ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಬಾಂಗ್ಲಾದೇಶ ತಂಡ ಘೋಷಣೆ, ಶಕೀಬ್‌ಗೆ ನಾಯಕತ್ವ ಪಟ್ಟ

Shakib al hasan

ಆಗಸ್ಟ್‌ 27ರಿಂದ ಪ್ರಾರಂಭಗೊಳ್ಳಲಿರುವ ಏಷ್ಯಾಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಿದೆ. ಒಟ್ಟು 17 ಆಟಗಾರರನ್ನೊಳಗೊಂಡ ತಂಡವನ್ನ ಬಾಂಗ್ಲಾ ಘೋಷಣೆ ಮಾಡಿದ್ದು, 2017ರ ನಂತರ ಶಕೀಬ್ ಅಲ್ ಹಸನ್ ಟಿ20 ಫಾರ್ಮೆಟ್‌ಗೆ ನಾಯಕರಾಗಿ ತಂಡಕ್ಕೆ ಮರಳಿದ್ದಾರೆ.

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ತಮೀಮ್ ಇಕ್ಬಾಲ್ ನಾಯಕತ್ವದ ಬಾಂಗ್ಲಾದೇಶವು ಹೀನಾಯ ಸೋಲು ಕಂಡಿತು. ಹೀಗಾಗಿ ಬಾಂಗ್ಲಾ ಹುಲಿಗಳು ಏಷ್ಯಾಕಪ್‌ನಲ್ಲಿ ತಮ್ಮ ಗೌರವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಹೀಗಾಗಿ ಹೇಗಾದ್ರೂ ಮಾಡಿ ಉತ್ತಮ ಪ್ರದರ್ಶನ ನೀಡಬೇಕೆಂದು ಪಣತೊಟ್ಟಿದ್ದು, ತುಂಬಾ ಎಚ್ಚರಿಕೆಯಿಂದ ಬಾಂಗ್ಲಾ ಕ್ರಿಕೆಟ್ ಬೋರ್ಡ್‌ ತಂಡವನ್ನ ಘೋಷಣೆ ಮಾಡಿತು.

ಬಾಂಗ್ಲಾ ವಿರುದ್ಧ ಏಕದಿನ, ಟಿ20 ಸರಣಿ ಗೆದ್ದಿದ್ದ ಜಿಂಬಾಬ್ವೆ

ಬಾಂಗ್ಲಾ ವಿರುದ್ಧ ಏಕದಿನ, ಟಿ20 ಸರಣಿ ಗೆದ್ದಿದ್ದ ಜಿಂಬಾಬ್ವೆ

ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗಿದ್ದ ಆತಿಥೇಯ ಜಿಂಬಾಬ್ವೆ ತಂಡವು, ಪ್ರವಾಸಿ ತಂಡಕ್ಕೆ ಶಾಕ್ ನೀಡಿತ್ತು. ಏಕದಿನ ಸರಣಿಯನ್ನೂ ಕೂಡ ಒಂದು ಪಂದ್ಯ ಬಾಕಿ ಇರುವಂತೆಯೇ ಜಿಂಬಾಬ್ವೆ ತನ್ನದಾಗಿಸಿಕೊಂಡಿತು. ಈ ಮೂಲಕ ಸರಣಿ ಗೆಲುವಿನ ಕನಸು ಹೊತ್ತಿದ್ದ ಬಾಂಗ್ಲಾದೇಶವು ತೀವ್ರ ಮುಖಭಂಗ ಎದುರಿಸಬೇಕಾಯಿತು.

ಏಷ್ಯಾಕಪ್ ಸಮೀಪದಲ್ಲಿಯೇ ಇಂತಹ ಸೋಲನ್ನ ಅರಗಿಸಿಕೊಳ್ಳಲಾಗದ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಮತ್ತೆ ಶಕೀಬ್ ಅಲ್ ಹಸನ್‌ಗೆ ನಾಯಕತ್ವ ಪಟ್ಟ ಕಟ್ಟಿದೆ. ಬಾಂಗ್ಲಾದೇಶದ ಹಿಂದಿನ ಜಿಂಬಾಬ್ವೆ ಪ್ರವಾಸದಲ್ಲಿ ಬೆರಳಿನ ಮುರಿತದಿಂದ ಹೊರಗುಳಿಯುವ ಮೊದಲು ನೂರುಲ್ ಹಸನ್ ಟಿ20 ನಲ್ಲಿ ದೀರ್ಘಕಾಲದ ವೈಟ್ ಬಾಲ್ ನಾಯಕ ಮಹಮ್ಮದುಲ್ಲಾ ಅವರ ಬದಲು ಆಯ್ಕೆಯಾಗಿದ್ದರು.

