ಐಪಿಎಲ್ 2022ರ ಹರಾಜಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಆಟಗಾರರು

ಮುಂಬೈ ಇಂಡಿಯನ್ಸ್ ಹೊರತುಪಡಿಸಿದರೆ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿರುವ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್. ಐಪಿಎಲ್ ಇತಿಹಾಸದಲ್ಲಿ ಇದುವರೆಗೂ 3 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು.

ನೋಡಿ, ಆತನೇ ಬೇರೆ ನಾನೇ ಬೇರೆ; ಕೊಹ್ಲಿ ಜೊತೆ ಹೋಲಿಕೆ ಮಾಡುವವರಿಗೆ ಬಾಬರ್ ಅಜಮ್ ಹೇಳಿದ್ದಿಷ್ಟು

ಆದರೆ ಈ ಬಾರಿ ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಯಶಸ್ಸಿನ ಹಾದಿಗೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಮುಂದೂಡಲ್ಪಟ್ಟ ವೇಳೆಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ಉತ್ತಮ ಸ್ಥಿತಿಯಲ್ಲಿದೆ. ಸದ್ಯ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂದುವರಿಯಲಿರುವ ಪ್ರಸ್ತುತ ಐಪಿಎಲ್ ಟೂರ್ನಿಯ ಜೊತೆಗೆ 2022ರ ಐಪಿಎಲ್ ಟೂರ್ನಿಯ ಕುರಿತು ಕೂಡ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೌದು ಮುಂದಿನ ವರ್ಷದಲ್ಲಿ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳು ಸೇರ್ಪಡೆಯಾಗಲಿವೆ ಎನ್ನಲಾಗುತ್ತಿದ್ದು ಮೆಗಾ ಹರಾಜು ನಡೆಯಲಿದೆ.

ನ್ಯೂಜಿಲೆಂಡ್‌ಗೆ ಅನುಕೂಲ ಹೆಚ್ಚು ಎನ್ನುವವರು ಯಾವುದೇ ಕಾರಣಕ್ಕೂ ವಿಮಾನ ಹತ್ತಬೇಡಿ ಎಂದಿದ್ದ ವಿರಾಟ್ ಕೊಹ್ಲಿ!

ಈ ಹರಾಜಿನಲ್ಲಿ ಪ್ರತಿ ತಂಡಗಳು ಕೂಡ 3 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು ಉಳಿದ ಆಟಗಾರರನ್ನು ಕೈಬಿಡಬೇಕಾಗುತ್ತದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಹಿರಿಯ ಆಟಗಾರರು ನಿವೃತ್ತಿಯ ಹೊಸ್ತಿಲಲ್ಲಿರುವ ಕಾರಣ ಈ ಬಾರಿ ಚೆನ್ನೈ ಹಿರಿಯ ಆಟಗಾರರನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಚೆನ್ನೈ ತಂಡ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಇಬ್ಬರನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಈ ಇಬ್ಬರನ್ನು ಹೊರತುಪಡಿಸಿ ಮತ್ತೋರ್ವ ಆಟಗಾರನ ಜಾಗಕ್ಕೆ ಈ ಕೆಳಕಂಡ 5 ಆಟಗಾರರ ಪೈಕಿ ಓರ್ವ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

1. ಎಂಎಸ್ ಧೋನಿ

1. ಎಂಎಸ್ ಧೋನಿ

ಇಷ್ಟು ವರ್ಷಗಳ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂಎಸ್ ಧೋನಿಯನ್ನು ಬಿಟ್ಟುಕೊಡದೆ ತಂಡದಲ್ಲಿ ಉಳಿಸಿಕೊಂಡು ಬಂದಿದೆ. ಆದರೆ ಎಂಎಸ್ ಧೋನಿ ನಿವೃತ್ತಿಯ ಸನಿಹಕ್ಕೆ ಬಂದಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿಯನ್ನು ಉಳಿಸಿಕೊಳ್ಳುತ್ತಾ ಅಥವಾ ಬಿಟ್ಟುಕೊಡುತ್ತಾ ಎಂಬ ಗೊಂದಲಗಳು ಮೂಡಿವೆ. ಆದರೆ ಚೆನ್ನೈ ತಂಡಕ್ಕೆ ಧೋನಿ ಸಲ್ಲಿಸಿರುವ ಕೊಡುಗೆ ಅಪಾರವಾದದ್ದು ಹಾಗೂ ಇನ್ನೂ 3 ವರ್ಷಗಳ ಕಾಲ ಐಪಿಎಲ್ ಆಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಮುಂಬರುವ ಐಪಿಎಲ್ ಹರಾಜಿನಲ್ಲಿ ಧೋನಿಯನ್ನು ಚೆನ್ನೈ ತಂಡ ಉಳಿಸಿಕೊಳ್ಳುವ ಸಾಧ್ಯತೆಯಿದೆ.

