ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023:ಈ ಎಡಗೈ ವೇಗಿಗಳಿಗೆ ಮಿನಿ ಹರಾಜಿನಲ್ಲಿ ಖುಲಾಯಿಸುತ್ತಾ ಅದೃಷ್ಟ ?

These Three Left Hand Pacers Can Get Huge Demand In IPL Mini Auction 2023

ಐಪಿಎಲ್ ಆರಂಭಕ್ಕೆ ಇನ್ನು ಒಂದು ತಿಂಗಳಷ್ಟೇ ಸಮಯವಿದೆ. ಎಲ್ಲಾ ತಂಡಗಳು ಈಗಾಗಲೇ ಕೆಲವು ಆಟಗಾರರನ್ನು ಬಿಡುಗಡೆ ಮಾಡಿವೆ. ಬದಲಿಯಾಗಿ ಬೇರೆ ಆಟಗಾರರನ್ನು ಖರೀದಿಸಲು ಯೋಜನೆ ರೂಪಿಸುತ್ತಿವೆ.

ಈ ಬಾರಿಯ ಐಪಿಎಲ್ ಮಿನಿ ಹರಾಜು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಹಲವು ತಂಡಗಳು ಮಹತ್ವದ ಬದಲಾವಣೆಗೆ ನಿರ್ಧರಿಸಿದ್ದು, ಪ್ರಮುಖ ಆಟಗಾರರನ್ನುತಂಡಕ್ಕೆ ಸೇರಿಸಿಕೊಳ್ಳಲು ಬಯಸಿವೆ.

ಎಡಗೈ ವೇಗಿಯೊಬ್ಬರು ಇದ್ದರೆ ಅದು ತಂಡಕ್ಕೆ ವಿಶೇಷ ಶಕ್ತಿ ನೀಡುತ್ತದೆ. ಪವರ್ ಪ್ಲೇನಲ್ಲಿ ಎಡಗೈ ವೇಗಿಗಳು ಹೆಚ್ಚಿನ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿರುತ್ತಾರೆ. ಅದರಲ್ಲೂ ಐಪಿಎಲ್‌ನಲ್ಲಿ ಎಡಗೈ ವೇಗಿಯೊಬ್ಬ ತಂಡದಲ್ಲಿದ್ದರೆ ಅದು ತಂಡದ ಬೌಲಿಂಗ್ ಶಕ್ತಿಯನ್ನು ಹೆಚ್ಚಿಸುತ್ತದೆ.

ಭಾರತ vs ನ್ಯೂಜಿಲೆಂಡ್: ಟಿ20 ಆಯ್ತು ಇನ್ನು ಏಕದಿನ ಸರಣಿ ಮೇಲೆ ಕಣ್ಣು: ಯಾವಾಗ ಆರಂಭ?ಭಾರತ vs ನ್ಯೂಜಿಲೆಂಡ್: ಟಿ20 ಆಯ್ತು ಇನ್ನು ಏಕದಿನ ಸರಣಿ ಮೇಲೆ ಕಣ್ಣು: ಯಾವಾಗ ಆರಂಭ?

ಮುಂಬರುವ ಹರಾಜಿನಲ್ಲಿ ಪ್ರಮುಖವಾಗಿ ಮೂವರು ಎಡಗೈ ವೇಗಿಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಡೇನಿಯಲ್ ಸ್ಯಾಮ್ಸ್, ಸ್ಯಾಮ್ ಕರ್ರಾನ್ ಮತ್ತು ಜಯದೇವ್ ಉನದ್ಕತ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೆಚ್ಚಿನ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಈ ಮೂವರು ಕ್ರಿಕೆಟಿಗರು ತಂಡಕ್ಕೆ ಯಾಕೆ ಮುಖ್ಯ, ಐಪಿಎಲ್‌ನಲ್ಲಿ ಇವರ ಹಿಂದಿನ ಪ್ರದರ್ಶನದ ಬಗ್ಗೆ ಇಲ್ಲಿದೆ ಮಾಹಿತಿ.

ಡೇನಿಯಲ್ ಸ್ಯಾಮ್ಸ್‌ಗೆ ಉತ್ತಮ ಬೇಡಿಕೆ ಸಾಧ್ಯತೆ

ಡೇನಿಯಲ್ ಸ್ಯಾಮ್ಸ್‌ಗೆ ಉತ್ತಮ ಬೇಡಿಕೆ ಸಾಧ್ಯತೆ

2022ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಆಸ್ಟ್ರೇಲಿಯಾದ ವೇಗಿ ಡೇನಿಯಲ್ ಸ್ಯಾಮ್ಸ್‌ರನ್ನು 2.6 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. ಸ್ಯಾಮ್ಸ್ 2022ರ ಐಪಿಎಲ್‌ನಲ್ಲಿ 11 ಪಂದ್ಯಗಳನ್ನು ಆಡಿದ್ದರು, 28.46 ಸರಾಸರಿಯಲ್ಲಿ 13 ವಿಕೆಟ್ ಪಡೆದರು. 8.81 ರ ಎಕಾನಮಿ ದರವನ್ನು ಹೊಂದಿದ್ದಾರೆ. ಬ್ಯಾಟಿಂಗ್‌ನೊಂದಿಗೆ 10 ಇನ್ನಿಂಗ್ಸ್‌ಗಳಲ್ಲಿ 38 ರನ್ ಗಳಿಸಿದರು.

