ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಟೆಸ್ಟ್: ಮೊದಲ ದಿನದಾಂತ್ಯಕ್ಕೆ ಭಾರತ 371ಕ್ಕೆ 4

ನವದೆಹಲಿ, ಡಿಸೆಂಬರ್ 02 : ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 371 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

ಮುರುಳಿ ವಿಜಯ್ 155, ರಹಾನೆ 01, ಶಿಖರ್ ಧವನ್ 23 ಹಾಗೂ ಚೇತೇಶ್ವರ ಪೂಜಾರ ಸಹ 23 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 156 ಹಾಗೂ ರೋಹಿತ್ ಶರ್ಮ 6 ರನ್ ಗಳಿಸಿ ನಾಳೆಗೆ (ಭಾನುವಾರ) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Kohli elects to bat against Sri Lanka in third Test

ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಮೂರನೇ ಸಿಡಿಸಿದರು. ಈ ಮೂಲಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 20ನೇ ಶತಕ ಪೂರೈಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಶಿಖರ್ ಧವನ್ 23 ಹಾಗೂ ಚೇತೇಶ್ವರ ಪೂಜಾರ ಸಹ 23 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಜತೆಗೂಡಿದ ಮುರಳಿ ವಿಜಯ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದರು.

ಕೊನೆ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕೈಬಿಟ್ಟು ಶಿಖರ್ ಧವನ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಇನ್ನು ವೇಗಿ ಉಮೇಶ್ ಯಾದವ್ ಬದಲಾಗಿ ಮೊಹಮ್ಮದ್ ಶಮಿಗೆ ಚಾನ್ಸ್ ನೀಡಲಾಗಿದೆ.

Kohli elects to bat against Sri Lanka in third Test

ಅಂತಿಮ ಟೆಸ್ಟ್ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದು ಸರಣಿ ಜಯಿಸುವ ತವಕದಲ್ಲಿದೆ. ಇನ್ನು ಶ್ರೀಲಂಕಾ ಶತಾಯಗತಾಯವಾಗಿ ಸರಣಿಯಲ್ಲಿ ಸಮಬಲ ಸಾಧಿಸಲು ದಿನೇಶ್ ಚಾಂಡಿಮಲ್ ಬಳಗ ಈ ಪಂದ್ಯದಲ್ಲಿ ಗೆಲ್ಲಬೇಕು ಎನ್ನುವ ಹಂಬಲದಲ್ಲಿ.

ತಂಡ ಇಂತಿದೆ:

India: Shikhar Dhawan, Murali Vijay, Cheteshwar Pujara, Virat Kohli (C), Ajinkya Rahane, Rohit Sharma, Ravichandran Ashwin, Wriddhiman Saha (W), Ravindra Jadeja, Mohammed Shami, Ishant Sharma

Sri Lanka: Sadeera Samarawickrama, Dimuth Karunaratne, Roshen Silva, Angelo Mathews, Dinesh Chandimal (C), Niroshan Dickwella (W), Dhananjaya de Silva, Dilruwan Perera, Lakshan Sandakan, Lahiru Gamage, Suranga Lakmal

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X