ಐಪಿಎಲ್ ಮಿನಿ ಹರಾಜಿನ ದಿನಾಂಕ ಬದಲಿಸಿ ಎಂದು ಪಟ್ಟು ಹಿಡಿದ ಫ್ರಾಂಚೈಸಿಗಳು: ವರದಿ

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಸೀಸನ್‌ನ ಆಟಗಾರರ ಮಿನಿ ಹರಾಜಿಗೆ ವೇದಿಕೆ ಸಜ್ಜುಗೊಂಡಿದ್ದು, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಈಗಾಗಲೇ ಆಟಗಾರರ ರೀಟೈನ್ ಹಾಗೂ ರಿಲೀಸ್ ಪ್ರಕ್ರಿಯೆ ಮುಗಿದಿದ್ದು, 10 ಫ್ರಾಂಚೈಸಿಗಳು ಆಟಗಾರರ ಹರಾಜಿನ ಮೇಲೆ ಕಣ್ಣಿಟ್ಟಿವೆ.

ಆದ್ರೆ ಕೆಲವು ಫ್ರಾಂಚೈಸಿಗಳು ಐಪಿಎಲ್ ಆಟಗಾರರ ಹರಾಜು ದಿನಾಂಕವನ್ನು ಮುಂದೂಡುವಂತೆ ಪಟ್ಟು ಹಿಡಿದಿವೆ ಎಂದು ವರದಿಯಾಗಿದೆ. ಡಿಸೆಂಬರ್ 23ರಂದು ನಿಗದಿಯಾಗಿರುವ ಆಟಗಾರರ ಹರಾಜು ಪ್ರಕ್ರಿಯೆ ದಿನಾಂಕದ ವೇಳೆಯಲ್ಲಿ ಬಹುತೇಕ ವಿದೇಶಿ ಸಹಾಯಕ ಸಿಬ್ಬಂದಿ ಸದಸ್ಯರುಗಳು, ಫ್ರಾಂಚೈಸಿಗಳಿಗೆ ಲಭ್ಯವಿರುವುದಿಲ್ಲ. ಕಾರಣ ಡಿ.25ರಂದು ವಿಶ್ವದಾದ್ಯಂತ ಕ್ರಿಸ್‌ಮಸ್ ಸಂಭ್ರಮವಿರುವ ಕಾರಣ ವಿದೇಶಿ ಮೂಲದ ಸಹಾಯ ಸಿಬ್ಬಂದಿ ಹರಾಜು ಪ್ರಕ್ರಿಯೆಗೆ ಬರುವುದಿಲ್ಲ ಎಂಬುದು ಫ್ರಾಂಚೈಸಿಗಳಿಗೆ ಮನದಟ್ಟಾಗಿದೆ.

ದಿನಾಂಕವನ್ನು ಮರು ಪರಿಶೀಲಿಸಲು ಫ್ರಾಂಚೈಸಿಗಳು ಒತ್ತಾಯ

ದಿನಾಂಕವನ್ನು ಮರು ಪರಿಶೀಲಿಸಲು ಫ್ರಾಂಚೈಸಿಗಳು ಒತ್ತಾಯ

ಬಿಸಿಸಿಐ ಈಗಾಗಲೇ ಗೊತ್ತು ಪಡಿಸಿರುವಂತೆ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ವೇದಿಕೆ ಸಿದ್ಧಗೊಂಡಿದೆ. ಆದ್ರೆ ಇದೀಗ ಕೆಲವು ಫ್ರಾಂಚೈಸಿಗಳು ದಿನಾಂಕವನ್ನ ಮರಪರಿಶೀಲನೆಗೆ ಒಳಪಡಿಸಲು ಒತ್ತಾಯಿಸಿವೆ. ಫ್ರಾಂಚೈಸಿಗಳ ಬಹುತೇಕ ವಿದೇಶಿ ಸಹಾಯಕ ಸಿಬ್ಬಂದಿಗಳು ಕ್ರಿಸ್‌ಮಸ್‌ ಹಿನ್ನಲೆಯಲ್ಲಿ ಬ್ಯುಸಿ ಇರುವುದರಿಂದ ಹರಾಜು ಪ್ರಕ್ರಿಯೆಗೆ ಭಾಗವಹಿಸಲು ಹಿಂದೇಟು ಹಾಕಲಿದ್ದಾರೆ. ಹೀಗಾಗಿ ಈಗಾಗಲೇ ನಿಗದಿಪಡಿಸಿರುವ ದಿನಾಂಕವನ್ನು ಮರುಪರಿಶೀಲಿಸಿ ಎಂದು ಫ್ರಾಂಚೈಸಿಗಳು ಕೇಳಿಕೊಂಡಿವೆ.

