ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ರಾಡ್ಮನ್ ನಂತರ ಗ್ರೇಟೆಸ್ಟ್ ಎನಿಸಬಲ್ಲ ಅರ್ಹತೆ ಈ ಭಾರತೀಯನಿಗೆ ಮಾತ್ರ: ಸಂಗಕ್ಕರ

Virat Kohli Can Become Greatest After Bradman: Kumar Sangakkara

ವಿಶ್ವ ಕ್ರಿಕೆಟ್‌ನಲ್ಲಿ ಡಾನ್ ಬ್ರಾಡ್ಮನ್ ಸರ್ವಶ್ರೇಷ್ಠ ಆಟಗಾರ ಎಂದು ಕರೆಸಿಕೊಳ್ಳುತ್ತಾರೆ. ತಾನಾಡಿದ ಪಂದ್ಯಗಳಲ್ಲಿ ಬ್ರಾಡ್ಮನ್ ಮಾಡಿದ ಸಾಧನೆಗೆ ಆ ಸ್ಥಾನದಲ್ಲಿ ಬ್ರಾಡ್ಮನ್ ಈ ಉನ್ನತ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಕ್ರಿಕೆಟ್‌ನ ದಾಖಲೆಯಲ್ಲಿ ಸಚಿನ್ ತೆಂಡೂಲ್ಕರ್ ಬ್ರಾಡ್ಮನ್ ಅವರ ಹಲವು ದಾಖಲೆಗಳನ್ನು ಮೀರಿ ನಿಂತರೂ ಬ್ರಾಡ್ಮನ್‌ ಅವರ ಗ್ರೇಟೆಸ್ಟ್ ಪಟ್ಟ ಅವರಲ್ಲೇ ಉಳಿದುಕೊಂಡಿದೆ.

'ಸುಶಾಂತ್ ಸಾವು ಧೋನೀನ ಮೂಕನನ್ನಾಗಿಸಿದೆ': ನಿರ್ಮಾಪಕ ಅರುಣ್ ಪಾಂಡೆ'ಸುಶಾಂತ್ ಸಾವು ಧೋನೀನ ಮೂಕನನ್ನಾಗಿಸಿದೆ': ನಿರ್ಮಾಪಕ ಅರುಣ್ ಪಾಂಡೆ

ಆದರೆ ಈಗ ಭಾರತೀಯ ಕ್ರಿಕೆಟಿಗನಿಗೆ ಬ್ರಾಡ್ಮನ್ ದಾಖಲೆ ಮೀರಿ ನಿಲ್ಲುವ ಅರ್ಹತೆಯಿದೆ ಎಂದು ದಿಗ್ಗಜ ಕ್ರಿಕೆಟಿಗನೇ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯನ್ನು ನೀಡಿದ್ದು ಶ್ರೀಲಂಕಾ ಕ್ರಿಕೆಟ್‌ನ ಮಾಜಿ ಆಟಗಾರ ಕುಮಾರ್ ಸಂಗಕ್ಕರ. ಅಂದಹಾಗೆ ಸಂಗಕ್ಕರ ಹೇಳಿದ ಆ ಶ್ರೇಷ್ಠ ಆಟಗಾರ ಯಾರು? ಆ ಕ್ರಿಕೆಟಿಗನ ಬಗ್ಗೆ ಏನೆಲ್ಲಾ ಹೇಳಿದರು ಸಂಗಕ್ಕರ ಮುಂದೆ ಓದಿ..

ನೋ ಡೌಟ್ ಆತ ವಿರಾಟ್ ಕೊಹ್ಲಿಯೇ

ನೋ ಡೌಟ್ ಆತ ವಿರಾಟ್ ಕೊಹ್ಲಿಯೇ

ಹೌದು.. ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕರ ಹೀಗೆ ಹಾಡಿ ಹೊಗಳಿರುವ ಆಟಗಾರ ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಬ್ರಾಡ್ಮನ್ ನಂತರ ವಿಶ್ವ ಕ್ರಿಕೆಟ್‌ನಲ್ಲಿ ಸರ್ವಶ್ರೇಷ್ಠ ಕ್ರಿಕೆಟಿಗ ಎನಿಸಿಕೊಳ್ಳುವ ಸಾಮರ್ಥ್ಯ ವಿರಾಟ್ ಕೊಹ್ಲಿ ಅವರಲ್ಲಿ ಇದೆ ಎಂದು ಸಂಗಕ್ಕರ ಹೇಳಿದ್ದಾರೆ

