ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ಸೋಲಿಗೆ ನಿಂದನೆ: ಕಮ್ರಾನ್ ಅಕ್ಮಲ್‌ಗೆ ಪಿಸಿಬಿ ನೋಟಿಸ್

Kamran akmal

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆದಂತಹ ಪಾಕಿಸ್ತಾನ ತಂಡವು ಇಡೀ ಟೂರ್ನಮೆಂಟ್‌ನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿತು. ಅದೃಷ್ಟದ ಜೊತೆಗೆ ಕಠಿಣ ಪ್ರಯತ್ನದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿದ್ದ ಪಾಕಿಸ್ತಾನ ತಂಡವು ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶವನ್ನ ಕಳೆದುಕೊಂಡಿತು.

ಪಾಕಿಸ್ತಾನ ಸೋಲಿನ ಬಳಿಕ ಸಾಕಷ್ಟು ಟೀಕೆಗಳು ಕೇಳಿಬಂದಿದ್ದು, ಮಾಜಿ ಕ್ರಿಕೆಟಿಗರು ಸಾಕಷ್ಟು ಟೀಕಿಸಿದ್ದಾರೆ. ಮಾಜಿ ನಾಯಕ ಶಾಹಿದ್ ಅಫ್ರಿದಿ, ಬಾಬರ್ ಅಜಂ ಟಿ20 ನಾಯಕತ್ವ ಬಿಟ್ಟುಕೊಡಲಿ ಎಂದೆಲ್ಲಾ ಸಲಹೆ ನೀಡಿದ್ದಾರೆ. ಇದೇ ವೇಳೆಯಲ್ಲಿ ಪಾಕ್ ತಂಡದ ವಿರುದ್ಧ ಕಟುವಾಗಿ ಮಾತನಾಡಿದ್ದ ಮಾಜಿ ಆಟಗಾರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್‌ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (ಪಿಸಿಬಿ) ಅಧ್ಯಕ್ಷ ಲೀಗಲ್ ನೋಟಿಸ್ ನೀಡುವ ಮೂಲಕ ಕಿಡಿಕಾರಿದ್ದಾರೆ.

ಲೈಂಗಿಕ ದೌರ್ಜನ್ಯ: 11 ದಿನ ಪೊಲೀಸ್‌ ಕಸ್ಟಡಿಯಲ್ಲಿ ಕಳೆದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕಗೆ, ಜಾಮೀನು ಮಂಜೂರುಲೈಂಗಿಕ ದೌರ್ಜನ್ಯ: 11 ದಿನ ಪೊಲೀಸ್‌ ಕಸ್ಟಡಿಯಲ್ಲಿ ಕಳೆದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕಗೆ, ಜಾಮೀನು ಮಂಜೂರು

ಪಾಕಿಸ್ತಾನ ತಂಡದ ವಿರುದ್ಧ ಮಾನಹಾನಿಕರ, ಸುಳ್ಳು ಮತ್ತು ಆಕ್ಷೇಪಾರ್ಹ ಟೀಕೆಗಳನ್ನ ಮಾಡಿರುವ ಕಮ್ರಾನ್ ಅಕ್ಮಲ್‌ಗೆ ಲೀಗಲ್ ನೋಟಿಸ್ ನೀಡುವ ಮೂಲಕ PCB ಬಿಸಿ ಮುಟ್ಟಿಸಿದೆ. ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಹಾಗೂ ನಾಯಕ ಬಾಬರ್ ಅಜಮ್ ಹಾಗೂ ಪಿಸಿಬಿ ಅಧ್ಯಕ್ಷರ ವಿರುದ್ಧ ಕಟುವಾಗಿ ಟೀಕಿಸಿದ್ದರು.

ಏಷ್ಯಾಕಪ್‌ ಫೈನಲ್‌ನಲ್ಲಿ ಮುಗ್ಗರಿಸದ ಬೆನ್ನಲ್ಲೇ ಬಾಬರ್ ಅಜಮ್ ವಿಶ್ವಕಪ್ ಫೈನಲ್‌ನಲ್ಲಿ ಸೋಲನ್ನ ಅನುಭವಿಸಿದ್ದು ಹೆಚ್ಚಿನ ಟೀಕೆಗೆ ಕಾರಣವಾಗಿದೆ.

'' ಕಮ್ರಾನ್ ಅಕ್ಮಲ್ ವಿರುದ್ಧ ಅವರು ಯಾವ ರೀತಿಯಾದ ಆರೋಪಗಳನ್ನು ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದ್ರೆ ಲೀಗಲ್ ನೋಟಿಸ್ ಕೊಡಲಾಗಿದ್ದು, ಏಕೆಂದರೆ ಅವರ ವಿರುದ್ಧ(ರಮೀಜ್ ರಾಜಾ) ಕಮ್ರಾನ್ ಮಾನಹಾನಿಕರ, ಸುಳ್ಳು ಮತ್ತು ಆಕ್ಷೇಪಾರ್ಹ ಟೀಕೆಗಳನ್ನ ಮಾಡಿದ್ದಾರೆ'' ಎಂದು ಮೂಲಗಳು ಕ್ರಿಕ್‌ ಕ್ಯಾಕರ್‌ಗೆ ತಿಳಿಸಿವೆ ಎಂದು ವರದಿಯಾಗಿದೆ.

ಪಿಸಿಬಿ ಕಾನೂನು ತಜ್ಞರ ತಂಡವು ಕಮ್ರಾನ್ ವಿರುದ್ಧ ಮಾನಹಾರಿ ಹಾಗೂ ಸುಳ್ಳು ಸುದ್ದಿ, ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಲಹೆ ನೀಡಿದೆ. ವರದಿಯ ಪ್ರಕಾರ ಪಾಕಿಸ್ತಾನ ಕ್ರಿಕೆಟ್ ಹಾಗೂ ಅಧ್ಯಕ್ಷರ ವಿರುದ್ಧ ಈ ರೀತಿಯಾದ ಹೇಳಿಕೆ ನೀಡುವ ಎಲ್ಲಾ ಕ್ರಿಕೆಟಿಗರು ಇದೇ ಪಾಠ ಕಲಿಸಲು ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.

''ಕೆಲವರು ತಮ್ಮ ಮಿತಿಯನ್ನು ಮೀರಿ ತಂಡದ ವಿರುದ್ಧ, ಮ್ಯಾನೇಜ್‌ಮೆಂಟ್, ಬೋರ್ಡ್ ಮತ್ತು ಚೇರ್‌ಮನ್ ವಿರುದ್ಧ ಟೀಕಿಸುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ಗೆ ಹಾನಿಯುಂಟು ಮಾಡುವ ಇಂತವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ರಮೀಜ್ ರಾಜಾ ಮುಂದಾಗಿದ್ದಾರೆ'' ಎಂದು ಮೂಲಗಳು ತಿಳಿಸಿವೆ.

ಬಾಬರ್ ನಾಯಕತ್ವದಲ್ಲಿ ಮೂರು ತಿಂಗಳ ಅವಧಿಯಲ್ಲಿ ಎರಡು ಮಹತ್ವದ ಟೂರ್ನಿಗಳಲ್ಲಿ ಪಾಕಿಸ್ತಾನವು ಫೈನಲ್‌ನಲ್ಲಿ ಸೋಲನ್ನು ಅನುಭವಿಸಿದೆ. ಜೊತೆಗೆ ನಾಯಕ ಬಾಬರ್ ಕೂಡ ಫಾರ್ಮ್‌ ವೈಫಲ್ಯ ಅನುಭವಿಸಿದ್ದಾರೆ.

Story first published: Thursday, November 17, 2022, 20:42 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X