ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಚೇಸಿಂಗ್ ಕಿಂಗ್' ಕೊಹ್ಲಿ ಶತಕ ಬಾರಿಸಿ, ಮುರಿದ ದಾಖಲೆಗಳಿವು

irat Kohli Records and Achievement after 1st ODI against West Indies

ಗುವಾಹಟಿ, ಅಕ್ಟೋಬರ್ 23: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ 'ಚೇಸಿಂಗ್ ಕಿಂಗ್' ಕೊಹ್ಲಿ ಅವರು ಭರ್ಜರಿ ಶತಕ ಗಳಿಸಿ ಮಿಂಚಿದ್ದಾರೆ. 'ಹಿಟ್ ಮ್ಯಾನ್ ' ರೋಹಿತ್ ಶರ್ಮ ಆಕರ್ಷಕ ಶತಕ ಬಾರಿಸಿ ತಂಡದ ಜಯಕ್ಕೆ ತಮ್ಮ ಕೊಡುಗೆ ನೀಡಿದರು.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನೀಡಿದ 323ರನ್ ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಟೀಂ ಇಂಡಿಯಾಕ್ಕೆ ಮತ್ತೊಮ್ಮೆ ಚೇಸಿಂಗ್ ಮಾಡುವುದರಲ್ಲಿ ನಿಷ್ಣಾತರಾಗಿರುವ ನಾಯಕ ಕೊಹ್ಲಿ ಆಸರೆಯಾದರು.

ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ

ಕೊಹ್ಲಿ ತಕ್ಕ ಸಾಥ್ ನೀಡಿದ ರೋಹಿತ್ ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ತಂಡಕ್ಕೆ 8 ವಿಕೆಟ್ ಗಳ ಸುಲಭ ಜಯ ಲಭಿಸಿತು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತಕ್ಕೆ 1-0 ಅಂತರ ಮುನ್ನಡೆ ಸಿಕ್ಕಿತು.

ಎರಡನೇ ವಿಕೆಟ್ ಗೆ ಕೊಹ್ಲಿ ಹಾಗೂ ರೋಹಿತ್ 246ರನ್ ಗಳ ಜೊತೆಯಾಟ ಸಾಧಿಸಿದರು. 71 ಎಸೆತಗಳಲ್ಲಿ ತಮ್ಮ 36ನೇ ಶತಕ ಪೂರೈಸಿದ ಕೊಹ್ಲಿ ಅವರು ಹಲವು ದಾಖಲೆಗಳನ್ನು ಮುರಿದರು. ಕೊಹ್ಲಿ ಸಾಧನೆ ಹಾಗೂ ಅವರು ಮುರಿದ ಹಲವು ದಾಖಲೆಗಳ ವಿವರ ಮುಂದಿದೆ...

ಚೇಸಿಂಗ್ ಮಾಸ್ಟರ್ ಕೊಹ್ಲಿ 22 ಶತಕ

ಚೇಸಿಂಗ್ ಮಾಸ್ಟರ್ ಕೊಹ್ಲಿ 22 ಶತಕ

ರನ್ ಚೇಸಿಂಗ್ ನಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದರೆ ಭಾರತಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂಬ ಮಾತು ಸುಳ್ಳಲ್ಲ. ಇಲ್ಲಿ ತನಕ 22 ಬಾರಿ ನೂರರ ಗಡಿ ದಾಟಿದ್ದಾರೆ. ಈ ಪೈಕಿ 20 ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿದೆ.
* ಚೇಸಿಂಗ್ ನಲ್ಲಿ ಕೊಹ್ಲಿ 20 ಶತಕ ಬಾರಿಸಿದ್ದಾರೆ ಹಾಗು ತಂಡ ಗೆಲುವು ಸಾಧಿಸಿದೆ. ಈ ರೀತಿ ಯಶಸ್ಸು ಸಿಕ್ಕಿದ್ದು ಕೊಹ್ಲಿ ಶತಕ ಗಳಿಸಿದ್ದಾಗ ಮಾತ್ರ.
* ಒಟ್ಟಾರೆ, ಟೀಂ ಇಂಡಿಯಾ ಚೇಸ್​ ಮಾಡಿದ ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ ಒಟ್ಟು 22 ಶತಕಗಳನ್ನ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು 17 ಶತಕ ಗಳಿಸಿದ್ದರು.

