ್‌ಕೆ ಸಂಬಂಧದಲ್ಲಿ ಬಿರುಕು?

ಜಡ್ಡು ಮತ್ತು ಸಿಎಸ್‌ಕೆ ಸಂಬಂಧದಲ್ಲಿ ಬಿರುಕು?

ನಾಯಕತ್ವದಿಂದ ಕೆಳಗಿಳಿದ ರವೀಂದ್ರ ಜಡೇಜಾ ಕೆಲ ಪಂದ್ಯಗಳಲ್ಲೇ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರು. ಇದಾದ ನಂತರ ಜಡೇಜಾ ಮತ್ತು ಸಿಎಸ್‌ಕೆ ನಡುವೆ ಬಿರುಕು ಮೂಡಿದೆ ಎಂಬ ವರದಿಗಳು ಬಂದಿದ್ದವು. ಆದರೆ ಅದು ಸ್ಪಷ್ಟವಾಗಿಲ್ಲದಿದ್ದರೂ, ಜಡೇಜಾ ಸಿಎಸ್‌ಕೆಯನ್ನು ಅನ್‌ಫಾಲೋ ಮಾಡಿದಾಗ, ಸಮಸ್ಯೆ ಇರುವುದು ಹೆಚ್ಚು ಸ್ಪಷ್ಟವಾಯಿತು.

ಈಗ ಜಡೇಜಾ ಅವರನ್ನು ಮುಂದಿನ ಋತುವಿನ ಮೊದಲು ಸಿಎಸ್‌ಕೆ ಕೈಬಿಡುವ ಖಚಿತ ಸೂಚನೆಗಳಿವೆ. ಕಳೆದ ಋತುವಿನಲ್ಲಿ ಅತ್ಯಧಿಕ ಸಂಭಾವನೆ ನೀಡಿ ಸಿಎಸ್‌ಕೆ ತಂಡವನ್ನು ಉಳಿಸಿಕೊಂಡಿದ್ದ ಜಡೇಜಾ ಅವರನ್ನು ಹೊಸ ಸೀಸನ್‌ಗೂ ಮುನ್ನ ತಂಡದಿಂದ ಕೈ ಬಿಡುವುದು ಬಹುತೇಕ ಖಚಿತವಾಗಿದೆ. ಜಡೇಜಾ ತಂಡವನ್ನು ತೊರೆದರೆ, ಸಿಎಸ್‌ಕೆ ಬದಲಿಯಾಗಿ ಯಾರನ್ನು ಪರಿಗಣಿಸುತ್ತದೆ?. ಇಬ್ಬರು ಸಂಭಾವ್ಯ ಸ್ಟಾರ್ ಆಟಗಾರರು ಯಾರು ಎಂದು ಈ ಕೆಳಗೆ ಕಾಣಬಹುದು.

Ind vs Zim 1st ODI: 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, ಟ್ವಿಟ್ಟರ್ ಪ್ರತಿಕ್ರಿಯೆ

ಬೆನ್ ಸ್ಟೋಕ್ಸ್‌

ಬೆನ್ ಸ್ಟೋಕ್ಸ್‌

ಇಂಗ್ಲೆಂಡ್ ವೇಗಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸಿಎಸ್‌ಕೆ ಕಣ್ಣಿಟ್ಟಿರುವ ಪ್ರಮುಖ ಆಟಗಾರರಲ್ಲಿ ಒಬ್ಬರು. ರಾಜಸ್ಥಾನ ರಾಯಲ್ಸ್‌ನಿಂದ ಕೈಬಿಟ್ಟಿರುವ ಬೆನ್ ಸ್ಟೋಕ್ಸ್ ಪ್ರಸ್ತುತ ಯಾವುದೇ ತಂಡದ ಭಾಗವಾಗಿಲ್ಲ. ಹೀಗಾಗಿ ಸ್ಟೋಕ್ಸ್‌ರನ್ನು ತಂಡಕ್ಕೆ ಕರೆತರಲು ಸಿಎಸ್‌ಕೆ ಕಸರತ್ತು ಆರಂಭಿಸಿದೆ. ಜಡೇಜಾಗಿಂತ ಸ್ಟೋಕ್ಸ್ ಉತ್ತಮ ಟಿ20 ದಾಖಲೆ ಹೊಂದಿದ್ದಾರೆ.

ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚಬಲ್ಲ ಆಟಗಾರನನ್ನು ಅಗ್ರ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದಲ್ಲಿ ಪರಿಗಣಿಸಬಹುದು. ಜೊತೆಗೆ ಬೆನ್ ಸ್ಟೋಕ್ಸ್‌ ಅನ್ನು ವೇಗಿ ಎಂದು ಪರಿಗಣಿಸಬಹುದು. ನಾಯಕತ್ವದ ಅಗತ್ಯವಿರುವ ಸಿಎಸ್‌ಕೆ ಕೂಡ ಸ್ಟೋಕ್ಸ್‌ರನ್ನು ನಾಯಕನನ್ನಾಗಿ ಮಾಡಬಹುದು. ಸ್ಟೋಕ್ಸ್ ಪ್ರಸ್ತುತ ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕರಾಗಿದ್ದಾರೆ.

ಈ ಹಿಂದೆ ಬೆನ್‌ ಸ್ಟೋಕ್ಸ್‌ ಧೋನಿ ನೇತೃತ್ವದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ನ ಭಾಗವಾಗಿದ್ದಾರೆ. ಸ್ಟೋಕ್ಸ್ 43 ಐಪಿಎಲ್‌ಗಳಲ್ಲಿ 2 ಶತಕ ಮತ್ತು 2 ಅರ್ಧಶತಕ ಸೇರಿದಂತೆ 920 ರನ್ ಮತ್ತು 28 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಪರ 34 ಟಿ20 ಪಂದ್ಯಗಳಲ್ಲಿ 442 ರನ್ ಹಾಗೂ 19 ವಿಕೆಟ್ ಪಡೆದಿದ್ದಾರೆ.

IND vs PAK: ಟಿ20 ವಿಶ್ವಕಪ್‌ಗೆ ಮುನ್ನ ಪಾಕಿಸ್ತಾನ ತಂಡದಿಂದ ಪ್ರಮಾದ; ಪಾಕ್ ಮಾಜಿ ಕ್ರಿಕೆಟಿಗ

ಶಕೀಬ್ ಅಲ್ ಹಸನ್

ಶಕೀಬ್ ಅಲ್ ಹಸನ್

ಜಡೇಜಾ ಅವರಂತಹ ಎಡಗೈ ಸ್ಪಿನ್ ಆಲ್ ರೌಂಡರ್ ಅನ್ನು ಸಿಎಸ್ ಕೆ ಗುರಿಯಾಗಿಸಿಕೊಂಡಿದ್ದರೆ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ. ಶಾಕಿಬ್ ಕೆಟ್ಟ ನಡವಳಿಕೆಯಿಂದ ವಿವಾದಗಳನ್ನು ಸೃಷ್ಟಿಸಿದ ಸ್ಟಾರ್ ಆಟಗಾರ. ಆದ್ರೆ ಪ್ರದರ್ಶನವನ್ನು ಪರಿಗಣಿಸಿದರೆ, ಅವರು ತಂಡಕ್ಕೆ ಉತ್ತಮ ಆಸ್ತಿಯಾಗುತ್ತಾರೆ. ಅನುಭವಿ ಶಕೀಬ್ ಮಧ್ಯಮ ಕ್ರಮಾಂಕದಲ್ಲಿ ಜಡೇಜಾ ಅವರ ಬ್ಯಾಟಿಂಗ್ ಸ್ಥಾನದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ.

ಇನ್ನು ಶಕೀಬ್ ಪವರ್‌ಪ್ಲೇ ಸೇರಿದಂತೆ ಉಳಿದ ಓವರ್‌ಗಳಲ್ಲೂ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಸಿಎಸ್‌ಕೆ ಇತಿಹಾಸವನ್ನು ಅವಲೋಕಿಸಿದರೆ ತಂಡವು ಹೆಚ್ಚು ಸ್ಪಿನ್ನರ್ ಆಧಾರಿತ ತಂಡ ಎಂಬುದು ಸ್ಪಷ್ಟವಾಗುತ್ತದೆ. ಶಕೀಬ್ ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್‌ನ ಭಾಗವಾಗಿದ್ದಾರೆ.

ಶಕೀಬ್ 71 ಐಪಿಎಲ್‌ಗಳಲ್ಲಿ 793 ರನ್ ಮತ್ತು 63 ವಿಕೆಟ್ ಪಡೆದಿದ್ದಾರೆ. ಬಾಂಗ್ಲಾದೇಶ ಪರ 99 ಟಿ20 ಪಂದ್ಯಗಳಲ್ಲಿ 2010 ರನ್ ಮತ್ತು 121 ವಿಕೆಟ್ ಪಡೆದಿದ್ದಾರೆ. ನಾಯಕತ್ವಕ್ಕೆ ಪರಿಗಣಿಸುವ ಸಾಧ್ಯತೆ ಇಲ್ಲದಿದ್ದರೂ, ಸಿಎಸ್‌ಕೆ ಶಕೀಬ್ ಅವರನ್ನು ತಂಡಕ್ಕೆ ಕರೆತರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Story first published: Thursday, August 18, 2022, 22:12 [IST]
Other articles published on Aug 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X