ಆದ್ರೆ ಐಪಿಎಲ್ ಹರಾಜು ಪ್ರಕ್ರಿಯೆ ಕುರಿತಾಗಿ ಬಿಸಿಸಿಐ ಅಧಿಕೃತವಾಗಿ ಪ್ರಕಟಣೆಯನ್ನ ಹೊರಡಿಸಿಲ್ಲ. ಅಲ್ಲದೆ ಬಿಸಿಸಿಐ ದಿನಾಂಕವನ್ನ ಬದಲಿಸಲು ಒಪ್ಪಿಕೊಳ್ಳುವುದೇ ಎಂಬುದು ಸಹ ತಿಳಿದುಬಂದಿಲ್ಲ.

ಐಪಿಎಲ್‌ನಲ್ಲಿ ಆಡಲು ಆಸೆ ವ್ಯಕ್ತಪಡಿಸಿದ ವಿದೇಶಿ ಆಟಗಾರರು

ಐಪಿಎಲ್‌ನಲ್ಲಿ ಆಡಲು ಆಸೆ ವ್ಯಕ್ತಪಡಿಸಿದ ವಿದೇಶಿ ಆಟಗಾರರು

ಐಪಿಎಲ್ 2023ರ ಸೀಸನ್‌ನಲ್ಲಿ ಆಡಲು ಈಗಾಗಲೇ ಹಲವು ವಿದೇಶಿ ಆಟಗಾರರು ರೆಡಿಯಾಗಿದ್ದಾರೆ. ಸ್ವತಃ ಅವರೇ ಹೇಳಿರುವಂತೆ ಐಪಿಎಲ್‌ನಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಇಂಗ್ಲೆಂಡ್‌ನ ಸ್ಯಾಮ್ ಕರನ್, ಅಲೆಕ್ಸ್ ಹೇಲ್ಸ್, ಬೆನ್‌ ಸ್ಟೋಕ್ಸ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಐಪಿಎಲ್‌ನಲ್ಲಿ ಭಾಗಿಯಾಗಲು ಎದುರು ನೋಡುತ್ತಿರುವ ದೊಡ್ಡ ಹೆಸರುಗಳಾಗಿವೆ.

ಕಳೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಕೂಡ ಐಪಿಎಲ್‌ ಹರಾಜಿಗೆ ತಮ್ಮ ಹೆಸರು ನೋಂದಾಯಿಸಿದ್ದಾರೆ.

ಕೇಂದ್ರ ಒಪ್ಪಂದದಿಂದ ಸ್ಟಾರ್ ಬ್ಯಾಟರ್‌ನನ್ನು ಕೈಬಿಟ್ಟ ನ್ಯೂಜಿಲೆಂಡ್; ಐಪಿಎಲ್ ಆಡುವ ಸಾಧ್ಯತೆ!

