T20 World Cup: ಈ ಐದು ತಂಡಗಳ ವಿರುದ್ಧ ವಿಶ್ವಕಪ್‌ನಲ್ಲಿ ಇದುವರೆಗೂ ಟೀಂ ಇಂಡಿಯಾ ಸೋಲು ಕಂಡಿಲ್ಲ

ಟೀಮ್ ಇಂಡಿಯಾ ತನ್ನ ಟಿ20 ವಿಶ್ವಕಪ್ 2022 ಅಭಿಯಾನವನ್ನು ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪ್ರಾರಂಭಿಸಲಿದೆ. 2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು.

ಪ್ರಸ್ತುತ ಟಿ20 ವಿಶ್ವಕಪ್‌ ಸ್ಕ್ವಾಡ್‌ನಲ್ಲಿರುವ ಈ ನಾಲ್ವರು ಮುಂದಿನ ಚುಟುಕು ವಿಶ್ವಕಪ್‌ ಆಡೋದೆ ಅನುಮಾನ!ಪ್ರಸ್ತುತ ಟಿ20 ವಿಶ್ವಕಪ್‌ ಸ್ಕ್ವಾಡ್‌ನಲ್ಲಿರುವ ಈ ನಾಲ್ವರು ಮುಂದಿನ ಚುಟುಕು ವಿಶ್ವಕಪ್‌ ಆಡೋದೆ ಅನುಮಾನ!

ಕಳೆದ ವರ್ಷ ಗೆಲುವು ಸಾಧಿಸುವವರೆಗೂ ಪಾಕಿಸ್ತಾನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಒಂದೇ ಒಂದು ಗೆಲುವನ್ನು ಕಾಣಲು ಸಾಧ್ಯವಾಗಿರಲಿಲ್ಲ. ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಮುಂಬರುವ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದ 5 ತಂಡಗಳು ಭಾಗವಹಿಸುತ್ತಿವೆ.

2010ರ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನದ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿತು. ಮೊದಲನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಜಯವನ್ನು ದಾಖಲಿಸಿತ್ತು. ಎರಡು ವರ್ಷಗಳ ನಂತರ ಭಾರತವು ಗುಂಪು ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 23 ರನ್‌ಗಳಿಂದ ಸೋಲಿಸಿತು.

ಭಾರತ ಮತ್ತು ಅಫ್ಘಾನಿಸ್ತಾನ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿಯೂ ಕಾದಾಡಿದವು, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 66 ರನ್‌ಗಳ ಜಯ ಸಾಧಿಸಿತು.

ಬಾಂಗ್ಲಾದೇಶ ವಿರುದ್ಧ ಭಾರತ 3-0 ಸೋಲು

ಬಾಂಗ್ಲಾದೇಶ ವಿರುದ್ಧ ಭಾರತ 3-0 ಸೋಲು

ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಮೂರು ಪಂದ್ಯಗಳನ್ನಾಡಿದ್ದು, ಮೂರು ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವಿನ ದಾಖಲೆ ಹೊಂದಿದೆ. 2009 ರಲ್ಲಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಮೊದಲ ಬಾರಿಗೆ ಬಾಂಗ್ಲಾದೇಶದ ವಿರುದ್ಧ ಹೋರಾಡಿದರು. ಅವರು ಆ ಪಂದ್ಯವನ್ನು 25 ರನ್‌ಗಳಿಂದ ಗೆದ್ದರು.

ಐದು ವರ್ಷಗಳ ನಂತರ ಭಾರತ ಎಂಟು ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. 2016 ರಲ್ಲಿ, ಸೂಪರ್ 10 ಸುತ್ತಿನಲ್ಲಿ ಬಾಂಗ್ಲಾದೇಶವು ಭಾರತದ ವಿರುದ್ಧ ಗೆಲ್ಲುವ ಹಂತದಲ್ಲಿದ್ದರು, ಆದರೆ ಅವರು ಅಂತಿಮವಾಗಿ ಒಂದು ರನ್‌ನಿಂದ ಸೋತರು. ಭಾರತ ಮತ್ತು ಬಾಂಗ್ಲಾದೇಶ ಐಸಿಸಿ ಟಿ20 ವಿಶ್ವಕಪ್ 2022 ಸೂಪರ್ 12 ಸುತ್ತಿನ ಒಂದೇ ಗುಂಪಿನಲ್ಲಿದೆ. ನವೆಂಬರ್ 2 ರಂದು ಅಡಿಲೇಡ್ ಓವಲ್‌ನಲ್ಲಿ ಟಿ20 ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿ ಪರಸ್ಪರ ಸೆಣಸಲಿದ್ದಾರೆ.