ತ್ವರಿತ ಗತಿಯಲ್ಲಿ 60 ಶತಕ ಗಳಿಕೆ

ತ್ವರಿತ ಗತಿಯಲ್ಲಿ 60 ಶತಕ ಗಳಿಕೆ

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತ್ವರಿತ ಗತಿಯಲ್ಲಿ ಶತಕ ಗಳಿಸಿದ್ದ ದಾಖಲೆ ಬರೆದಿದ್ದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ. ಕೊಹ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತರದ ಲೆಕ್ಕಾಚಾರದಂತೆ 36 ಏಕದಿನ ಅಂತಾರಾಷ್ಟ್ರೀಯ ಶತಕ ಹಾಗೂ 34 ಟೆಸ್ಟ್ ಶತಕ ಗಳಿಸಿದ್ದಾರೆ. ಟಿ20ಯಲ್ಲಿ ಇನ್ನೂ ಶತಕ ಗಳಿಸಬೇಕಿದೆ.

ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಎರಡು ಕುತೂಹಲಕಾರಿ ಅಂಶಗಳು!

ಅತಿ ಹೆಚ್ಚು ಏಕದಿನ ಕ್ರಿಕೆಟ್ ಶತಕ

ಅತಿ ಹೆಚ್ಚು ಏಕದಿನ ಕ್ರಿಕೆಟ್ ಶತಕ

ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 49 ಶತಕ ಗಳಿಸಿದ್ದಾರೆ. ಕೊಹ್ಲಿ ಅವರು ಸದ್ಯ್ 36 ಶತಕ ಗಳ್ಸಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
31 -ನಾಯಕನಾಗಿ ಕೊಹ್ಲಿ ಗಳಿಸಿದ ಶತಕಗಳ ಸಂಖ್ಯೆ ಇದಾಗಿದೆ. 14 ಏಕದಿನ ಕ್ರಿಕೆಟ್ ಶತಕ ಹಾಗೂ 13 ಟೆಸ್ಟ್ ಕ್ರಿಕೆಟ್ ಶತಕ ಇದರಲ್ಲಿವೆ.

ನಾಯಕನಾಗಿ 14 ಶತಕ ದಾಖಲೆ

ನಾಯಕನಾಗಿ 14 ಶತಕ ದಾಖಲೆ

ನಾಯಕನಾಗಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (22) ಹೆಸರಿನಲ್ಲಿದೆ. ಕೊಹ್ಲಿ ಅವರು 14ನೇ ಶತಕ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ (13) ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.

29ನೇಶತಕ- ಮೂರನೇ ಕ್ರಮಾಂಕದಲ್ಲಿ ಆಡಿ 29 ಶತಕ ಗಳಿಸಿರುವ ಕೊಹ್ಲಿ ಅವರು 7ನೇ ಕ್ರಮಾಂಕದಲ್ಲಿ ಆಡಿ 7 ಶತಕ ಗಳಿಸಿರುವುದು ವಿಶೇಷ.

ಭಾರತ vs ವಿಂಡೀಸ್: 24ನೇ ಟೆಸ್ಟ್ ಶತಕ ಪೂರೈಸಿದ ನಾಯಕ ವಿರಾಟ್ ಕೊಹ್ಲಿ

ಕೊಹ್ಲಿ ಗಳಿಸಿದ ಇನ್ನಷ್ಟು ದಾಖಲೆಗಳು

ಕೊಹ್ಲಿ ಗಳಿಸಿದ ಇನ್ನಷ್ಟು ದಾಖಲೆಗಳು

24-ಏಷ್ಯಾ ನೆಲದಲ್ಲಿ ಕೊಹ್ಲಿ ಗಳಿಸಿದ ಒಟ್ಟು ಶತಕಗಳ ಸಂಖ್ಯೆ. ಅಫ್ರಿಕಾದಲ್ಲಿ 4, ಯುರೋಪಿನಲ್ಲಿ 1, ಕೆರಿಬಿಯನ್ ನಲ್ಲಿ 4, ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಲ್ಲಿ 5 ಶತಕಗಳಿಸಿದ್ದಾರೆ.

8- 2018ರಲ್ಲಿ ಒಟ್ಟು ಗಳಿಸಿದ ಶತಕಗಳ ಸಂಖ್ಯೆ. 4 ಟೆಸ್ಟ್ ಶತಕ ಹಾಗೂ 4 ಒಡಿಐ ಶತಕ.

5- ವೆಸ್ಟ್ ಇಂಡೀಸ್ ವಿರುದ್ಧ 5 ಏಕದಿನ ಶತಕಗಳಿಸಿದ್ದಾರೆ. 3 ಭಾರತದಲ್ಲಿ ಮಿಕ್ಕೆರಡು ಕೆರಿಬಿಯನ್ ದ್ವೀಪದಲ್ಲಿ ಗಳಿಸಿದ್ದಾರೆ.

Story first published: Saturday, October 27, 2018, 17:22 [IST]
Other articles published on Oct 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X