163 ಆಟಗಾರರನ್ನ ರೀಟೈನ್ ಮಾಡಿಕೊಂಡಿರುವ ಫ್ರಾಂಚೈಸಿಗಳು

163 ಆಟಗಾರರನ್ನ ರೀಟೈನ್ ಮಾಡಿಕೊಂಡಿರುವ ಫ್ರಾಂಚೈಸಿಗಳು

10 ಫ್ರಾಂಚೈಸಿಗಳು ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ನವೆಂಬರ್‌ 15ರಂದು 163 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, 85 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿವೆ. ಮಿನಿ ಹರಾಜು ಪ್ರಕ್ರಿಯೆಯಿಂದಾಗಿ ವಿದೇಶಿ ಆಟಗಾರರಿಗೆ ಹೆಚ್ಚು ನೆರವಾಗಲಿದೆ. ಆಟಗಾರರ ಹರಾಜಿನಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಪ್ರತಿ ಫ್ರಾಂಚೈಸಿಗೆ ಹೆಚ್ಚುವರಿ 5 ಕೋಟಿ ರೂಪಾಯಿ ಪರ್ಸ್‌ ಮೌಲ್ಯವನ್ನು ನೀಡಲಾಗಿದ್ದು, ಆಟಗಾರರ ಮೇಲಿನ ಹರಾಜು ಪ್ರಕ್ರಿಯೆಗೆ ಮತ್ತಷ್ಟು ಹುರುಪು ನೀಡಿದೆ.

IPL 2023:ಈ ಎಡಗೈ ವೇಗಿಗಳಿಗೆ ಮಿನಿ ಹರಾಜಿನಲ್ಲಿ ಖುಲಾಯಿಸುತ್ತಾ ಅದೃಷ್ಟ ?

ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎನ್ನಲಾಗಿರುವ ಐಪಿಎಲ್ ಹರಾಜು

ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎನ್ನಲಾಗಿರುವ ಐಪಿಎಲ್ ಹರಾಜು

ಐಪಿಎಲ್ 2022ರ ಮೆಗಾ ಹರಾಜು ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ನಡೆಯಿತು. ಇದೇ ವರ್ಷದಲ್ಲಿ ಎರಡು ಹೊಸ ತಂಡಗಳನ್ನು ಟೂರ್ನಮೆಂಟ್‌ಗೆ ಸೇರಿಸಲಾಯಿತು. ಆದ್ರೀಗ ಮುಂದಿನ ಸೀಸನ್‌ನ ಹರಾಜು ಪ್ರಕ್ರಿಯೆಯು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಿಗದಿಪಡಿಸಲಾಗಿದ್ದು, ಕೇವಲ ಒಂದು ದಿನವಷ್ಟೇ ನಡೆಯಲಿದೆ.

ಕಳೆದ ಎರಡು ಸೀಸನ್‌ಗಳಲ್ಲಿ ತವರಿನಲ್ಲಿ ಪಂದ್ಯವನ್ನ ವೀಕ್ಷಿಸಲು ಸಾಧ್ಯವಾಗದ ಅಭಿಮಾನಿಗಳಿಗೆ ಈ ಬಾರಿ ತಮ್ಮ ನೆಚ್ಚಿನ ಆಟಗಾರರನ್ನ ಮತ್ತು ತಂಡವನ್ನ ಬೆಂಬಲಿಸಲು ಅವಕಾಶ ಒದಗಿ ಬಂದಿದೆ. ಹೋಮ್ ಮತ್ತು ಅವೇ ಎರಡೂ ಕಡೆಯಲ್ಲಿ ಪಂದ್ಯಗಳು ನಡೆಯಲಿದ್ದು, ಈ ಹಿಂದೆ ಐಪಿಎಲ್ ಸೀಸನ್‌ ನಡೆದ ರೀತಿಯಲ್ಲಿಯೇ ಪಂದ್ಯಗಳಿಗೆ ವಿವಿಧ ಕ್ರಿಕೆಟ್ ಮೈದಾನಗಳು ಆತಿಥ್ಯ ವಹಿಸಲಿವೆ.

For Quick Alerts
ALLOW NOTIFICATIONS
For Daily Alerts
Story first published: Wednesday, November 23, 2022, 14:09 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X