ಮೈದಾನದಲ್ಲಿ ಸೆಣೆಸಾಡಲಿದ್ದಾರೆ ನಟರು ಹಾಗೂ ಕ್ರಿಕೆಟ್ ದಿಗ್ಗಜರು: ಟೂರ್ನಿ ಬಗ್ಗೆ ಕಿಚ್ಚ ಸುದೀಪ್, ಕ್ರಿಸ್ ಗೇಲ್ ಅಧಿಕೃತ ಮಾಹಿತಿ

ಟೀಂ ಇಂಡಿಯಾ ವಿರುದ್ಧ ಗೆಲುವು ಕಾಣದ ಐರ್ಲೆಂಡ್

ಟೀಂ ಇಂಡಿಯಾ ವಿರುದ್ಧ ಗೆಲುವು ಕಾಣದ ಐರ್ಲೆಂಡ್

ಭಾರತ ಮತ್ತು ಐರ್ಲೆಂಡ್ ಇತ್ತೀಚೆಗೆ ಪರಸ್ಪರ ದ್ವಿಪಕ್ಷೀಯ ಸರಣಿಯನ್ನು ಆಡಿದ್ದವು. ಐರ್ಲೆಂಡ್‌ ತಂಡವು ಮೆನ್ ಇನ್ ಬ್ಲೂ ವಿರುದ್ಧ ಪಂದ್ಯದ ಯಾವುದೇ ಸ್ವರೂಪದಲ್ಲಿ ಎಂದಿಗೂ ಗೆಲುವು ದಾಖಲಿಸಿಲ್ಲ.

ಎರಡು ತಂಡಗಳು ಟಿ20 ವಿಶ್ವಕಪ್‌ನಲ್ಲಿ ಒಮ್ಮೆ ಸೆಣಸಾಡಿವೆ. ಇದು 2009 ರಲ್ಲಿ, ಗ್ರೂಪ್ ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಎಂಟು ವಿಕೆಟ್‌ಗಳಿಂದ ಐರ್ಲೆಂಡ್ ಅನ್ನು ಸೋಲಿಸಿತು. ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಇಂದಿಗೂ ಅಜೇಯವಾಗಿ ಉಳಿದಿದೆ.

ಟೀಂ ಇಂಡಿಯಾ ವಿರುದ್ಧ ಗೆಲುವು ಕಾಣದ ನಮೀಬಿಯಾ

ಟೀಂ ಇಂಡಿಯಾ ವಿರುದ್ಧ ಗೆಲುವು ಕಾಣದ ನಮೀಬಿಯಾ

ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ಗೆ ನಮೀಬಿಯಾ ಅರ್ಹತೆ ಪಡೆದಿತ್ತು. ಅವರು ಸೂಪರ್ 12 ಸುತ್ತಿಗೆ ಪ್ರವೇಶಿಸಿದರು ಮತ್ತು ಭಾರತದ ವಿರುದ್ಧ ಪಂದ್ಯವನ್ನು ಆಡಿದರು. ನಿರೀಕ್ಷೆಯಂತೆ, ಭಾರತ ತಂಡ ನಮೀಬಿಯಾ ತಂಡವನ್ನು ಸೋಲಿಸಿದರು. ಈ ಬಾರಿ ಕೂಡ ನಮೀಬಿಯಾ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.

ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದರೆ ಈ ವರ್ಷ ಭಾರತ ಮತ್ತು ನಮೀಬಿಯಾ ನಡುವಿನ ಮತ್ತೊಂದು ಪಂದ್ಯಕ್ಕೆ ಅಭಿಮಾನಿಗಳು ಸಾಕ್ಷಿಯಾಗಬಹುದು.

 ಸ್ಕಾಟ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲುವಿನ ದಾಖಲೆ

ಸ್ಕಾಟ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲುವಿನ ದಾಖಲೆ

2007ರ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಟೀಮ್ ಇಂಡಿಯಾದ ಮೊದಲ ಎದುರಾಳಿಯಾಗಿತ್ತು. ಆದರೆ, ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು. 14 ವರ್ಷಗಳ ನಂತರ, 2021 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಸ್ಕಾಟ್ಲೆಂಡ್ ಮತ್ತೆ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಎಂಟು ವಿಕೆಟ್‌ಗಳ ಜಯವನ್ನು ದಾಖಲಿಸಿತು.

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ನವೆಂಬರ್ 6 ರಂದು ಮೆಲ್ಬೋರ್ನ್‌ನಲ್ಲಿ ಟೀಮ್ ಇಂಡಿಯಾದೊಂದಿಗೆ ಮುಖಾಮುಖಿಯಾಗಬಹುದು.

For Quick Alerts
ALLOW NOTIFICATIONS
For Daily Alerts
Story first published: Friday, October 14, 2022, 15:57 [IST]
Other articles published on Oct 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X