ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಡುಗಡೆಗೆ ಮುನ್ನವೇ ಸಿಕ್ಸರ್ ಬಾರಿಸಿರುವ ಒಪ್ಪೋ ಎಫ್7

By Prasad
OPPO F7: Hitting a sixer out of the chart

ಬೆಂಗಳೂರು, ಮಾರ್ಚ್ 22 : ಬೆಂಗಳೂರಿನಲ್ಲಿ ಎಲ್ಲ ಜಾತಿ, ಪಂಗಡಗಳ ಜನರನ್ನು, ಭಾಷೆಯ ಗಡಿಯನ್ನೂ ಮೀರಿ ಒಗ್ಗೂಡಿಸುವ ಮತ್ತೊಂದು ಉತ್ಸವವೆಂದರೆ, ಅನುಮಾನವೇ ಬೇಡ, ಅದು ಕ್ರಿಕೆಟ್!

ಇಂಥ ಅವಕಾಶವನ್ನು ಚೀನಾದ ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದಕ ಒಪ್ಪೋ ಬಿಟ್ಟುಕೊಡಲು ಸಾಧ್ಯವೆ? ವಿನೂತನವಾದ ಸ್ಟೈಲಿಶ್ ಹ್ಯಾಂಡ್ ಸೆಟ್ ಮತ್ತು ವಿಶೇಷತೆಗಳಿಂದ ಮಾತ್ರವೇ ಈಗಾಗಲೆ ಭಾರತದ ಮಾರುಕಟ್ಟೆಯಲ್ಲಿ 'ಸೆಲ್ಫೀ ಎಕ್ಸ್ ಪರ್ಟ್' ಧೂಳು ಎಬ್ಬಿಸಿಲ್ಲ, ಭಾರತೀಯ ಕ್ರಿಕೆಟ್ ತಂಡದ ಪ್ರಯೋಜಕನಾಗಿಯೂ ಭಾರೀ ಸುದ್ದಿ ಮಾಡಿದೆ.

ವಿನ್ಯಾಸವನ್ನು ಮತ್ತಷ್ಟು ಉತ್ತಮಪಡಿಸಿರುವ ಸ್ಮಾರ್ಟ್ ಫೋನ್, ತನ್ನ ಫ್ಲಾಗ್ ಶಿಪ್ ಡಿವೈಸ್ ಒಪ್ಪೋ ಎಫ್7 ಅನ್ನು ಭರ್ಜರಿಯಾಗಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಳೆದ ವರ್ಷ ಸಾಕಷ್ಟು ಸದ್ದು ಮಾಡಿದ್ದ ಒಪ್ಪೋ ಎಫ್5 ಹಿಂದೆಯೇ ಹೊಚ್ಚಹೊಸ ಎಫ್7 ಮಾದರಿಯನ್ನು 26ನೇ ಮಾರ್ಚ್ ದಂದು ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ನಡೆಸಿದೆ.

OPPO F7: Hitting a sixer out of the chart

ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಆಗಿರುವ ಎಫ್7, 6.23 ಇಂಚಿನ ಫುಲ್ ಎಚ್‌ಡಿ (1080x2280 ಪಿಕ್ಸೆಲ್) ಡಿಸ್ಪ್ಲೇಯನ್ನು ಹೊಂದಿದ್ದು, 2.0 ಪೇನಲ್ ಹೊಂದಿದೆ. ಇದರ ಅರ್ಥ, ಫೋಟೋಗ್ರಫಿ ಮಾಡಲಾಗಲಿ, ಆಟವಾಡಲಾಗಲಿ ಅಥವಾ ವಿಡಿಯೋ ನೋಡಲಾಗಲಿ ಬಳಕೆ ಅತ್ಯಂತ ಸಹಜ ಸುಂದರವಾಗಿರುತ್ತದೆ.

