ಐಪಿಎಲ್ ಬಗ್ಗೆ ರಜನಿ ಬೇಸರ, ಚೆನ್ನೈ ಆಟಗಾರರಿಗೆ ಸಲಹೆ

Posted By:
Rajinikanth on IPL : CSK and fans should wear black band

ಚೆನ್ನೈ, ಏಪ್ರಿಲ್ 08: ಕಾವೇರಿ ನದಿ ವಿವಾದ ಉಲ್ಬಣವಾಗಿರುವ ಈ ಸಂದರ್ಭದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿ ನಡೆಸುತ್ತಿರುವುದರ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಭಾನುವಾರದಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆ ಕುರಿತಂತೆ ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಐಪಿಎಲ್ ಆಡುತ್ತಿರುವುದು ಮುಜುಗರದ ವಿಷಯ ಎಂದಿದ್ದಾರೆ.

ಐಪಿಎಲ್ ವಿಶೇಷ ಪುಟ | ಚೆನ್ನೈ ತಂಡ| ಚೆನ್ನೈ ವೇಳಾಪಟ್ಟಿ

ಐಪಿಎಲ್ 2018ರಲ್ಲಿ ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಹಾಗೂ ತಂಡದ ಸಮಸ್ತರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಬೇಕು.

ಇದು ತಂಡದ ಅಭಿಮಾನಿಗಳಿಗೂ ಅನ್ವಯವಾಗಲಿದೆ. ಈ ಮೂಲಕ ಕಾವೇರಿ ನದಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಬೇಕು ಎಂದು ರಜನಿಕಾಂತ್ ಅವರು ಹೇಳಿದ್ದಾರೆ.

ತಮಿಳುನಾಡಿನ ಕಲಾವಿದರ ಸಂಘದ ವತಿಯಿಂದ ನಡೆದಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರಜನಿ, ನೈಸರ್ಗಿಕ ಸಂಪತ್ತು ನಾಶವಾಗಲು ಸರ್ಕಾರ ಬಿಡಬಾರದು, ಸರಿಯಾದ ಹಂಚಿಕೆ ಸಿಗುವ ತನಕ ಹೋರಾಟ ಮುಂದುವರೆಸಬೇಕು ಎಂದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 8, 2018, 13:20 [IST]
Other articles published on Apr 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