ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA, 2nd T20I Snake : ಭಾರತ-ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ಹಾವು

 Snake And Bad Light Interrupted India vs South Africa Match in Barsapara Cricket Stadium

ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿಯ ಎರಡನೇ ಪಂದ್ಯದ ವೇಳೆ ಮೈದಾನದಲ್ಲಿ ಹಾವು ಕಾಣಿಸಿಕೊಂಡಿರುವ ವಿಲಕ್ಷಣ ಘಟನೆ ನಡೆಯಿತು. ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಹಾವೊಂದು ಮೈದಾನಕ್ಕೆ ಪ್ರವೇಶಿಸಿದ್ದರಿಂದ ಕೆಲಕಾಲ ಆತಂಕ ನಿರ್ಮಾಣವಾಗಿತ್ತು. ಒಂದೆರಡು ನಿಮಿಷಗಳ ನಂತರ ಪಂದ್ಯವನ್ನು ಪುನರಾರಂಭಿಸಲಾಯಿತು. ಇನಿಂಗ್ಸ್‌ನ ಏಳನೇ ಓವರ್‌ನ ಆರಂಭದ ವೇಳೆ ಈ ಘಟನೆ ನಡೆದಿದೆ.

ಭಾನುವಾರ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ T20I ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಭಾರತ ವಿರುದ್ಧ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಭಾರತದ ಈ ಬ್ಯಾಟರ್ ವಿಶ್ವಕಪ್‌ನಲ್ಲಿ ಅತ್ಯುತ್ತಮ ಫಿನಿಷರ್ ಆಗಲಿದ್ದಾನೆ ಎಂದ ರವಿಚಂದ್ರನ್ ಅಶ್ವಿನ್ಭಾರತದ ಈ ಬ್ಯಾಟರ್ ವಿಶ್ವಕಪ್‌ನಲ್ಲಿ ಅತ್ಯುತ್ತಮ ಫಿನಿಷರ್ ಆಗಲಿದ್ದಾನೆ ಎಂದ ರವಿಚಂದ್ರನ್ ಅಶ್ವಿನ್

ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕವಿತ್ತು. ಆದರೆ, ಪಂದ್ಯಕ್ಕೆ ಮಳೆ ಯಾವುದೇ ಅಡಚಣೆ ಮಾಡಲಿಲ್ಲ, ಆದರೆ, ಅನಿರೀಕ್ಷಿತ ಅತಿಥಿಯಾಗಿ ಎಂಟ್ರಿ ಕೊಟ್ಟ ಹಾವು ಮಾತ್ರ ಎಲ್ಲರ ಗಮನ ಸೆಳೆಯಿತು.

ಭಾರತದ ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ಮೈದಾನದಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ಪಂದ್ಯ ಸ್ವಲ್ಪ ಹೊತ್ತು ಸ್ಥಗಿತವಾಗಿತ್ತು. ಪಂದ್ಯದ ವೇಳೆ, ದಕ್ಷಿಣ ಆಫ್ರಿಕಾದ ಒಂದಿಬ್ಬರು ಆಟಗಾರರು ಇದನ್ನು ಕೆಎಲ್ ರಾಹುಲ್ ಮತ್ತು ಆನ್-ಫೀಲ್ಡ್ ಅಂಪೈರ್‌ಗಳಿಗೆ ತೋರಿಸಿದರು. ನಂತರ ಮೈದಾನದ ಸಿಬ್ಬಂದಿ ಅಗತ್ಯ ಪರಿಕರಗಳೊಂದಿಗೆ ಧಾವಿಸಿ ಒಂದೆರಡು ನಿಮಿಷದಲ್ಲಿ ಸಮಸ್ಯೆ ಬಗೆ ಹರಿಸಿದರು. ಏತನ್ಮಧ್ಯೆ, ಆಟಗಾರರು ಡ್ರಿಂಕ್ಸ್ ಬ್ರೇಕ್ ತೆಗೆದುಕೊಂಡರು.

 Snake And Bad Light Interrupted India vs South Africa Match in Barsapara Cricket Stadium

ಪಂದ್ಯಕ್ಕೆ ಅಡ್ಡಿಯಾದ ಬೆಳಕಿನ ಸಮಸ್ಯೆ

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಆರಂಭಿಸಿ 2 ಓವರ್ ಮುಗಿದ ನಂತರ ಪಂದ್ಯಕ್ಕೆ ಲೈಟ್‌ಗಳು ಕೈಕೊಟ್ಟಿದ್ದರಿಂದ ಪಂದ್ಯಕ್ಕೆ ಅಡ್ಡಿಪಡಿಸಿದರು. 2.1 ಓವರ್ ನಂತರ ಒಂದು ಟವರ್ ನ ಲೈಟ್‌ಗಳು ಸ್ಥಗಿತ ಆಗಿದ್ದರಿಂದ ಪಂದ್ಯ 15 ನಿಮಿಷಗಳ ಕಾಲ ಸ್ಥಗಿತವಾಗಿತ್ತು.

15 ನಿಮಿಗಳಲ್ಲಿ ಸಿಬ್ಬಂದಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದರು. ನಂತರ ಪಂದ್ಯವನ್ನು ಮುಂದುವರೆಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ನೆರವಿನಿಂದ 237 ರನ್ ಕಲೆ ಹಾಕಿತು.

 Snake And Bad Light Interrupted India vs South Africa Match in Barsapara Cricket Stadium

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಾಹರ್

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಿಯನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎಂಗಿಡಿ, ಅನ್ರಿಚ್ ನಾರ್ಟ್ಜೆ

Story first published: Monday, October 3, 2022, 10:27 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X