ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಜೊತೆಗಿನ ಗೆಳೆತನದ ಬಗ್ಗೆ ಶಿಖರ್ ಧವನ್ ಹೇಳಿದ್ದಿಷ್ಟು!

Shikhar Dhawan on friendship with Rohit Sharma said we have very strong bond

ಟೀಮ್ ಇಂಡಿಯಾ ಏಕದಿನ ತಂಡದ ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಸುದೀರ್ಘ ಕಾಲದಿಂದ ಭಾರತ ತಂಡದ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಮೈದಾನದ ಆಚೆಗೂ ಈ ಇಬ್ಬರು ಆಟಗಾರರ ಮಧ್ಯೆ ಅತ್ಯುತ್ತಮ ಬಾಂಧವ್ಯವಿದೆ. ಈ ಗೆಳೆತನದ ಬಗ್ಗೆ ಶಿಖರ್ ಧವನ್ ಪ್ರತಿಕ್ರಿಯೆ ನೀಡಿದ್ದು ಕೆಲ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಭಾರತದ ಎಲ್ಲಾ ಮಾದರಿಯ ನಾಯಕ ರೋಹಿತ್ ಶರ್ಮಾ ಅವರನ್ನು ಶಿಖರ್ ಧವನ್ ಪ್ರಶಂಸಿದ್ದಾರೆ. ಈ ಜೋಡಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 5000ಕ್ಕೂ ಅಧಿಕ ರನ್‌ಗಳ ಜೊತೆಯಾಟವನ್ನು ನೀಡಿದ ಮೈಲಿಗಲ್ಲು ದಾಖಲಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್‌ಗಳ ಜೊತೆಯಾಟದಲ್ಲಿ 7ನೇ ಸ್ಥಾನದಲ್ಲಿದ್ದಾರೆ. 116 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ರೋಹಿತ್ ಶರ್ಮಾ ಹಾಗು ಶಿಖರ್ ಧವನ್ ಜೋಡಿ 5170 ರನ್‌ಗಳ ಜೊತೆಯಾಟ ನೀಡಿದ್ದು 45.35ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 18 ಬಾರಿ ಶತಕದ ಜೊತೆಯಾಟ ನೀಡಿದ್ದಾರೆ.

ಭಾರತ ವಿರುದ್ಧದ ಏಕದಿನ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ: ರೇಗಿಸ್ ಚಕಬ್ವಾ ನಾಯಕಭಾರತ ವಿರುದ್ಧದ ಏಕದಿನ ಸರಣಿಗೆ ಜಿಂಬಾಬ್ವೆ ತಂಡ ಪ್ರಕಟ: ರೇಗಿಸ್ ಚಕಬ್ವಾ ನಾಯಕ

ಮಹತ್ವದ ಮೈಲಿಗಲ್ಲಿನ ಮೇಲೆ ಚಿತ್ತ

ಮಹತ್ವದ ಮೈಲಿಗಲ್ಲಿನ ಮೇಲೆ ಚಿತ್ತ

ಇನ್ನು ಭಾರತದ ಈ ಆರಂಭಿಕ ಜೋಡಿ ಮತ್ತೊಂದು ಮಹತ್ವದ ಮೈಲಿಗಲ್ಲು ದಾಟುವ ಅವಕಾಶ ಹೊಂದಿದ್ದಾರೆ. 37 ರನ್‌ಗಳ ಜೊತೆಯಾಟ ನೀಡಿದರೆ ಜಾರ್ಡನ್ ಗ್ರೀನಿಡ್ಜ್ ಹಾಗೂ ಡೆಸ್ಮಾಂಡ್ ಹೇಯ್ನಿಸ್ ಅವರನ್ನು ಹಿಂದಿಕ್ಕಲಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ಶಿಖರ್ ಧವನ್ ರೋಹಿತ್ ಶರ್ಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಹೆಚ್ಚಾಯ್ತು ಲೀಗ್‌ ಕ್ರಿಕೆಟ್‌ನ ಅಬ್ಬರ: ಬಿಸಿಸಿಐಗೆ ನಿದ್ದೆಗೆಡಿಸಿದೆ ಐಪಿಎಲ್ ಫ್ರಾಂಚೈಸಿಗಳ ಈ ನಡೆ!

