ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಚಿಕೆಗೇಡು: ಸಚಿನ್ ಭಕ್ತನ ಮೇಲೆ ಬಾಂಗ್ಲಾ 'ಟೈಗರ್ಸ್' ದಾಳಿ

By Mahesh

ಮೀರ್ ಪುರ್ (ಬಾಂಗ್ಲಾದೇಶ), ಜೂ.22: ಬಾಂಗ್ಲಾದೇಶ ಪ್ರವಾಸದಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನದ ನೋವಿನಲ್ಲಿ ಅಭಿಮಾನಿಗಳಿದ್ದಾರೆ. ಇದರ ನಡುವೆ ಗಾಯಕ್ಕೆ ಉಪ್ಪು ಸುರಿದಂತೆ ಭಾರತದ ಹೆಮ್ಮೆಯ ಕ್ರಿಕೆಟ್ ಅಭಿಮಾನಿ, ಮಾಜಿ ನಾಯಕ, ದಿಗ್ಗಜ ಸಚಿನ್ ಅವರ ಪರಮಭಕ್ತನ ಮೇಲೆ ಹುಲಿಗಳಂತೆ ಬಾಂಗ್ಲಾ ಅಭಿಮಾನಿಗಳು ಎರಗಿದ ಘಟನೆ ನಡೆದಿದೆ.

ಸಚಿನ್ ತೆಂಡೂಲ್ಕರ್ ಅವರ ಅಪ್ಪಟ ಅಭಿಮಾನಿ ಸುಧೀರ್ ಗೌತಮ್ ಮೇಲೆ ಹಲ್ಲೆಯಾಗಿದೆ. ಷೇರ್ ಇ ಬಾಂಗ್ಲಾ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯ ನೋಡುತ್ತಿದ್ದ ಸುಧೀರ್ ಅವರು ಟೀಂ ಇಂಡಿಯಾದ ನಿರಾಶಾದಾಯಕ ಪ್ರದರ್ಶನ ನಂತರ ಸ್ಟೇಡಿಯಂ ಬಿಟ್ಟು ಹೊರ ನಡೆಯುತ್ತಿದ್ದಂತೆ ಅವರ ಮೇಲೆ ಬಾಂಗ್ಲಾದ ಕಿಡಿಗೇಡಿ ಅಭಿಮಾನಿಗಳು ದಾಳಿ ಮಾಡಿದ್ದಾರೆ. []

ಸಚಿನ್ ನಿವೃತ್ತಿ ನಂತರ ಭಾರತದ ಪಂದ್ಯ ನೋಡಲು ಹೋಗುವುದಿಲ್ಲ ಎನ್ನುತ್ತಿದ್ದ ಸುಧೀರ್ ಗೆ ಪ್ರೋತ್ಸಾಹದ ನುಡಿಗಳನ್ನಾಡಿ ಎಲ್ಲಾ ಪಂದ್ಯವನ್ನು ವೀಕ್ಷಿಸುವಂತೆ ಮಾಡಿದ್ದರು. ಅದರಂತೆ ಧೋನಿ ಹಾಗೂ ತಂಡವನ್ನು ಹುರಿದುಂಬಿಸಲು ಎಂದಿನಂತೆ ತ್ರಿವರ್ಣ ಧ್ವಜವನ್ನು ಹಿಡಿದು ಅದೇ ಬಣ್ಣವನ್ನು ಬಳಿದುಕೊಂಡು ಸುಧೀರ್ ಸ್ಟೇಡಿಯಂನಲ್ಲಿದ್ದರು. [ಏಕದಿನ ಕ್ರಿಕೆಟ್ ಸರಣಿಗೆ ಗೈಡ್]

ಅದರೆ, ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಸೋಲು ಅನುಭವಿಸಿದ್ದಲ್ಲದೆ, ಸರಣಿಯನ್ನು ಬಿಟ್ಟುಕೊಟ್ಟಿತು. ಬಾಂಗ್ಲಾ 2-0 ಅಂತರದಿಂದ ಸರಣಿ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ರಸ್ತೆಗಿಳಿದು ಹುಚ್ಚಾಟವಾಡಿದ್ದಾರೆ.[ಹಳದಿ ಕಪ್ಪು ಮಿಂಚಿನ ಹೊಡೆತಕ್ಕೆ ಟೀಂ ಇಂಡಿಯಾ ಬಲಿ]

