ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

6 ವರ್ಷಗಳ ಬಳಿಕ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿದ ಭಾರತ

Team india

ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಟೀಂ ಇಂಡಿಯಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿದೆ. ವಿಂಡೀಸ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನ ಭಾರತ 3-0 ಅಂತರದಲ್ಲಿ ಗೆಲ್ಲುವ ಮೂಲಕ ವೈಟ್‌ವಾಶ್ ಮಾಡಿತು.

ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 17 ರನ್‌ಗಳ ಜೊತೆಗೆ, ಸರಣಿಯನ್ನ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಏಕದಿನ ಕ್ರಿಕೆಟ್‌ ಸರಣಿ ಜೊತೆಗೆ ಟಿ20 ಸರಣಿಯಲ್ಲೂ ವಿಂಡೀಸ್ ಪಡೆಯನ್ನ ಭಾರತ ವೈಟ್‌ವಾಶ್ ಮಾಡಿದೆ.

IPLಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಆಘಾತ: 14 ಕೋಟಿಗೆ ಹರಾಜಾಗಿದ್ದ ದೀಪಕ್ ಚಹಾರ್‌ಗೆ ಗಾಯIPLಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಆಘಾತ: 14 ಕೋಟಿಗೆ ಹರಾಜಾಗಿದ್ದ ದೀಪಕ್ ಚಹಾರ್‌ಗೆ ಗಾಯ

ಇದಕ್ಕೂ ಮೊದಲು ಟೀಂ ಇಂಡಿಯಾದ ನಾಯಕನಾದ ಬಳಿಕ ಮೊದಲ ಚುಟುಕು ಸರಣಿಯನ್ನ ಎದುರಿಸಿದ ರೋಹಿತ್ ಶರ್ಮಾ ನಾಯಕತ್ವದ ಭಾರತ ನ್ಯೂಜಿಲೆಂಡ್ ವಿರುದ್ಧವೂ 3-0 ಅಂತರದಲ್ಲಿ ಸರಣಿಯನ್ನ ಗೆದ್ದು ಬೀಗಿತು. ರೋಹಿತ್ ನಾಯಕನಾದ ಬಳಿಕ ಸತತ ಎರಡನೇ ಟಿ20 ಸರಣಿಯಲ್ಲಿ ಎದುರಾಳಿಯನ್ನ ಭಾರತ ವೈಟ್‌ವಾಶ್ ಮಾಡಿದೆ.

ವೆಸ್ಟ್ ಇಂಡೀಸ್ ತಂಡವನ್ನ ಮೂರು ಟಿ20 ಪಂದ್ಯದಲ್ಲೂ ಸೋಲಿಸಿದ ಬಳಿಕ ಸತತ 9ನೇ ಟಿ20 ಪಂದ್ಯವನ್ನ ಜಯಿಸಿದ ಸಾಧನೆ ಮಾಡಿದೆ. ಈ ಹಿಂದೆ ಭಾರತ 2022ರ ಜನವರಿಯಿಂದ ಡಿಸೆಂಬರ್‌ವರೆಗೆ 9 ಟಿ20 ಪಂದ್ಯಗಳನ್ನ ಗೆದ್ದಿತ್ತು. ಆದ್ರೀಗ ಮತ್ತೊಮ್ಮೆ ಆ ಸಾಧನೆ ಮಾಡಿದ್ದು 2021 ನವೆಂಬರ್‌ನಿಂದ ಪ್ರಸ್ತುತ ಫೆಬ್ರವರಿ 2022ರ ಅವಧಿಯಲ್ಲಿ ಭಾರತ 9 ಟಿ20 ಪಂದ್ಯವನ್ನ ಸತತವಾಗಿ ಗೆದ್ದು ತೋರಿಸಿದೆ. ಇದಲ್ಲದೆ ಭಾರತ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನವನ್ನ ಪಡೆದಿದೆ.

ಫೆಬ್ರವರಿ 12, 2016 ರಿಂದ ಮೇ 3, 2016 ರವರೆಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು ಈ ಹಿಂದೆ ನಂ. 1 ಆಗಿತ್ತು.

ಭಾರತ 39 ಪಂದ್ಯಗಳಿಂದ 10484 ಪಾಯಿಂಟ್ಸ್ ಕಲೆಹಾಕಿ ಒಟ್ಟು 269 ರೇಟಿಂಗ್‌ಗಳನ್ನ ಪಡೆದಿದೆ. ಅದೇ ಇಂಗ್ಲೆಂಡ್ ತಂಡವು ಕೂಡ 39 ಪಂದ್ಯಗಳಲ್ಲಿ 10474 ಪಾಯಿಂಟ್ಸ್‌ ಪೆಡದು ಒಟ್ಟು 269 ರೇಟಿಂಗ್‌ಗಳನ್ನ ಪಡೆದಿದ್ದು ಕೂದಲೆಳೆ ಅಂತರದಲ್ಲಿ ನಂಬರ್ ಒನ್ ಸ್ಥಾನ ಬಿಟ್ಟುಕೊಟ್ಟಿದೆ.

ಮೂರು ಮತ್ತು ನಾಲ್ಕನೇ ಸ್ಥಾನವನ್ನ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಅಲಂಕರಿಸಿದ್ದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಐದು ಮತ್ತು ಆರನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಭಾರತದೆದುರು ಹೀನಾಯ ಸೋಲು ಕಂಡ ವಿಂಡೀಸ್ ಏಳನೇ ಸ್ಥಾನದಲ್ಲಿದೆ.

Story first published: Monday, February 21, 2022, 15:06 [IST]
Other articles published on Feb 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X