ನಮ್ಮ ಮಧ್ಯೆ ಅದ್ಭುತ ಬಾಂಧವ್ಯವಿದೆ

ನಮ್ಮ ಮಧ್ಯೆ ಅದ್ಭುತ ಬಾಂಧವ್ಯವಿದೆ

ಏಕದಿನ ಮಾದರಿಯಲ್ಲಿ ಸಾಧಿಸಿರುವ ಜೊತೆಯಾಟದ ಸಾಧನೆಯ ಬಗ್ಗೆ ಮಾತನಾಡಿದ ಶಿಖರ್ ಧವನ್ "ನಮ್ಮಿಬ್ಬರ ವೃತ್ತಿ ಜೀವನದಲ್ಲಿಯೂ ಇದೊಂದು ಬಹುದೊಡ್ಡ ಮೈಲಿಗಲ್ಲು. 9 ವರ್ಷಗಳಲ್ಲಿ ನಾವು ಅದ್ಭುತವಾದ ಬಾಂಧವ್ಯ ಹಾಗೂ ಗೆಳೆತನವನ್ನು ಹೊಂದಿದ್ದೇವೆ. ನಾವು ಸುದೀರ್ಘ ಕಾಲದಿಂದ ಜೊತೆಯಾಗಿ ಆಡುತ್ತಿದ್ದು ಒಬ್ಬರ ಆಟವನ್ನು ಮತ್ತೊಬ್ಬರು ಚೆನ್ನಾಗಿ ಅರ್ಥೈಸಿಕೊಂಡಿದ್ದೇವೆ. ಅಲ್ಲದೆ ಒಬ್ಬರಿಗೊಬ್ಬರು ಬೆಂಬಲಿಸಿಕೊಂಡು ಮುಂದುವರಿಯುತ್ತೇವೆ. ಆರಂಭಿಕನಾಗಿ ರೋಹಿತ್ ಶರ್ಮಾ ನನಗೆ ಅತ್ಯುತ್ತಮ ಆರಂಭಿಕ ಜೊತೆಗಾರ. ರೋಹಿತ್ ಶರ್ಮಾ ಜೊತೆಗೆ ಮೈಲಿಗಲ್ಲು ಹೊಂದಿರುವುದು ಅತ್ಯಂತ ಖುಷಿ ನೀಡುತ್ತಿದೆ" ಎಂದಿದ್ದಾರೆ.

ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತೀರಾ? ಎಂಬ ಪ್ರಶ್ನೆಗೆ ಬಾಬರ್ ಅಜಮ್ ಉತ್ತರ

ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಧವನ್

ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಧವನ್

ಸದ್ಯ ಭಾರತದ ಏಕದಿನ ತಂಡದಲ್ಲಿ ಮಾತ್ರವೇ ಸ್ಥಾನವನ್ನು ಹೊಂದಿರುವ ಶಿಖರ್ ಧವನ್ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದಾರೆ. ಆರಂಭದಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಗೆ ನಾಯಕನನ್ನಾಗಿ ಶಿಖರ ಧವನ್ ಅವರನ್ನು ಘೋಷಿಸಲಾಗಿತ್ತು. ನಂತರ ಕೆಎಲ್ ರಾಹುಲ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲಾಗಿದ್ದು ಶಿಖರ್ ಧವನ್ ಉಪನಾಯಕನಾಗಿ ತಂಡದಲ್ಲಿರಲಿದ್ದಾರೆ. ಕೆಎಲ್ ರಾಹುಲ್ ಸುಮಾರು ಆರು ತಿಂಗಳ ಬಳಿಕ ಭಾರತ ತಂಡದಲ್ಲಿ ಆಡಲಿದ್ದು ಗಾಯದಿಂದ ಚೇತರಿಸಿಕೊಂಡು ಸಂಪೂರ್ಣವಾಗಿ ಸಜ್ಜಾಗಿದ್ದಾರೆ.

ಭಾರತ ಸ್ಕ್ವಾಡ್ ಹೀಗಿದೆ: ಶಿಖರ್ ಧವನ್, ಕೆಎಲ್ ರಾಹುಲ್(ನಾಯಕ) ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್ , ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.

Story first published: Friday, August 12, 2022, 18:19 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X