ಸ್ಯಾಮ್ಸ್‌ರ ಪ್ರದರ್ಶನದೊಂದಿಗೆ ಮುಂಬೈ ಇಂಡಿಯನ್ಸ್ ತೃಪ್ತಿ ಹೊಂದಿಲ್ಲದ ಕಾರಣ 2023ರ ಮಿನಿ ಹರಾಜಿಗೆ ಮುನ್ನ ಅವರನ್ನು ಬಿಡುಗಡೆ ಮಾಡಿದೆ. ಆದರೂ, ಆರಂಭಿಕ ಓವರ್ ಗಳಲ್ಲಿ ಹೊಸ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಡೇನಿಯಲ್ ಸ್ಯಾಮ್ಸ್ ಹೊಂದಿದ್ದಾರೆ. ಅಂತಿಮ ಓವರ್‌ಗಳಲ್ಲಿ ಕೂಡ ಅವರು ಉತ್ತಮವಾಗಿ ಬೌಲಿಂಗ್ ಮಾಡಬಲ್ಲರು.

ಅಲ್ಲದೆ ಡೇನಿಯಲ್‌ ಸ್ಯಾಮ್ಸ್ ತಮ್ಮ ಹೊಡೆತಗಳಿಗೆ ಹೆಸರಾಗಿದ್ದಾರೆ. ಅಂತಿಮ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದ್ದು, ಯಾವುದೇ ತಂಡ ಕೂಡ ಅವರನ್ನು ಖರೀದಿಸಲು ಆಸಕ್ತಿ ಹೊಂದಬಹುದಾಗಿದೆ.

FIFA World Cup 2022: ಮೆಸ್ಸಿ ನೇತೃತ್ವದ ಅರ್ಜೆಂಟೀನಾಗೆ ಬಿಗ್ ಶಾಕ್, 2-1 ಅಂತರದಲ್ಲಿ ಗೆದ್ದ ಸೌದಿ ಅರೇಬಿಯಾ

ಅನುಭವಿ ಬೌಲರ್ ಜಯದೇವ್ ಉನಾದ್ಕಟ್

ಅನುಭವಿ ಬೌಲರ್ ಜಯದೇವ್ ಉನಾದ್ಕಟ್

ಜಯದೇವ್ ಉನಾದ್ಕಟ್ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಬೌಲರ್ ಆಗಿದ್ದಾರೆ. ಜಯದೇವ್ ಉನಾದ್ಕಟ್ 2010ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅವರು ದಾಖಲೆಯ ಮೊತ್ತಕ್ಕೆ ಹರಾಜಾದ ಇತಿಹಾಸವನ್ನು ಹೊಂದಿದ್ದಾರೆ.

2017ರಲ್ಲಿ ಜಯದೇವ್ ಉನಾದ್ಕಟ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆ ವರ್ಷ ಆಡಿದ 12 ಐಪಿಎಲ್‌ ಪಂದ್ಯಗಳಲ್ಲಿ 7.04 ಎಕಾನಮಿಯೊಂದಿಗೆ 24 ವಿಕೆಟ್ ಪಡೆದಿದ್ದರು. ಆದರೆ, ಪ್ರತಿ ವರ್ಷ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲರಾದ ಕಾರಣ ಅವರಿಗೆ ಬೇಡಿಕೆ ಕಡಿಮೆಯಾಗಿದೆ.

ಉನಾದ್ಕತ್ ಐಪಿಎಲ್‌ನಲ್ಲಿ 91 ಪಂದ್ಯಗಳನ್ನಾಡಿದ್ದು 91 ವಿಕೆಟ್ ಪಡೆದಿದ್ದಾರೆ. 2022ರಲ್ಲಿ ಮುಂಬೈ ಪರವಾಗಿ ಆಡಿದ್ದ ಉನಾದ್ಕಟ್ ಈ ಬಾರಿ ಮತ್ತೆ ಹರಾಜಿಗೆ ಬಂದಿದ್ದಾರೆ. ಬ್ಯಾಪ್ ಅಪ್ ಬೌಲರ್ ಆಗಿ ಹಲವು ತಂಡಗಳು ಉನಾದ್ಕಟ್‌ರನ್ನು ಖರೀದಿಸಲು ಆಸಕ್ತಿ ಹೊಂದಿರಬಹುದು.

ಇಂಗ್ಲೆಂಡ್ ಎಡಗೈ ವೇಗಿ ಸ್ಯಾಮ್ ಕರನ್

ಇಂಗ್ಲೆಂಡ್ ಎಡಗೈ ವೇಗಿ ಸ್ಯಾಮ್ ಕರನ್

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸ್ಯಾಮ ಕರನ್ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಎಡಗೈ ವೇಗಿ ವಿಶ್ವಕಪ್‌ನಲ್ಲಿ 13 ವಿಕೆಟ್ ಪಡೆದು ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದಿದ್ದರು. ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದಿದ್ದಾರೆ.

ಸ್ಯಾಮ್ ಕರಾನ್ ಈ ಬಾರಿ ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೆಚ್ಚಿನ ಪೈಪೋಟಿ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊದಲು ಸ್ಯಾಮ್ ಕರನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಆಡಿದ್ದಾರೆ.

Story first published: Wednesday, November 23, 2022, 5:30 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X