ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾರ್ಚ್‌ 2023ಕ್ಕೆ ಮಹಿಳಾ ಐಪಿಎಲ್‌ ಲೀಗ್‌: 5 ರಿಂದ 6 ತಂಡಗಳ ನಡುವೆ ಪೈಪೋಟಿ!

Womens IPL 2023

ಪುರುಷರ ಮಾದರಿಯಲ್ಲೇ ಮಹಿಳಾ ಐಪಿಎಲ್ ಶುರು ಮಾಡಬೇಕು ಎಂಬ ಕೂಗಿಗೆ ಮತ್ತಷ್ಟು ಬಲ ಬಂದಿದೆ. 2023ರಿಂದ ಮಹಿಳಾ ಐಪಿಎಲ್‌ ಚೊಚ್ಚಲ ಟೂರ್ನಿಗೆ ಬಿಸಿಸಿಐ ತೆರೆಮರೆಯಲ್ಲಿಯೇ ತಯಾರಿ ನಡೆಸಿದೆ.

ಮೂಲಗಳ ವರದಿ ಪ್ರಕಾರ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಮಹಿಳಾ ಐಪಿಎಲ್ ಟೂರ್ನಮೆಂಟ್ ನಡೆಸಲು ವಿಶ್ವದ ಕ್ರಿಕೆಟ್ ಬಿಗ್‌ ಬಾಸ್ ಬಿಸಿಸಿಐ ಮುಂದಾಗಿದ್ದು, ಮಾರ್ಚ್‌ ಮೊದಲ ವಾರದಿಂದಲೇ ಟೂರ್ನಿಗೆ ಕಿಕ್ ಸ್ಟಾರ್ಟ್ ಸಿಗುವ ಸಾಧ್ಯತೆಯಿದೆ.

ಪಿಟಿಐ ವರದಿ ಪ್ರಕಾರ ಮಹಿಳಾ ಐಪಿಎಲ್‌ ಚೊಚ್ಚಲ ಸೀಸನ್‌ನಲ್ಲಿ ಐದು ಅಥವಾ ಆರು ತಂಡಗಳು ಭಾಗವಹಿಸಲಿದ್ದು, ಇಡೀ ತಿಂಗಳು ಟೂರ್ನಮೆಂಟ್ ನಡೆಯಲಿದೆ ಎಂಬುದು ತಿಳಿದುಬಂದಿದೆ.

2018ರಲ್ಲಿ ಕೇವಲ ಎರಡು ಮಹಿಳಾ ತಂಡಗಳ ನಡುವೆ ಸ್ಪರ್ಧೆ

2018ರಲ್ಲಿ ಕೇವಲ ಎರಡು ಮಹಿಳಾ ತಂಡಗಳ ನಡುವೆ ಸ್ಪರ್ಧೆ

ಬಿಸಿಸಿಐ ಮೊದಲ ಬಾರಿಗೆ ಈ ಐಪಿಎಲ್ ಜೊತೆಯಲ್ಲಿಯೇ ಮಹಿಳೆಯರಿಗೆ ಟಿ20 ಪಂದ್ಯಾವಳಿಯನ್ನು 2018 ರಲ್ಲಿ ಆಯೋಜಿಸಿದಾಗ ಕೇವಲ ಎರಡು ತಂಡಗಳು ಭಾಗವಹಿಸಿದ್ದು, ಒಂದು ಪಂದ್ಯದೊಂದಿಗೆ ಪ್ರಾರಂಭಿಸಿತು. 2019 ರಲ್ಲಿ, ಬಿಸಿಸಿಐ ಮತ್ತೊಂದು ಹೊಸ ತಂಡವನ್ನು ಪರಿಚಯಿಸಿತು, ಅಲ್ಲಿ ಪ್ರತಿ ತಂಡವು ಇನ್ನೊಂದನ್ನು ಒಮ್ಮೆ ಆಡಿತು ಮತ್ತು ಅಗ್ರ ಎರಡು ತಂಡಗಳು ಫೈನಲ್‌ಗೆ ಮುನ್ನಡೆದವು.

2010 ರಲ್ಲಿ, ಟೂರ್ನಿಯನ್ನ ಯುಎಇಯಲ್ಲಿ ನಡೆಸಲಾಯಿತು, ಆದರೆ ಕಳೆದ ವರ್ಷ ಭಾರತದ ಆಸ್ಟ್ರೇಲಿಯಾ ಪ್ರವಾಸದೊಂದಿಗೆ ಘರ್ಷಣೆಗೊಂಡಿದ್ದರಿಂದ ಟೂರ್ನಿ ನಡೆಸಲು ಸಾಧ್ಯವಾಗಲಿಲ್ಲ.

ಆದ್ರೆ 2013ರಲ್ಲಿ ಈ ಟೂರ್ನಿಯನ್ನ ದೊಡ್ಡ ಮಟ್ಟಿಗೆ ನಡೆಸಲು ಬಿಸಿಸಿಐ ಸಿದ್ಧಗೊಂಡಿದೆ. 5-6 ತಂಡಗಳು ಲೀಗ್‌ನಲ್ಲಿ ಸ್ಪರ್ಧಿಸುವ ಮೂಲಕ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದ WIPL ಜಾರಿಯಲ್ಲಿರುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತ-ಪಾಕಿಸ್ತಾನ ತಂಡಗಳ ಬಲದಲ್ಲಿ ಈ ಒಂದು ವ್ಯತ್ಯಾಸವಿದೆ ಎಂದ ಪಾಕ್ ಮಾಜಿ ಕ್ರಿಕೆಟರ್

