ಈ ಬಲಿಷ್ಠ ತಂಡ ಟಿಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆದ್ದೇ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ ಪಾರ್ಥಿವ್ ಪಟೇಲ್

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿಯಾಗಿ ಚರ್ಚೆಗೀಡಾಗಿರುವ ವಿಷಯವೆಂದರೆ ಅದು ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ. ಈಗಾಗಲೇ ಈ ಸರಣಿಯ ಮೊದಲ 3 ಪಂದ್ಯಗಳು ಮುಗಿದಿದ್ದು ಇಂಗ್ಲೆಂಡ್ ಮತ್ತು ಭಾರತ ತಂಡಗಳೆರಡೂ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 1-1 ಸಮಬಲವನ್ನು ಸಾಧಿಸಿವೆ.

ಕಳಪೆ ಪ್ರದರ್ಶನ ನೀಡಿದರೂ ಆ ಒಬ್ಬನಿಗೆ ತಂಡದಲ್ಲಿ ಸ್ಥಾನ; ನಾಲ್ಕನೇ ಟೆಸ್ಟ್‌ಗೆ ವಿವಿಎಸ್ ಲಕ್ಷ್ಮಣ್ ಸಲಹೆಕಳಪೆ ಪ್ರದರ್ಶನ ನೀಡಿದರೂ ಆ ಒಬ್ಬನಿಗೆ ತಂಡದಲ್ಲಿ ಸ್ಥಾನ; ನಾಲ್ಕನೇ ಟೆಸ್ಟ್‌ಗೆ ವಿವಿಎಸ್ ಲಕ್ಷ್ಮಣ್ ಸಲಹೆ

ಇತ್ತೀಚಿಗಷ್ಟೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ 76 ರನ್‌ಗಳ ಇನ್ನಿಂಗ್ಸ್ ಗೆಲುವನ್ನು ದಾಖಲಿಸಿತ್ತು. ಹೀಗೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಅಮೋಘ ಗೆಲುವು ಸಾಧಿಸುವುದರ ಮೂಲಕ ಸರಣಿಯಲ್ಲಿ ಗೆಲುವಿನ ಖಾತೆ ತೆರೆದ ಇಂಗ್ಲೆಂಡ್ ತಂಡ ಸಮಬಲವನ್ನು ಸಾಧಿಸಿತು. ಎರಡೂ ತಂಡಗಳು ಸರಣಿಯಲ್ಲಿ ಸಮಬಲ ಸಾಧಿಸಿದ ನಂತರ ಇದೀಗ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಕುರಿತು ನಿರೀಕ್ಷೆ ಮತ್ತು ಕುತೂಹಲಗಳು ದುಪ್ಪಟ್ಟಾಗಿವೆ.

ಭಾರತ vs ಇಂಗ್ಲೆಂಡ್: ನಾಲ್ಕನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಕಹಿ ಸುದ್ದಿಭಾರತ vs ಇಂಗ್ಲೆಂಡ್: ನಾಲ್ಕನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಕಹಿ ಸುದ್ದಿ

ಹೀಗಾಗಿ ಈ ಪಂದ್ಯದ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರೀಡಾ ಪಂಡಿತರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಇದೀಗ ಭಾರತದ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಕೂಡ ಈ ಸರಣಿಯ ಕುರಿತು ಮಾತನಾಡಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಕುರಿತು ಮಾತನಾಡಿದ ಪಾರ್ಥಿವ್ ಪಟೇಲ್ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡ ಗೆಲ್ಲಲಿದೆ ಎನ್ನುವ ಕುರಿತೂ ಕೂಡ ತಮ್ಮ ಅಭಿಪ್ರಾಯವನ್ನು ಈ ಕೆಳಕಂಡ ಹಾಗೆ ವ್ಯಕ್ತಪಡಿಸಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ಪಾರ್ಥಿವ್ ಪಟೇಲ್

ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ಪಾರ್ಥಿವ್ ಪಟೇಲ್

ಯುಎಇಯಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಕುರಿತು ಮಾತನಾಡಿರುವ ಪಾರ್ಥಿವ್ ಪಟೇಲ್ ಟೀಮ್ ಇಂಡಿಯಾ ಟೂರ್ನಿಯಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಇರುವ ಟೀಮ್ ಇಂಡಿಯಾ ಅತ್ಯಂತ ಬಲಿಷ್ಠವಾಗಿದೆ, ಮುಂದಿನ ಹತ್ತು ವರ್ಷಗಳ ಕಾಲ ಈಗಿರುವ ಟೀಮ್ ಇಂಡಿಯಾ ಕ್ರಿಕೆಟ್ ಜಗತ್ತನ್ನು ಆಳ್ವಿಕೆ ಮಾಡಲಿದೆ, ಮುಂಬರುವ ಹಲವಾರು ಐಸಿಸಿ ಟ್ರೋಫಿಗಳನ್ನು ಈ ತಂಡ ಗೆದ್ದು ಬೀಗಲಿದೆ ಹಾಗೂ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಸಹ ಭಾರತ ತಂಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪಾರ್ಥಿವ್ ಪಟೇಲ್ ಭವಿಷ್ಯ ನುಡಿದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲಲಿದೆ ಟೀಮ್ ಇಂಡಿಯಾ

ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲಲಿದೆ ಟೀಮ್ ಇಂಡಿಯಾ

ಟಿ ಟ್ವೆಂಟಿ ವಿಶ್ವಕಪ್ ಕುರಿತು ಮಾತನಾಡಿದ ಪಾರ್ಥಿವ್ ಪಟೇಲ್ ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಕುರಿತು ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಸರಣಿಯನ್ನು ಟೀಮ್ ಇಂಡಿಯಾ ತನ್ನ ಕೈವಶ ಮಾಡಿಕೊಳ್ಳಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಈ ಮೂವರ ನಡುವಿನ ರೋಚಕ ಫೈಟ್ ನೋಡೋದೇ ಸಖತ್ ಮಜಾ | Oneindia Kannada
ವರ್ಷದಿಂದ ವರ್ಷಕ್ಕೆ ಟೀಮ್ ಇಂಡಿಯಾ ಬಲಶಾಲಿಯಾಗುತ್ತಿದೆ

ವರ್ಷದಿಂದ ವರ್ಷಕ್ಕೆ ಟೀಮ್ ಇಂಡಿಯಾ ಬಲಶಾಲಿಯಾಗುತ್ತಿದೆ

ಇನ್ನು ಕ್ರಿಕೆಟ್ ಜಗತ್ತಿನಲ್ಲಿ ಭಾರತ ತಂಡದ ಪಾರುಪತ್ಯದ ಕುರಿತು ಮಾತನಾಡಿರುವ ಪಾರ್ಥಿವ್ ಪಟೇಲ್ ಕಳೆದ ದಶಕಕ್ಕೆ ಹೋಲಿಸಿದರೆ ಪ್ರಸ್ತುತ ಇರುವ ಭಾರತ ತಂಡ ತುಂಬಾ ಬಲಿಷ್ಠವಾಗಿದೆ ಮತ್ತು ಇತರರ ಮೇಲೆ ಒತ್ತಡ ಹೇರುವಂತಹ ಆಟಗಾರರಿದ್ದಾರೆ ಎಂದು ಪ್ರಸ್ತುತ ಇರುವ ಟೀಮ್ ಇಂಡಿಯಾವನ್ನು ಕೊಂಡಾಡಿದ್ದಾರೆ. 2000ನೇ ವರ್ಷದ ಸಮಯದಲ್ಲಿ ಇದ್ದ ಟೀಮ್ ಇಂಡಿಯಾ, 2010ರಲ್ಲಿ ಇದ್ದ ಟೀಮ್ ಇಂಡಿಯಾ ಹಾಗೂ ಪ್ರಸ್ತುತ ಇರುವ ಟೀಮ್ ಇಂಡಿಯಾಗೂ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ತಂಡ ಎಷ್ಟು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಹೊಂದಿದೆ ಎಂಬುದು ತಿಳಿಯುತ್ತದೆ ಎಂದು ಪಾರ್ಥಿವ್ ಪಟೇಲ್ ಟೀಮ್ ಇಂಡಿಯಾ ಬಲಿಷ್ಠವಾಗಿ ಬೆಳೆಯುತ್ತಾ ಹೋಗುತ್ತಿದೆ ಎಂದಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Thursday, September 2, 2021, 15:06 [IST]
Other articles published on Sep 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X