Ind vs Pak: ಶೇ. 100ರಷ್ಟು ಗೆಲುವಿನ ದಾಖಲೆ ಹೊಂದಿರುವ 3 ನಾಯಕರು

ಶಕೀಬ್ ಅಲ್ ಹಸನ್ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನ

ಶಕೀಬ್ ಅಲ್ ಹಸನ್ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನ

ಶಕೀಬ್ ಅಲ್ ಹಸನ್ ನೇತೃತ್ವದ ತಂಡವು ಸ್ಟಾರ್ ಆಟಗಾರ ಮುಷ್ಫೀಕರ್ ರಹೀಮ್, ಮಹಮುತುಲ್ಲಾ, ಮುಸ್ತಾಫಿಜುರ್ ರಹಮಾನ್, ತಸ್ಕಿನ್ ಅಹ್ಮದ್, ಅನಾಮುಲ್ ಹಕ್, ಮೆಘಿದಿ ಹಸನ್ ಅವರಂತಹ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿದೆ. ಏಷ್ಯಾ ಕಪ್ ಇತಿಹಾಸವನ್ನು ನೋಡಿದರೆ, ಬಾಂಗ್ಲಾದೇಶ ತಂಡವು ಕಳೆದ ಎಲ್ಲಾ ಮೂರು ಟೂರ್ನಿಗಳಲ್ಲೂ ಫೈನಲ್ ತಲುಪಿದೆ.

2012, 2016 ಮತ್ತು 2018ರ ಏಷ್ಯಾಕಪ್ ಟೂರ್ನಿಗಳಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿರುವ ಬಾಂಗ್ಲಾದೇಶ ತಂಡವು ಒಮ್ಮೆಯು ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದ್ರೆ ಈ ಬಾರಿ ಫೈನಲ್ ತಲುಪುವುದು ಅಷ್ಟು ಸುಲಭದ ಮಾತಲ್ಲ.

ಬಾಂಗ್ಲಾದೇಶ ಏಷ್ಯಾ ಕಪ್ ಮುಖ್ಯ ಸುತ್ತಿನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಕ್ವಾಲಿಫೈಯರ್ ಜೊತೆಗೆ ಸ್ಪರ್ಧಿಸಲಿದೆ. ಆಗಸ್ಟ್ 20 ರಂದು ಪ್ರಾರಂಭವಾಗುವ ಅರ್ಹತಾ ಪಂದ್ಯಾವಳಿಯಲ್ಲಿ ಅರ್ಹತಾ ತಂಡವನ್ನ ಬಹಿರಂಗಪಡಿಸಲಾಗುತ್ತದೆ.

ನಡೆದಿರುವ ಒಟ್ಟು 13 ಏಷ್ಯಾಕಪ್ ಟೂರ್ನಿಗಳಲ್ಲಿ ಭಾರತದ ನಾಯಕರಾಗಿದ್ದವರು ಯಾರು? ಗೆದ್ದವರೆಷ್ಟು?

ಬೆಟ್ಟಿಂಗ್ ಕಂಪನಿಯೊಂದಿಗಿನ ಒಪ್ಪಂದ ರದ್ದುಗೊಳಿಸಿದ ಶಕೀಬ್

ಬೆಟ್ಟಿಂಗ್ ಕಂಪನಿಯೊಂದಿಗಿನ ಒಪ್ಪಂದ ರದ್ದುಗೊಳಿಸಿದ ಶಕೀಬ್

ಬಾಂಗ್ಲಾದೇಶದ ಅತಿದೊಡ್ಡ ಕ್ರಿಕೆಟ್ ತಾರೆ ಶಕೀಬ್ ಅಲ್ ಹಸನ್ ಇತ್ತೀಚೆಗಷ್ಡೇ ವಿವಾದಕ್ಕೆ ಕಾರಣವಾಗಿದ್ದರು. ದೇಶದ ಕ್ರಿಕೆಟ್ ಮಂಡಳಿಯು ಕ್ರೀಡಾ ಬೆಟ್ಟಿಂಗ್ ಕಂಪನಿಯನ್ನು ಅನುಮೋದಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ತನಿಖೆ ಮಾಡಲು ನಿರ್ಧರಿಸಿತ್ತು. ಶಕೀಬ್ ಅಲ್ ಹಸನ್ ಬೆಟ್ಟಿಂಗ್ ಕಂಪನಿಯೊಂದಿಗೆ ಒಪ್ಪಂದ ರದ್ದುಗೊಳಿಸಿದ್ರೆ ಮಾತ್ರ ತಂಡದಲ್ಲಿ ಮುಂದುವರಿಸುವುದಾಗಿ ಕ್ರಿಕೆಟ್ ಬೋರ್ಡ್ ತಿಳಿಸಿತು. ಹೀಗಾಗಿ ಶಕೀಬ್ ಒಪ್ಪಂದವನ್ನ ರದ್ದುಗೊಳಿಸಿದ ಬಳಿಕವಷ್ಟೇ ಮಂಡಳಿಯುವ ಅವರನ್ನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಬಾಂಗ್ಲಾದೇಶ ಏಷ್ಯಾಕಪ್ ಸ್ಕ್ವಾಡ್‌

ಬಾಂಗ್ಲಾದೇಶ ಏಷ್ಯಾಕಪ್ ಸ್ಕ್ವಾಡ್‌

ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಜ್ಫಿಕುರ್ ರಹೀಮ್, ಅಫೀಬ್ ಹುಸೇನ್, ಮೊಸಾದೆಗ್ ಹುಸೇನ್, ಮಹಮುದುಲ್ಲಾ, ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್, ಸಬೀರ್ ರೆಹಮಾನ್, ಮೆಹದಿ ಹಸನ್ ಮಿರಾಜ್, ಇಬಾದತ್ ಹುಸೇನ್, ಪರ್ವೇಜ್ ಹುಸೇನ್, ನೂರುಲ್ ಹಸನ್

Story first published: Sunday, August 14, 2022, 13:43 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X