ಎಲ್ಲಕ್ಕಿಂತ ಮುಖ್ಯವಾದದ್ದೆಂದರೆ, ಎಲ್ಲ ಬಗೆಯ ಅಪ್ಲಿಕೇಷನ್ ಗಳಿಗೆ ಈ ಮಾಡೆಲ್ ಕಂಪ್ಯಾಟಿಬಲ್ ಆಗಿದೆ. 25 ಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದರಲ್ಲಿದ್ದು, ಸೆಲ್ಫಿ ತೆಗೆದುಕೊಳ್ಳುವ ಅನುಭವವೇ ವಿಭಿನ್ನವಾಗಿರುತ್ತದೆ. ಕೇವಲ ಉತ್ತಮ ಸೆಲ್ಫಿ ತೆಗೆದುಕೊಳ್ಳಲು ಮಾತ್ರವಲ್ಲ, ಕೃತಕ ಬುದ್ಧಿಮತ್ತೆಯಿಂದಾಗಿ ಇದನ್ನು ನಿರ್ವಹಿಸುವುದು ಮತ್ತು ಪವರ್ ಉಳಿಸುವುದು ಕೂಡ ಅಷ್ಟೇ ಸುಲಭವಾಗಿರುತ್ತದೆ.

ಭಾರೀ ನಿರೀಕ್ಷೆ ಹುಟ್ಟಿಸಿರುವ ಒಪ್ಪೋ ಎಫ್7 ಲಾಂಚ್ ಗೂ ಮೊದಲೇ, ಕ್ರಿಕೆಟ್ ಪ್ರೇಮಿಗಳಿಗಾಗಿ ಸೋಷಿಯಲ್ ಮೀಡಿಯಾದಲ್ಲಿ, ಸ್ಮಾರ್ಟ್ ಫೋನ್ ಹಿಂದಿರುವ ಕ್ರಿಕೆಟರ್ ಯಾರು ಎಂಬ ಸ್ಪರ್ಧೆಯನ್ನೂ ಒಪ್ಪೋ ಏರ್ಪಡಿಸಿದೆ. ಹಲವಾರು ಕ್ರಿಕೆಟ್ ಪ್ರೇಮಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.

OPPO F7: Hitting a sixer out of the chart

"ಅದ್ಭುತ ಸ್ಕೀನ್ ಹೊಂದಿರುವ ಹೊಚ್ಚಹೊಸ ಒಪ್ಪೋ ಎಫ್7ಗೆ ದಾರಿ ಮಾಡಿಕೊಡಿ. ಈ ಫೋನ್ ಹಿಂದೆ ಇರುವ ಜನಪ್ರಿಯ ಕ್ರಿಕೆಟಿಗ ಯಾರು ಎಂದು ಊಹಿಸಲು ಸಾಧ್ಯವೆ?" ಎಂದು ಟ್ವಿಟ್ಟರ್ ಮೂಲಕ ಒಪ್ಪೋ ಎಫ್7ನ ಲಾಂಚಿಂಗ್ ಅನ್ನು ಘೋಷಣೆ ಮಾಡಲಾಗಿತ್ತು. ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸುವಂಥ ಇಂಥ ಹಲವಾರು ಪೋಸ್ಟ್ ಗಳನ್ನು ಟ್ವಿಟ್ಟರ್ ನಲ್ಲಿ ಮಾಡಲಾಗಿದೆ.

ಈ ಕ್ರಿಕೆಟಿಗರು ಮತ್ತಾರೂ ಅಲ್ಲ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಎಂಬುದನ್ನು ನಂತರ ಪ್ರಕಟಿಸಲಾಯಿತು. ಇವರನ್ನು ಎಫ್7ನ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ. ಒಪ್ಪೋ ಎಫ್7 ಮಾಡೆಲ್ ಸ್ವತಃ ಅತ್ಯಾಕರ್ಷಕವಾಗಿರುವುದರಿಂದ ಈ ಬ್ರಾಂಡ್ ರಾಯಭಾರಿಗಳ ಆಯ್ಕೆ ಕೂಡ ಅಷ್ಟೇ ಸಮಂಜಸವಾಗಿದೆ.

