ಟೀಮ್ ಇಂಡಿಯಾಗೆ ಫಿನಿಷರ್‌ನ ಅಗತ್ಯವಿದೆ, ನಾನು ಆ ಸ್ಥಾನ ತುಂಬಬಲ್ಲೆ ಎಂದ ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್ ಸದ್ಯ ಇಂಗ್ಲೆಂಡ್ ತಲುಪಿದ್ದು ಜೂನ್ 18-22ರವರೆಗೆ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡದ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಭಾರತದ ಪರ ವೀಕ್ಷಕವಿವರಣೆ ಮಾಡಲಿದ್ದಾರೆ.

ಐಪಿಎಲ್ 2022ರ ಹರಾಜಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಆಟಗಾರರು

ಇದೇ ವೇಳೆ ಮಾತನಾಡಿದ ದಿನೇಶ್ ಕಾರ್ತಿಕ್ ಮತ್ತೆ ಟೀಮ್ ಇಂಡಿಯಾ ಸೇರಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. 2004ರಲ್ಲಿಯೇ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ದಿನೇಶ್ ಕಾರ್ತಿಕ್ ಸತತವಾಗಿ ಉತ್ತಮ ಪ್ರದರ್ಶನ ನೀಡದ ಕಾರಣ ತಂಡದಿಂದ ಹೊರಬಿದ್ದರು. ಆಗಾಗ ಅವಕಾಶ ಪಡೆದುಕೊಂಡರು ಸಹ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ದಿನೇಶ್ ಕಾರ್ತಿಕ್ ವಿಫಲರಾಗಿದ್ದಾರೆ. ಸದ್ಯ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಆಡುವ ಆಸೆ ವ್ಯಕ್ತಪಡಿಸಿರುವ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ ಮಧ್ಯಮ ಕ್ರಮಾಂಕದ ಫಿನಿಷರ್‌ನ ಅಗತ್ಯವಿದ್ದು ತಾನು ಆ ಜಾಗವನ್ನು ತುಂಬಬಲ್ಲೆ ಎಂದು ಹೇಳಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ರೀತಿ ಕೊಹ್ಲಿ ಪಡೆ ಮಿಂಚುವುದು ಅನುಮಾನ ಎಂದ ಭಾರತದ ಮಾಜಿ ಕ್ರಿಕೆಟಿಗ!

ನಿದಹಾಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 8 ಎಸೆತಗಳಲ್ಲಿ ಅಜೇಯ 29 ರನ್ ಬಾರಿಸಿದ್ದ ದಿನೇಶ್ ಕಾರ್ತಿಕ್ ಆ ಪಂದ್ಯದ ನಂತರ ಟಿಟ್ವೆಂಟಿ ಸ್ಪೆಷಲಿಸ್ಟ್ ಎನಿಸಿಕೊಂಡರು ಹಾಗೂ ಹಲವಾರು ಪಂದ್ಯಗಳಲ್ಲಿ ಅವಕಾಶವನ್ನು ಪಡೆದು ಮಿಂಚಿದರು. ಆದರೆ 2019ರ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಟಿ ಟ್ವೆಂಟಿ ತಂಡದಿಂದಲೂ ಸಹ ದಿನೇಶ್ ಕಾರ್ತಿಕ್ ಹೊರಬಿದ್ದರು. 'ವಯಸ್ಸಾಗಿದ್ದರೂ ಸಹ ಇನ್ನೂ ಕ್ರಿಕೆಟ್ ಆಡಲು ಬೇಕಾಗಿರುವ ಫಿಟ್‌ನೆಸ್ ನನ್ನಲ್ಲಿದ್ದು ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಆಡಲು ಇಚ್ಛಿಸುತ್ತೇನೆ. ಅವಕಾಶ ಗಿಟ್ಟಿಸಿಕೊಳ್ಳಲು ನನ್ನಿಂದ ಮಾಡಬೇಕಾದ ಪ್ರಯತ್ನಗಳನ್ನು ಖಂಡಿತ ಮಾಡುತ್ತೇನೆ' ಎಂದು ದಿನೇಶ್ ಕಾರ್ತಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, June 6, 2021, 13:40 [IST]
Other articles published on Jun 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X