2. ಮೊಯಿನ್ ಅಲಿ

2. ಮೊಯಿನ್ ಅಲಿ

ಐಪಿಎಲ್ 2021ರ ಮಿನಿ ಹರಾಜಿನಲ್ಲಿ ಮೊಯಿನ್ ಅಲಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ಕೋಟಿ ನೀಡುವುದರ ಮೂಲಕ ಖರೀದಿಸಿತು. ಖರೀದಿಗೆ ತಕ್ಕಂಥ ಆಟವನ್ನು ಪ್ರದರ್ಶಿಸಿದ ಮೊಯಿನ್ ಅಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಮಿಂಚಿದರು. ಹೀಗಾಗಿ ಮೊಯಿನ್ ಅಲಿಯನ್ನು ಚೆನ್ನೈ ತಂಡ ಮುಂಬರುವ ಐಪಿಎಲ್ ಹರಾಜಿನಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.

3. ದೀಪಕ್ ಚಹರ್

3. ದೀಪಕ್ ಚಹರ್

ದೀಪಕ್ ಚಹರ್ ಕಳೆದ ಕೆಲ ಐಪಿಎಲ್ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಎನಿಸಿಕೊಂಡಿದ್ದಾರೆ. ಪವರ್‌ಪ್ಲೇ ಓವರ್‌ಗಳಲ್ಲಿ ಹೆಚ್ಚಾಗಿ ಮಿಂಚಿ ಉತ್ತಮ ಪ್ರದರ್ಶನ ನೀಡಿರುವ ದೀಪಕ್ ಚಹರ್ ಮುಂಬರುವ ಐಪಿಎಲ್ ಹರಾಜಿನಲ್ಲಿ ಚೆನ್ನೈ ತಂಡದಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆಯಿದೆ.

4. ರುತುರಾಜ್ ಗಾಯಕ್ವಾಡ್

4. ರುತುರಾಜ್ ಗಾಯಕ್ವಾಡ್

ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಉತ್ತಮ ಪ್ರದರ್ಶನವನ್ನು ನೀಡಿದ್ದು ಮುಂಬರುವ ದಿನಗಳಲ್ಲಿ ತಂಡಕ್ಕೆ ಉಪಯೋಗಕ್ಕೆ ಬರುವಂತಹ ಆಟಗಾರ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಋತುರಾಜ್ ಗಾಯಕ್ವಾಡ್‌ನನ್ನು ಮುಂಬರುವ ಐಪಿಎಲ್ ಹರಾಜಿನಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.

5. ಕೃಷ್ಣಪ್ಪ ಗೌತಮ್

5. ಕೃಷ್ಣಪ್ಪ ಗೌತಮ್

ಕೃಷ್ಣಪ್ಪ ಗೌತಮ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡದ ಪರ ಯಾವುದೇ ಪಂದ್ಯದಲ್ಲಿಯೂ ಆಡುವ ಅವಕಾಶವನ್ನು ಪಡೆದುಕೊಳ್ಳಲಿಲ್ಲ. ಆದರೆ ಕೃಷ್ಣಪ್ಪ ಗೌತಮ್ ಉತ್ತಮ ಆಲ್‌ರೌಂಡರ್ ಆಟಗಾರನಾಗಿದ್ದು ಐಪಿಎಲ್ 2021 ಮಿನಿ ಹರಾಜಿನಲ್ಲಿ ಚೆನ್ನೈ ತಂಡ 9.25 ಕೋಟಿ ನೀಡಿ ಖರೀದಿಸಿತ್ತು. ಹೀಗಾಗಿ ಮುಂಬರುವ ಐಪಿಎಲ್ ಹರಾಜಿನಲ್ಲಿ ಕೃಷ್ಣಪ್ಪ ಗೌತಮ್ ಚೆನ್ನೈ ತಂಡದಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

For Quick Alerts
ALLOW NOTIFICATIONS
For Daily Alerts
Story first published: Thursday, June 3, 2021, 22:16 [IST]
Other articles published on Jun 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X