ದಂಗು ಬಡಿಸುತ್ತೆ ಕೊಹ್ಲಿಯ ರನ್ ಹಸಿವು

ದಂಗು ಬಡಿಸುತ್ತೆ ಕೊಹ್ಲಿಯ ರನ್ ಹಸಿವು

"ವಿರಾಟ್‌ ಕೊಹ್ಲಿ ರನ್‌ ಹಸಿವು ನಿಜಕ್ಕೂ ದಂಗುಬಡಿಸುತ್ತದೆ. 32 ವರ್ಷ ಪೂರ್ತಿಯಾಗುವ ಮೊದಲೇ ಅವರು ಏಕದಿನದಲ್ಲಿ 12 ಸಾವಿರದಷ್ಟು ರನ್‌ ಪೇರಿಸಿಯಾಗಿದೆ. ಅವರು ದೈಹಿಕವಾಗಿ, ಮಾನಸಿಕವಾಗಿ ಬಹಳ ಗಟ್ಟಿಗ. ಆಟದಲ್ಲಿ ತೋರುವ ನಿಷ್ಠೆ, ಬದ್ಧತೆ ಅಮೋಘ. ಹೀಗಾಗಿ ಡಾನ್‌ ಬ್ರಾಡ್‌ಮನ್‌ ಅನಂತರದ ಸ್ಥಾನವನ್ನು ಅಲಂಕರಿಸುವ ಎಲ್ಲ ಯೋಗ್ಯತೆ ಕೊಹ್ಲಿ ಅವರಲ್ಲಿದೆ' ಎಂದು ಕುಮಾರ ಸಂಗಕ್ಕರ "ಆರ್‌ಕೆ ಶೋ'ದಲ್ಲಿ ಹೇಳಿದರು.

'ವಿರಾಟ್ ಅಪರೂಪದ ತಳಿ'

'ವಿರಾಟ್ ಅಪರೂಪದ ತಳಿ'

ಕುಮಾರ್ ಸಂಗಕ್ಕರ ವಿರಾಟ್ ಕೊಹ್ಲಿಯನ್ನು ಕ್ರಿಕೆಟ್‌ನ ಅಪರೂಪದ ತಳಿ ಎಂದು ಬಣ್ಣಿಸಿದ್ದಾರೆ. ತಾನು ಆಡುವ ಜೊತೆಗೆ ಸಹ ಆಟಗಾರರಲ್ಲೂ ಸ್ಪೂರ್ತಿಯನ್ನು ತುಂಬುವ ವಿಶೇಷ ಗುಣಹೊಂದಿದ್ದಾರೆ. ತನ್ನೊಳಗಿನ ಭಾವನೆಯನ್ನು ಹೊರಗೆಡವಲು ಹಿಂದೆ ಮುಂದೆ ನೋಡುವುದಿಲ್ಲ. ಅವರ ನಾಯಕತ್ವ ಕೂಡ ಅದ್ಭುತ ಮಟ್ಟದಲ್ಲಿದೆ ಎಂದು ಸಂಗಕ್ಕರ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ.

ದಾಖಲೆ ಬೆನ್ನಟ್ಟುತ್ತಿರುವ ಕೊಹ್ಲಿ

ದಾಖಲೆ ಬೆನ್ನಟ್ಟುತ್ತಿರುವ ಕೊಹ್ಲಿ

ಪ್ರಸಕ್ತ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯಲ್ಲೂ ಶ್ರೇಷ್ಠ ಆಟಗಾರ ಎನಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ 11,867 ರನ್ ಗಳಿಸಿದ್ದು 43 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಕೊಹ್ಲಿ 7240 ರನ್ ಪೇರಿಸಿದ್ದಾರೆ. ಇದರಲ್ಲಿ 27 ಶತಕ ಸೇರಿದೆ. ಒಟ್ಟಾರೆಯಾಗಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ಸಿಡಿಸಿ ಮುನ್ನುಗ್ಗುತ್ತಿದ್ದಾರೆ.

Story first published: Monday, June 15, 2020, 15:43 [IST]
Other articles published on Jun 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X