ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೆದ್ದ ಜಯ್ ಶಾ ಹಠ, ಪಾಕ್‌ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ

Major Setback For Pakistan; Asian Cricket Council Meeting Decided To Host 2023 Asia Cup At a Neutral Venue

ಶನಿವಾರ, ಫೆಬ್ರವರಿ 4ರಂದು ಬಹ್ರೇನ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರು ತಮ್ಮ ಮೊದಲ ಔಪಚಾರಿಕ ಸಭೆ ನಡೆಸಿದ ನಂತರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮಾರ್ಚ್‌ನಲ್ಲಿ 2023ರ ಏಷ್ಯಾ ಕಪ್ ಏಕದಿನ ಪಂದ್ಯಾವಳಿಗೆ ಪರ್ಯಾಯ ಸ್ಥಳವನ್ನು ನಿರ್ಧರಿಸುವುದಾಗಿ ತಿಳಿದುಬಂದಿದೆ.

2023ರ ಏಕದಿನ ಏಷ್ಯಾ ಕಪ್ ಆತಿಥ್ಯವನ್ನು ಆರಂಭದಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿತ್ತು ಮತ್ತು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪಂದ್ಯಾವಳಿ ನಿಗದಿಪಡಿಸಲಾಗಿತ್ತು. ಆದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಜಯ್ ಶಾ, ಕಳೆದ ಅಕ್ಟೋಬರ್‌ನಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದ್ದರು.

ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್

ಮೂರು ಸ್ಥಳಗಳನ್ನು ಹೊಂದಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಮೆಚ್ಚಿನ ಸ್ಥಳಗಳಾಗಿವೆ. ಆದರೆ ಆ ನಿರ್ಧಾರವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.

ಜಯ್ ಶಾ ಅಧ್ಯಕ್ಷತೆಯಲ್ಲಿ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರ ಮನವಿ ಮೇರೆಗೆ ಎಸಿಸಿ ಸದಸ್ಯ ರಾಷ್ಟ್ರಗಳ ಎಲ್ಲಾ ಮುಖ್ಯಸ್ಥರು ಭಾಗವಹಿಸಿದ್ದರು. ಸಭೆಯಲ್ಲಿ ಪಾಕಿಸ್ತಾನಕ್ಕೆ ಏಷ್ಯಾಕಪ್ ಆತಿಥ್ಯ ವಹಿಸುವುದನ್ನು ತಡೆಹಿಡಿಯಲಾಗಿದೆ.

Major Setback For Pakistan; Asian Cricket Council Meeting Decided To Host 2023 Asia Cup At a Neutral Venue

"ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಂಗಸಂಸ್ಥೆಗಳು ಇಂದು ಸಭೆ ನಡೆಸಿದ್ದು, ಸಾಕಷ್ಟು ರಚನಾತ್ಮಕ ಚರ್ಚೆಗಳು ನಡೆದಿವೆ. ಆದರೆ ಸ್ಥಳ ಬದಲಾವಣೆಯನ್ನು ಮಾರ್ಚ್‌ಗೆ ಮುಂದೂಡಲಾಗಿದೆ. ಭಾರತ ತಂಡವು ಪಾಕಿಸ್ತಾನಕ್ಕೆ ಹೋಗದಿರುವುದರಿಂದ ಪಂದ್ಯಾವಳಿಯನ್ನು ಸ್ಥಳಾಂತರಿಸುವುದು ಖಚಿತವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಮತ್ತು ಭಾರತದ ಸ್ಟಾರ್ ಆಟಗಾರರು ಇಲ್ಲದ ಪಂದ್ಯಾವಳಿಗೆ ಪ್ರಾಯೋಜಕರು ಹಿಂದೆ ಸರಿಯುತ್ತಾರೆ," ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Border-Gavaskar Trophy: ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಬಿಗ್ ಹಿಟ್ಟರ್ ರೆಡಿ?; ದೊಡ್ಡ ಸುಳಿವು ನೀಡಿದ 'SKY'Border-Gavaskar Trophy: ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಬಿಗ್ ಹಿಟ್ಟರ್ ರೆಡಿ?; ದೊಡ್ಡ ಸುಳಿವು ನೀಡಿದ 'SKY'

ನಜಮ್ ಸೇಥಿ ಈಗಷ್ಟೇ ಪಿಸಿಬಿ ಮುಖ್ಯಸ್ಥ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಮೊದಲ ಸಭೆಯಲ್ಲೇ ಆತಿಥ್ಯ ಹಕ್ಕುಗಳನ್ನು ಅವರು ಬಿಟ್ಟುಕೊಟ್ಟರೆ, ತವರಿನಲ್ಲಿ ಮುಖಭಂಗಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

Major Setback For Pakistan; Asian Cricket Council Meeting Decided To Host 2023 Asia Cup At a Neutral Venue

ಇದೇ ವೇಳೆ, ಪ್ರಸ್ತುತ ಪಾಕಿಸ್ತಾನ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಣದುಬ್ಬರವು ದೇಶದ ಕರೆನ್ಸಿ 1 US ಡಾಲರ್‌ಗೆ 277 ರೂ.ಗೆ ಕುಸಿಯುವುದರೊಂದಿಗೆ ಆ ದೇಶಕ್ಕೆ ನಷ್ಟವಾಗುತ್ತಿದೆ. ಏಷ್ಯಾ ಕಪ್‌ನಂತಹ ದೊಡ್ಡ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸುವುದು, ಎಸಿಸಿ ಅನುದಾನ ನೀಡಿದರೂ, ಪಿಸಿಬಿ ಬೊಕ್ಕಸ ಖಾಲಿ ಆಗಲಿದೆ.

ಮತ್ತೊಂದು ನಿರ್ಧಾರದಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ಸಂಸ್ಥೆಗೆ ಎಸಿಸಿಯ ವಾರ್ಷಿಕ ಬಜೆಟ್ ಅನ್ನು ಶೇ.6ರಿಂದ ಶೇ.15 ರಷ್ಟಕ್ಕೆ ಹೆಚ್ಚಿಸಲು ನಿರ್ಧರಿಸಿದೆ.

ದೇಶದಲ್ಲಿ ಮಹಿಳಾ ಕ್ರಿಕೆಟ್ ಪುನರುಜ್ಜೀವನಗೊಳ್ಳಲು ಅಫ್ಘಾನಿಸ್ತಾನ ಮಂಡಳಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುವುದಾಗಿ ಎಸಿಸಿ ಭರವಸೆ ನೀಡಿದೆ. ಸದ್ಯ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಕ್ರೀಡೆಗಳನ್ನು ಆಡುವುದನ್ನು ನಿಷೇಧಿಸಲಾಗಿದೆ.

Story first published: Sunday, February 5, 2023, 2:40 [IST]
Other articles published on Feb 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X