ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಅವನ ಆಟ ನೋಡಲು ಖುಷಿ' ಅಂತ ತೆಂಡೂಲ್ಕರ್ ಹೇಳಿದ್ಯಾರಿಗೆ ಗೊತ್ತಾ?!

Sachin Tendulkar posts special praise for young star after historic win

ಮುಂಬೈ, ಸೆಪ್ಟೆಂಬರ್ 3: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 2-0ಯಿಂದ ಕ್ಲೀನ್‌ ಸ್ವೀಪ್‌ಗೊಳಿಸಿದೆ. ಸೋಮವಾರ (ಸೆಪ್ಟೆಂಬರ್ 2) ನಡೆದ ದ್ವಿತೀಯ ಮತ್ತು ಕೊನೆಯ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಪಡೆ 257 ರನ್‌ಗಳ ಭರ್ಜರಿ ಗೆಲುವನ್ನಾಚರಿಸಿತ್ತು. ಎದುರಾಳಿ ವಿರುದ್ಧ ಮಾರಕ ಬೌಲಿಂಗ್ ನಡೆಸಿದ್ದ ಜಸ್‌ಪ್ರೀತ್‌ ಬೂಮ್ರಾ ಭಾರತದ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು.

Test Ranking: ವಿರಾಟ್ ಕೊಹ್ಲಿಯಿಂದ ನಂ.1 ಸ್ಥಾನ ಕಸಿದುಕೊಂಡ ಸ್ಮಿತ್!Test Ranking: ವಿರಾಟ್ ಕೊಹ್ಲಿಯಿಂದ ನಂ.1 ಸ್ಥಾನ ಕಸಿದುಕೊಂಡ ಸ್ಮಿತ್!

25ರ ಹರೆಯದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ. ಕ್ರಿಕೆಟ್‌ನಲ್ಲಿ ಬೂಮ್ರಾ ಭಯಂಕರವಾಗಿ ಬೆಳೆಯುತ್ತಿದ್ದಾರೆ ಎಂದು ಸಚಿನ್ ಹೇಳಿದ್ದಾರೆ. ವಿಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಗೆದ್ದ ಬಳಿಕ, ಸಚಿನ್ ಮಾಡಿರುವ ಟ್ವೀಟ್ ಗಮನ ಸೆಳೆಯುವಂತಿದೆ.

ಟೀಮ್ ಇಂಡಿಯಾಕ್ಕೆ ಅಭಿನಂದನೆ

ಟೀಮ್ ಇಂಡಿಯಾಕ್ಕೆ ಅಭಿನಂದನೆ

ಮಂಗಳವಾರ (ಸೆಪ್ಟೆಂಬರ್ 3) ಟ್ವೀಟ್ ಮಾಡಿರುವ ಲಿಟ್ಲ್‌ಮಾಸ್ಟರ್, 'ಅದ್ಭುತ ಸರಣಿ ಜಯಕ್ಕೆ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ಈ ಸರಣಿಯಲ್ಲಿ ಜಸ್‌ಪ್ರೀತ್ ಬೂಮ್ರಾ ಆಟ ನೋಡಲು ಖುಷಿಯಾಗಿದೆ. ಆತನ ಹ್ಯಾಟ್ರಿಕ್ ವಿಕೆಟ್ ಸಾಧನೆ ವಿಶೇಷವಾದುದು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈತ ಬೆಳೆಯುತ್ತಿರುವ ಪರಿ ನಿಜಕ್ಕೂ ಭಯಂಕರವಾಗಿದೆ,' ಎಂದು ಬರೆದುಕೊಂಡಿದ್ದಾರೆ.

ಬೂಮ್ರಾ ಹ್ಯಾಟ್ರಿಕ್ ವಿಕೆಟ್

ಬೂಮ್ರಾ ಹ್ಯಾಟ್ರಿಕ್ ವಿಕೆಟ್

ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 27 ರನ್‌ ನೀಡಿ 6 ವಿಕೆಟ್ ಉರುಳಿಸಿದ್ದ ಬೂಮ್ರಾ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದು ಕೆರಿಬಿಯನ್ನರನ್ನು ಕಾಡಿದ್ದರು. ಪಂದ್ಯದ 8.2, 8.3, 8.4ನೇ ಓವರ್‌ನಲ್ಲಿ ಬೂಮ್ರಾ ಕ್ರಮವಾಗಿ ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್ ವಿಕೆಟ್‌ಗಳನ್ನು ಮುರಿದಿದ್ದರು.

ಹನುಮ ವಿಹಾರಿ ಶತಕ

ಹನುಮ ವಿಹಾರಿ ಶತಕ

ದ್ವಿತೀಯ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ, ಹನುಮ ವಿಹಾರಿ ಶತಕ (111 ರನ್‌)ದೊಂದಿಗೆ 416 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ 64, ಹನುಮ ವಿಹಾರಿ 53 ರನ್ ಸೇರ್ಪಡೆಯೊಂದಿಗೆ 168 ರನ್‌ ಗಳಿಸಿದರೆ, ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 117, ದ್ವಿತೀಯ ಇನ್ನಿಂಗ್ಸ್‌ನಲ್ಲಿ 210 ರನ್‌ ಬಾರಿಸಿ ಶರಣಾಗಿತ್ತು.

ಒಂದೂ ಪಂದ್ಯ ಗೆಲ್ಲದ ವಿಂಡೀಸ್

ಒಂದೂ ಪಂದ್ಯ ಗೆಲ್ಲದ ವಿಂಡೀಸ್

ವೆಸ್ಟ್ ಇಂಡೀಸ್‌ಗೆ ಭಾರತದ ಪ್ರವಾಸ ಸರಣಿಯಲ್ಲಿ ಆತಿಥೇಯ ವಿಂಡೀಸ್ ಒಂದೂ ಪಂದ್ಯ ಗೆಲ್ಲದೆ ಮುಖಭಂಗಕ್ಕೀಡಾಗಿದೆ. ಈ ಪ್ರವಾಸದಲ್ಲಿ ಭಾರತ, 3 ಪಂದ್ಯಗಳ ಟಿ20 ಸರಣಿಯನ್ನು 3-0ಯಿಂದ, 3 ಪಂದ್ಯಗಳ ಏಕದಿನದಲ್ಲಿ 2-0 (1 ಪಂದ್ಯ ರದ್ದು), 2 ಪಂದ್ಯಗಳ ಟೆಸ್ಟ್‌ನಲ್ಲಿ 2-0ಯ ಗೆಲುವು ದಾಖಲಿಸಿದೆ.

Story first published: Tuesday, September 3, 2019, 18:15 [IST]
Other articles published on Sep 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X