ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೇಂದ್ರ ಒಪ್ಪಂದದಿಂದ ಸ್ಟಾರ್ ಬ್ಯಾಟರ್‌ನನ್ನು ಕೈಬಿಟ್ಟ ನ್ಯೂಜಿಲೆಂಡ್; ಐಪಿಎಲ್ ಆಡುವ ಸಾಧ್ಯತೆ!

New Zealand Cricket Has Released Martin Guptill From Central Contract

ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಅವರನ್ನು ರಾಷ್ಟ್ರೀಯ ಪುರುಷರ ಕೇಂದ್ರ ಒಪ್ಪಂದದಿಂದ ಬಿಡುಗಡೆ ಮಾಡಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ (NZC) ಮಂಡಳಿ ಪ್ರಕಟಿಸಿದೆ.

ಸದ್ಯ ತವರಿನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಅನುಭವಿ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಹೊರಗುಳಿದ ನಂತರ ಈ ಸುದ್ದಿ ಹೊರಬಿದ್ದಿದೆ.

ವಿಭಿನ್ನ ಮಾದರಿಯಲ್ಲಿ ಮುಂದಿನ ಪುರುಷರ ಟಿ20 ವಿಶ್ವಕಪ್; ಅದರ ಸ್ವರೂಪ ಇಲ್ಲಿದೆವಿಭಿನ್ನ ಮಾದರಿಯಲ್ಲಿ ಮುಂದಿನ ಪುರುಷರ ಟಿ20 ವಿಶ್ವಕಪ್; ಅದರ ಸ್ವರೂಪ ಇಲ್ಲಿದೆ

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮಾರ್ಟಿನ್ ಗಪ್ಟಿಲ್ ನ್ಯೂಜಿಲೆಂಡ್ ತಂಡದ ಪರವಾಗಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಬ್ಲ್ಯಾಕ್ ಕ್ಯಾಪ್ಸ್ ತಂಡ ಬದಲಾಗಿ ಫಿನ್ ಅಲೆನ್‌ಗೆ ಆದ್ಯತೆ ನೀಡಿತು.

ಕೇಂದ್ರ ಒಪ್ಪಂದದಿಂದ ಕೈಬಿಟ್ಟ ಮೂರನೇ ಆಟಗಾರ

ಕೇಂದ್ರ ಒಪ್ಪಂದದಿಂದ ಕೈಬಿಟ್ಟ ಮೂರನೇ ಆಟಗಾರ

ಅನುಭವಿ ವೇಗದ ಬೌಲರ್ ಟ್ರೆಂಟ್ ಬೌಲ್ಟ್, ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ನಂತರ ಮಾರ್ಟಿನ್ ಗಪ್ಟಿಲ್ ಕೇಂದ್ರ ಒಪ್ಪಂದದಿಂದ ಕೈಬಿಟ್ಟ ಮೂರನೇ ಆಟಗಾರನಾದರು.

"ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯೊಂದಿಗಿನ ಚರ್ಚೆಗಳ ನಂತರ, ಒಪ್ಪಂದದಿಂದ ಬಿಡುಗಡೆಗಾಗಿ ಮಾರ್ಟಿನ್ ಗಪ್ಟಿಲ್ ಅವರ ವಿನಂತಿಯನ್ನು ಸ್ವೀಕರಿಸಿ, ತಕ್ಷಣವೇ ಜಾರಿಗೆ ಬರಲು ಒಪ್ಪಿಕೊಳ್ಳಲಾಗಿದೆ. ಇದೇ ವೇಳೆ ಮಾರ್ಟಿನ್ ಗಪ್ಟಿಲ್ ಯಾವಾಗಲೂ ಆಯ್ಕೆಗೆ ಅರ್ಹರಾಗಿ ಉಳಿಯುತ್ತಾರೆ," ಎಂದು ನ್ಯೂಜಿಲೆಂಡ್ ಕ್ರಿಕೆಟ್ (NZC) ಬುಧವಾರ, ನವೆಂಬರ್ 23ರಂದು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ನ್ಯೂಜಿಲೆಂಡ್ ಪರ ಐದನೇ ಅತಿ ಹೆಚ್ಚು ರನ್ ಗಳಿಸಿರುವ ಗಪ್ಟಿಲ್

ನ್ಯೂಜಿಲೆಂಡ್ ಪರ ಐದನೇ ಅತಿ ಹೆಚ್ಚು ರನ್ ಗಳಿಸಿರುವ ಗಪ್ಟಿಲ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಐದನೇ ಅತಿ ಹೆಚ್ಚು ರನ್ ಗಳಿಸಿರುವ ಮಾರ್ಟಿನ್ ಗಪ್ಟಿಲ್, ಇದೀಗ ಪ್ರಪಂಚದಾದ್ಯಂತದ ವಿವಿಧ ಲೀಗ್‌ಗಳಲ್ಲಿ 'ಇತರ ಅವಕಾಶಗಳನ್ನು ಹುಡುಕಲು' ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