ಈ ಮೊಬೈಲ್ ನ ಸ್ಟೈಲ್ ಮತ್ತು ಪರ್ಫಾರ್ಮನ್ಸ್ ಅನ್ನು ಪರಿಗಣಿಸಿದರೆ, ಇದು ಎರಡರ ಅದ್ಭುತ ಸಂಗಮದಂತಿದೆ. ಒಳಗಡೆ ಕಲರ್ ಓಎಸ್ 5.0 ಆಪರೇಟಿಂಗ್ ಸಿಸ್ಟಂ ಇದ್ದು, ಆಂಡ್ರಾಯ್ಡ್ 8.1 ವರ್ಶನ್ ಹೊಂದಿದೆ. ನೋಡಲು ಪ್ರತಿಯೊಂದೂ ಅತ್ಯಾಕರ್ಷಕವಾಗಿ ಕಾಣಿಸಲೆಂದೇ ಇದನ್ನು ಡಿಸೈನ್ ಮಾಡಲಾಗಿದೆ. ಗ್ರಾಹಕರು ತಮ್ಮ ಟೇಸ್ಟಿಗೆ ತಕ್ಕಂತೆ ಸೋಲಾರ್ ರೆಡ್, ಮೂನ್ ಲೈಟ್ ಸಿಲ್ವರ್ ಬಣ್ಣದ ಮಾಡೆಲ್ ಆಯ್ದುಕೊಳ್ಳಬಹುದಾಗಿದೆ.

OPPO F7: Hitting a sixer out of the chart

ಕ್ರಿಕೆಟನ್ನು ಭಾರತದಲ್ಲಿ ಆಟಕ್ಕಿಂತ ಅದೊಂದು ಧರ್ಮವೆಂಬಂತೆ ಆರಾಧಿಸುತ್ತಾರೆ. ಹೀಗಾಗಿ, ಈ ಫೋನ್ ಹಲವಾರು ವಿಭಿನ್ನ ಅನುಭವಗಳನ್ನು ತೆರೆದಿಡಲಿದ್ದು, ಯುವಜನತೆಯೊಂದಿಗೂ ನೇರವಾಗಿ ಕನೆಕ್ಟ್ ಆಗುತ್ತದೆ. ಭಾರೀ ಸ್ಪರ್ಧೆಗಳ ನಡೆವೆಯೂ ಒಪ್ಪೋ ಎಫ್7 ತನ್ನದೇ ಹೆಗ್ಗುರುತನ್ನು ಸ್ಥಾಪಿಸಿಕೊಂಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧಿಕೃತ ಜಾಗತಿಕ ಪಾರ್ಟನರ್ ಆಗಿ, ಬಿಸಿಸಿಐ ಜೊತೆ 5 ವರ್ಷಗಳ ಒಪ್ಪಂದವನ್ನೂ ಒಪ್ಪೋ ಹೊಂದಿದೆ. ಇದೀಗ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ಅಧಿಕೃತ ಪ್ರಾಯೋಜಕತ್ವವನ್ನು ಹೊಂದಿದೆ. ಸದ್ಯಕ್ಕೆ ಎಲ್ಲರ ಕಣ್ಣು ಒಪ್ಪೋ ಎಫ್7 ಮೇಲೆ ನೆಟ್ಟಿದ್ದು, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಧೂಳು ಎಬ್ಬಿಸುವುದರಲ್ಲಿ ಸಂಶಯವೇ ಇಲ್ಲ. ಒಪ್ಪೋ ಎಫ್7 ಲಾಂಚ್ ಮತ್ತಿತರ ಸುದ್ದಿಯ ಬಗ್ಗೆ ಇಲ್ಲಿ ಒಂದು ಕಣ್ಣಿಟ್ಟಿರಿ.

Story first published: Thursday, March 22, 2018, 14:55 [IST]
Other articles published on Mar 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X