ಮಾರ್ಚ್‌ನಲ್ಲಿ ಮಹಿಳಾ ಐಪಿಎಲ್ ನಡೆಯುವುದನ್ನ ಖಚಿತ ಪಡಿಸಿದ ಬಿಸಿಸಿಐ ಅಧಿಕಾರಿ

ಮಾರ್ಚ್‌ನಲ್ಲಿ ಮಹಿಳಾ ಐಪಿಎಲ್ ನಡೆಯುವುದನ್ನ ಖಚಿತ ಪಡಿಸಿದ ಬಿಸಿಸಿಐ ಅಧಿಕಾರಿ

ಪಿಟಿಐ ಜೊತೆ ಮಾತನಾಡಿದ ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು, "ಹೌದು, ಮಾರ್ಚ್ ಮೊದಲ ವಾರದಲ್ಲಿ ಮಹಿಳಾ ಐಪಿಎಲ್ ಪ್ರಾರಂಭವಾಗಲಿದೆ ಮತ್ತು ನಾವು ಮೊದಲ ವರ್ಷಕ್ಕೆ ನಾಲ್ಕು ವಾರಗಳ ಅವಧಿಯನ್ನು ಸಿದ್ಧಪಡಿಸಿದ್ದೇವೆ." ಎಂದು ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಕಳೆದೆರಡು ವರ್ಷಗಳಿಂದ ಈ ಟೂರ್ನಿ ಆರಂಭಿಸಲು ಬೇಡಿಕೆಗಳಿದ್ದರೂ, ಮಾಜಿ ಆಟಗಾರರು ಮತ್ತು ವಿವಿಧ ಪಾಲುದಾರರಿಂದ ಪಡೆದ ಡೇಟಾ ಮೂಲಗಳ ದೃಷ್ಟಿಯಿಂದ, ಬಿಸಿಸಿಐ 2023 ರಲ್ಲಿ ಹೊಸ ಸ್ಪರ್ಧೆಯನ್ನು ಪ್ರಾರಂಭಿಸಲು ಆಶಿಸಿದೆ.

ಇತ್ತೀಚೆಗಷ್ಟೇ ಐಪಿಎಲ್‌ ಫೈನಲ್‌ಗೂ ಮುನ್ನ ಮುಕ್ತಾಯಗೊಂಡ ಮಹಿಳಾ ಟಿ20 ಚಾಲೆಂಜ್ ಫೈನಲ್‌ನಲ್ಲಿ ಸೂಪರ್ನೋವಾಸ್ ಮತ್ತು ವೆಲಾಸಿಟಿ ಪಂದ್ಯಕ್ಕೆ 8,621 ಮಂದಿ ಆಗಮಿಸಿದ್ದರು. ಇದು ಆಟವು ಎಷ್ಟು ಅಭಿವೃದ್ಧಿಗೊಂಡಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ.

Asia Cup 2022: ಬಾಂಗ್ಲಾದೇಶ ತಂಡ ಘೋಷಣೆ, ಶಕೀಬ್‌ಗೆ ನಾಯಕತ್ವ ಪಟ್ಟ

ಮಹಿಳಾ ಟಿ20 ವಿಶ್ವಕಪ್‌ ಬಳಿಕ ಐಪಿಎಲ್‌ ನಡೆಸುವ ಯೋಜನೆ

ಮಹಿಳಾ ಟಿ20 ವಿಶ್ವಕಪ್‌ ಬಳಿಕ ಐಪಿಎಲ್‌ ನಡೆಸುವ ಯೋಜನೆ

ಮಹಿಳೆಯರ ಟಿ20 ವಿಶ್ವಕಪ್ ಫೆಬ್ರವರಿ 9 ರಿಂದ 26 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದು, ಶೀಘ್ರದಲ್ಲೇ ಐತಿಹಾಸಿಕ ಮಹಿಳಾ ಐಪಿಎಲ್ ಆಯೋಜಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ, ಉದ್ಘಾಟನಾ ಆವೃತ್ತಿಯಲ್ಲಿ ಕೇವಲ ಐದು ಅಥವಾ ಆರು ತಂಡಗಳು ಇರುತ್ತವೆ ಆದರೆ ಹೂಡಿಕೆದಾರರ ಆಸಕ್ತಿಯನ್ನು ಅವಲಂಬಿಸಿ ಅದನ್ನು ಹೆಚ್ಚಿಸಬಹುದು ಎಂದು ಮೂಲವು ಮತ್ತಷ್ಟು ದೃಢಪಡಿಸಿದೆ. ಸಮಯ ಬಂದಾಗ ತಂಡಗಳ ಹರಾಜು ಪ್ರಕ್ರಿಯೆಯನ್ನೂ ಪ್ರಕಟಿಸಲಾಗುವುದು ಎಂದು ಅವರು ಖಚಿತಪಡಿಸಿದ್ದಾರೆ.

ಈಗಾಗಲೇ ಪುರುಷರ ಐಪಿಎಲ್ ಫ್ರಾಂಚೈಸಿಗಳಾದ ರಾಜಸ್ತಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಬಹಿರಂಗವಾಗಿಯೇ ಮಹಿಳಾ ಐಪಿಎಲ್ ತಂಡ ಖರೀದಿಗೆ ಆಸಕ್ತಿ ವಹಿಸಿರುವುದಾಗಿ ತಿಳಿಸಿವೆ. ಹೀಗಾಗಿ ಮಹಿಳಾ ಐಪಿಎಲ್ ಲೀಗ್ ಎಂಬ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿವೆ.

Story first published: Sunday, August 14, 2022, 17:11 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X