"ನನ್ನ ದೇಶಕ್ಕಾಗಿ ಆಡುವುದು ಒಂದು ದೊಡ್ಡ ಗೌರವವಾಗಿದೆ ಮತ್ತು ಬೆಂಬಲಕ್ಕಾಗಿ ನಾನು ಆಟಗಾರರು ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯಲ್ಲಿರುವ ಪ್ರತಿಯೊಬ್ಬರಿಗೂ ಕೃತಜ್ಞನಾಗಿದ್ದೇನೆ. ಆದರೆ, ಪ್ರಸ್ತುತ ಸಂದರ್ಭಗಳಲ್ಲಿ ನನ್ನ ಆಯ್ಕೆಗಳನ್ನು ಪರಿಗಣಿಸುವ ಅಗತ್ಯವನ್ನು ಅರ್ಥಮಾಡಿಕೊಂಡಿದ್ದೇನೆ," ಎಂದು ಮಾರ್ಟಿನ್ ಗಪ್ಟಿಲ್ ಹೇಳಿದ್ದಾರೆ.

ಸುದೀರ್ಘ ದಿನಗಳ ಕಾಲ ನಮಗೆ ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದಾರೆ

ಸುದೀರ್ಘ ದಿನಗಳ ಕಾಲ ನಮಗೆ ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದಾರೆ

"ಕೇಂದ್ರ ಒಪ್ಪಂದದ ಬಿಡುಗಡೆಯಾದರೂ, ನಾನು ಇನ್ನೂ ನ್ಯೂಜಿಲೆಂಡ್ ಕ್ರಿಕೆಟ್‌ಗೆ ಲಭ್ಯವಿದ್ದೇನೆ. ಇತರ ಅವಕಾಶಗಳನ್ನು ಹುಡುಕಲು ನನಗೆ ಅವಕಾಶವಿದೆ ಮತ್ತು ನನ್ನ ಕುಟುಂಬದೊಂದಿಗೆ ನಾನು ಹೆಚ್ಚು ಸಮಯ ಕಳೆಯುತ್ತೇನೆ, ಇದು ಮುಖ್ಯವಾಗಿದೆ," ಎಂದು ಗಪ್ಟಿಲ್ ತಿಳಿಸಿದರು.

"ಮಾರ್ಟಿನ್ ಗಪ್ಟಿಲ್ ಅವರ ಸ್ಥಾನವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅವರು ಸುದೀರ್ಘ ದಿನಗಳ ಕಾಲ ನಮಗೆ ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದಾರೆ ಮತ್ತು ಅವರು ಇತರ ಅವಕಾಶಗಳನ್ನು ಹುಡುಕುವಾಗ ನಾವು ಖಂಡಿತವಾಗಿಯೂ ಅವರ ದಾರಿಗೆ ಅಡ್ಡಲಾಗಿ ನಿಲ್ಲಲು ಬಯಸುವುದಿಲ್ಲ," ಎಂದು ನ್ಯೂಜಿಲೆಂಡ್ ಕ್ರಿಕೆಟ್‌ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ವೈಟ್ ಪ್ರತಿಕ್ರಿಯಿಸಿದರು.

198 ಏಕದಿನ ಪಂದ್ಯಗಳಲ್ಲಿ 7,000ಕ್ಕೂ ಹೆಚ್ಚು ರನ್

198 ಏಕದಿನ ಪಂದ್ಯಗಳಲ್ಲಿ 7,000ಕ್ಕೂ ಹೆಚ್ಚು ರನ್

ಮಾರ್ಟಿನ್ ಗಪ್ಟಿಲ್ 198 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 7,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರ ಅಜೇಯ 237 ರನ್‌ ಏಕದಿನ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ.

122 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು 3,531 ರನ್ ಗಳಿಸಿದ್ದಾರೆ, ಇದರಲ್ಲಿ 105 ರನ್ ಅವರ ವೈಯಕ್ತಿಕ ಹೆಚ್ಚಿನ ಸ್ಕೋರ್ ಆಗಿದೆ.

ಮಾರ್ಟಿನ್ ಗಪ್ಟಿಲ್ 122 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 31.81 ಸರಾಸರಿಯಲ್ಲಿ ಎರಡು ಶತಕಗಳು ಮತ್ತು 20 ಅರ್ಧ ಶತಕಗಳೊಂದಿಗೆ 3,531 ರನ್ ಗಳಿಸಿ ಕಿವೀಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಇದೇ ವೇಳೆ 135.70 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

Story first published: Wednesday, November 23, 2022, 10:03 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X