ಪಂದ್ಯ ಮುಗಿದ ಮೇಲೆ ಸ್ಟೇಡಿಯಂನಿಂದ ಹೊರಕ್ಕೆ ಬಂದ ಸುಧೀರ್ ಅವರು ಅಟೋರಿಕ್ಷಾ ಹತ್ತುವಾಗ ಬಾಂಗ್ಲಾ ಅಭಿಮಾನಿಗಳು ಸುಧೀರ್ ರನ್ನು ತಡೆದು ನಿಲ್ಲಿಸಿದ್ದಾರೆ. ಕೆಲವರು ಸುಧೀರ್ ಮೇಲೆ ಕಲ್ಲು ಎಸೆದಿದ್ದಾರೆ. [ಎಡಗೈ ವೇಗಿಗೆ ಎಡಗೈಲಿ ಗುದ್ದಿದ ಧೋನಿಗೆ ದಂಡ]

ತಮಗಾದ ಅನುಭವ ಬಿಚ್ಚಿಟ್ಟ ಸುಧೀರ್

ತಮಗಾದ ಅನುಭವ ಬಿಚ್ಚಿಟ್ಟ ಸುಧೀರ್

ಪಂದ್ಯ ಮುಗಿದ ಮೇಲೆ ಸ್ಟೇಡಿಯಂನಿಂದ ಹೊರಕ್ಕೆ ಬಂದ ಸುಧೀರ್ ಅವರು ಅಟೋರಿಕ್ಷಾ ಹತ್ತುವಾಗ ಬಾಂಗ್ಲಾ ಅಭಿಮಾನಿಗಳು ಸುಧೀರ್ ರನ್ನು ತಡೆದು ನಿಲ್ಲಿಸಿದ್ದಾರೆ. ಕೆಲವರು ಸುಧೀರ್ ಮೇಲೆ ಕಲ್ಲು ಎಸೆದಿದ್ದಾರೆ. ವಿಶ್ವಕಪ್ 2015 ಟೂರ್ನಿಯಲ್ಲಿ ಮೆಲ್ಬೋರ್ನ್ ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದ ಸೇಡು ತೀರಿಸಿಕೊಂಡಿದ್ದೇವೆ ಎಂದು ಕೂಗುತ್ತಿದ್ದರು.

ಪೊಲೀಸರಿಂದ ರಕ್ಷಣೆ

ಪೊಲೀಸರಿಂದ ರಕ್ಷಣೆ

ನಾನು ಎಲ್ಲೂ ಈ ರೀತಿ ಪ್ರತಿಭಟನೆ, ಹಲ್ಲೆ ಎದುರಿಸಿಲ್ಲ ಎಂದು 34 ವರ್ಷ ವಯಸ್ಸಿನ ಸುಧೀರ್ ನೊಂದು ಎಬಿಪಿ ನ್ಯೂಸ್ ಜೊತೆ ಅನುಭವ ಹಂಚಿಕೊಂಡಿದ್ದಾರೆ. ಹುಚ್ಚು ಅಭಿಮಾನಿಗಳ ಗುಂಪಿನಿಂದ ಸುಧೀರ್ ರನ್ನು ಇಬ್ಬರು ಪೊಲೀಸರು ರಕ್ಷಿಸಿ ಬೇರೆಡೆಗೆ ಕರೆದೊಯ್ದಿದ್ದಾರೆ.

ಭಾರತೀಯ ಕ್ರೀಡಾಭಿಮಾನಿಗಳು ವ್ಯಥೆ

ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲಿ ನಡೆದ ವಿಶ್ವಕಪ್ 2015 ಟೂರ್ನಿ ಸೇರಿದಂತೆ ಎಲ್ಲಾ ಪ್ರಮುಖ ಕ್ರಿಕೆಟ್ ಟೂರ್ನಿಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಜರ್ಸಿ ನಂಬರ್ 10 ಧರಿಸಿಕೊಂಡು ತ್ರಿವರ್ಣ ಧ್ವಜ ಹಿಡಿದುಕೊಂಡು ತಂಡವನ್ನು ಹುರಿದುಂಬಿಸುವ ಸುಧೀರ್ ಗೆ ಈ ರೀತಿ ಕೆಟ್ಟ ಅನುಭವವಾಗಿರುವುದಕ್ಕೆ ಭಾರತೀಯ ಕ್ರೀಡಾಭಿಮಾನಿಗಳು ವ್ಯಥೆ ವ್ಯಕ್ತಪಡಿಸಿದ್ದಾರೆ

ಮಕ್ಕಳಂತೆ ಹುಚ್ಚಾಟವಾಡುವ ಬಾಂಗ್ಲಾದೇಶಿಗಳು

ಮಕ್ಕಳಂತೆ ಹುಚ್ಚಾಟವಾಡುವ ಬಾಂಗ್ಲಾದೇಶಿಗಳು ಇನ್ನಾದರೂ ಪ್ರಬುದ್ಧರಾಗಿ ವರ್ತಿಸಲಿ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X